ದಿ. 27ರಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ ; ಮರ್ಯಾದಾ ಹತ್ಯೆ ಪ್ರಕರಣದ ಗಾಯಾಳುಗಳ ಆರೋಗ್ಯ ವಿಚಾರಿಸಿದ ಶಾಸಕ ಕೋನರಡ್ಡಿ
ಹುಬ್ಬಳ್ಳಿ 26: ಇನಾಂ ವೀರಾಪೂರ ಗ್ರಾಮದಲ್ಲಿ ನಡೆದ ಮರ್ಯಾದೆ ಹತ್ಯೆ ಪ್ರಕರಣದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿ ಸರ್ಕಾರ ನಿಮ್ಮ ಪರವಾರಿದೆ ದಿ. 27 ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು ಸರ್ಕಾರದಿಂದ ಅಥವಾ ವ್ಯಯಕ್ತಿಕವಾಗಿ ಸಹಾಯ ಸಹಕಾರ ಮಾಡಲು ನಿರ್ಧರಿಸುತ್ತೇವೆ ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು.
ಅವರು ಇಂದು ಹುಬ್ಬಳ್ಳಿ ವಿವೇಕಾನಂದ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆಯ ಪಡೆಯುತ್ತಿರುವವರ ಶ್ರೀಮತಿ ರೇಣುಕಾ ಸುಭಾಸ (ಮರಿಯಪ್ಪ) ದೊಡ್ಡಮನಿ, ವಿವೇಕಾನಂದ ದೊಡ್ಡಮನಿ ಅವರ ಕುಟುಂಬದ ಎಲ್ಲ ಸದಸ್ಯರ ಆರೋಗ್ಯ ವಿಚಾರಿಸಿ ಸಮುದಾಯದ ಮುಖಂಡರೊಂದಿಗೆ ಸಮಾಲೋಚಿಸಿ ಮಾತನಾಡಿದ ಅವರು ಇಂತಹ ಘಟನೆಗಳು ನಡೆದಿರುವದು ದುರದೃಷ್ಟಕರ, ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಕೃತ್ಯವಾಗಿದೆ ಎಂದರು, ತಮ್ಮ ಸಲುವಾಗಿ ತಾಲ್ಲೂಕಾ ಹಾಗೂ ಜಿಲ್ಲಾ ಆಡಳಿತ, ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಗೃಹ ಸಚಿವರಾದ ಜಿ. ಪರಮೇಶ್ವರ, ಕಾರ್ಮಿಕ ಹಾಗೂ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರ ಗಮನಕ್ಕೆ ತಂದು ಇದಕ್ಕೆ ಪರಿಹಾರ ಹಾಗೂ ಸೂಕ್ತ ಕ್ರಮ ತೆಗೆದುಕೊಳ್ಳಲು ಅವರ ಗಮನ ಸೆಳೆದು ಸಹಾಯ ಮಾಡಲು ನಿರ್ಧರಿಸುತ್ತೇವೆ, ಈಗಾಗಲೇ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ, ರಾಜ್ಯ ಅನುಸೂಚಿತ ಜಾತಿಗಳು ಹಾಗೂ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ:ಎಲ್ ಮೂರ್ತಿ ಹಾಗೂ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ ಎಂದು ಕೋನರಡ್ಡಿ ಹೆಳಿದರು.
ಈ ಸಂದರ್ಭದಲ್ಲಿ ಹು-ಧಾ ಮಹಾನಗರ ಪಾಲಿಕ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ, ಸಮುದಾಯದ ಮುಖಂಡರುಗಳಾದ ಪರಮೇಶ ಕಾಳೆ, ಕೆಂಚಪ್ಪ ಮಲ್ಲಪ್ಪನವರ, ರಾಜು ದೊಡ್ಡಮನಿ, ಪುಂಡಲೀಕ ಚಲವಾದಿ, ಬಸವರಾಜ ಬೀರಣ್ಣವರ, ಸುರೇಶ ಖಾನಾಪೂರ, ಶ್ರೀಧರ ಕಂದಗಲ, ಈಶಪ್ಪ ಬಟ್ಟೂರ, ಶರೀಫ ಕಾಳಿ, ಆನಂದ ಪೂಜಾರ, ಹೆಚ್.ಡಿ. ನದಾಫ, ವೀರುಪಾಷಪ್ಪ ಚಲವಾದಿ, ಸಿದ್ಧಾರ್ಥ ಮಲ್ಲಮ್ಮನವರ, ಮಲ್ಲಪ್ಪ ಕಾಳೆ, ಸಿದ್ದಪ್ಪಾ ಹೆಗಡೆ, ಮುದಕೇಶ್ವರ ಮಾದರ, ಚಿದಾನಂದ ದೊಡ್ಡಮನಿ, ನಿಂಗಪ್ಪ ಕೆಳಗೇರಿ, ದೀಲೀಪ ರತ್ನಾಕರ, ಮಂಜುನಾಥ ಹೊಸಮನಿ, ಹುಬ್ಬಳ್ಳಿ ಗ್ರಾಮೀಣ ಸಿಪಿಐ ಮುರಗೇಶ ಚನ್ನಣ್ಣವರ ಸೇರಿದಂತೆ ವಿವಿಧ ಅಧಿಕಾರಿಗಳು, ಮುಂತಾದ ಮುಖಂಡರು ಉಪಸ್ಥಿತರಿದ್ದರು.