ಜಿಲ್ಲಾಧಿಕಾರಿ, ಉಪ ವಿಭಾಗಧಿಕಾರಿಗಳು ಪುರಸಭೆಗೆ ಭೇಟಿ
ಲೋಕದರ್ಶನ ವರದಿ
ಶಿಗ್ಗಾವಿ : ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಸೋಮವಾರ ಪಟ್ಟಣದ ಪುರಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ನಂತರದಲ್ಲಿ ಜಿಲ್ಲಾಧಿಕಾರಿಗಳಿಗೆ ಮತ್ತು ಉಪ ವಿಭಾಗಧಿಕಾರಿಗಳಿಗೆ ಇಲ್ಲಿನ ಸಮಸ್ಯೆಗಳನ್ನು ಪರಿಶೀಲನೆ ನಡೆಸುವ ಆದೇಶದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಧಿಕಾರಿಗಳು ಮಂಗಳವಾರ ಪುರಸಭೆಗೆ ಭೇಟಿ ನೀಡಿ ವೀಕ್ಷಣೆ ನಡೆಸಿದರು.
ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರ ಮುಂದೆ ಪುರಸಭೆ ಸದಸ್ಯರೆಲ್ಲರೂ ಇಲ್ಲಿನ ಅಧಿಕಾರಿಗಳು ಏಜೆಂಟರನ್ನಿಟ್ಟುಕೊಂಡು ಸಾರ್ವಜನಿಕರ, ಕಚೇರಿ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದು ಹಿಂದಿನ ಜಿಲ್ಲಾಧಿಕಾರಿಗಳಿಗೆ ಪುರಸಭೆ ಸದಸ್ಯರೆಲ್ಲರೂ ಇಲ್ಲಿನ ಅಧಿಕಾರಿಗಳನ್ನು ವರ್ಗಾಯಿಸಿ ಉತ್ತಮ ಕಾರ್ಯ ನಿರ್ವಹಿಸುವ ಬೇರೆ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕೆಂದು ಮನವಿ ಸಲ್ಲಿಸಿದರೂ ಹಿಂದಿನ ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ಜರುಗಿಸದೆ ಇರುವುದರಿಂದ ನಮ್ಮ ಪುರಸಭೆ ಸಾರ್ವಜನಿಕರ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಜಿಲ್ಲಾಧಿಕಾರಿಗಳ ಮುಂದೆ ಪುರಸಭೆ ಸದಸ್ಯರು ತಮ್ಮ ಅಳಲನ್ನು ತೋಡಿಕೊಂಡರು.
ಪಟ್ಟಣದಲ್ಲಿಯ ಸ್ಲಂಬೋರ್ಡ ಮನೆಗಳ ನಿರ್ಮಾಣ ಕಾಮಗಾರಿ ನೆಪದಲ್ಲಿ ಫಲಾನುಭವಿಗಳಿಂದ ಅನಧಿಕೃತ ಹಣ ವಸೂಲಿ ಮಾಡಲಾಗುತ್ತಿದೆ,
ಈಗ ಮನೆ ಕಟ್ಟಿಕೊಂಡವರು ಪುರಸಭೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಉತಾರ ಪಡೆಯುವ ಸಂಚು ನಡೆದಿದೆ ಹೀಗಾಗಿ ತಕ್ಷಣ ಇಲ್ಲಿ ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಸದಸ್ಯರು ಕೇಳಿಕೊಂಡರು.
ಇದೇ ಸಂದರ್ಭದಲ್ಲಿ ಪಟ್ಟಣದ ಪರವಲಯದಲ್ಲಿ ಜಿ+1 ಮನೆಗಳು ನಿರ್ಮಾಣವಾಗಿವೆ ನಿಮರ್ಾಣಗೊಂಡ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡುವಂತೆ ಫಲಾನುಭವಿ ಗುರುನಗೌಡ ದುಂಡಿಗೌಡ್ರ ಮನವಿ ಮಾಡಿದರು.
ವಾರ್ಡ ನಂ15 ರಲ್ಲಿ ತುಂಬಿದ ಚರಂಡಿಯಲ್ಲಿ 18 ತಿಂಗಳ ಮಗು ಬಿದ್ದು ಸಾವನ್ನಪ್ಪಿದ್ದು, ಚರಂಡಿಯ ಸ್ವಚ್ಚತೆಗೆ ತಿಂಗಳುಗಳಿಂದ ಸೂಚಿಸಿದ್ದರೂ ಅಧಿಕಾರಿಗಳ ನಿಷ್ಕಾಳಜಿಯಿಂದ ಈಗ ಮಗು ಸಾವನ್ನಪ್ಪಿದೆ ಈ ಕುರಿತು ಅಧಿಕಾರಿಗಳನ್ನು ಕೇಳಿದರೆ ನಿಮ್ಮ ಮಕ್ಕಳನ್ನು ನೀವು ಖಾಳಜಿಯಿಂದ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರೆ ಚರಂಡಿ ಸ್ವಚ್ಚಪಡಿಸಿದ್ದರೆ ನೀರು ನಿಲ್ಲದೇ ನನ್ನ ಮಗು ಉಳಿಯುತ್ತಿತ್ತು ಈ ಕುರಿತು ಆ ಅಧಿಕಾರಗಳ ಮೇಲೆ ಕ್ರಮಕ್ಕೆ ಮಗುವಿನ ತಂದೆ ಎಂ ಬಿ ಬೆಳಗಾಲಪೇಟೆ ಜಿಲ್ಲಾಧಿಕಾರಿಗಳಿಗೆ ಮನವಿ ಮೂಲಕ ಒತ್ತಾಯಿಸಿದರು.
ಸದಸ್ಯರು ಮತ್ತು ಸಾರ್ವಜನಿಕರ ಸಮಸ್ಯೆ ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ರಘುನಂದನಮೂರ್ತಿಯವರು, ಈಗಾಗಲೇ ಕೊಳಗೇರಿ ಪ್ರದೇಶದಲ್ಲಿ ಮನೆ ನಿರ್ಮಾಣದಲ್ಲಿ ಫಲಾನುಭವಿಗಳಿಂದ ಹಣ ವಸೂಲಿ ನಡೆದಿದೆ ಎನ್ನಲಾದ ಬಗ್ಗೆ ತನಿಖೆ ಕೈಗೊಂಡು ವರದಿ ಸಲ್ಲಿಸಲು ಉಪ ವಿಭಾಗಾಧಿಕಾರಿಗಳಿಗೆ ಸೂಚಿಸಿದ್ದೇನೆ.
ಸ್ಲಂಭೋರ್ಡ ಅಧಿಕಾರಿಗಳ ಸಭೆ ಕರೆದಿದ್ದೇನೆ. ಇಲ್ಲಿಯವರಿಗೂ ಕೈಗೊಂಡ ಪ್ರಗತಿ ಬಗ್ಗೆ ಪೋಟೋಗಳನ್ನು ನೀಡಲು ಸೂಚಿಸುತ್ತೇನೆ ಜತೆಗೆ ಸ್ಥಾನಿಕ ಪರಿಶೀಲನೆ ಕೈಗೊಳ್ಳುವ ಭರವಸೆ ನೀಡಿದರು.
ಇನ್ನು ಮುಂದೆ ಹೀಗೆ ಆಗದಂತೆ ಕ್ರಮಕೈಗೊಳ್ಳುವ ಭರವಸೆ ನೀಡಿದ ಜಿಲ್ಲಾಧಿಕಾರಿಗಳು, ಪುರಸಭೆ ಮಳಿಗೆ ಹರಾಜು ಪ್ರಕ್ರಿಯೆ ನಡೆದಿಲ್ಲ ಎಂದು ದೂರಿದ ರವಿ ಗುಡಿಸಲಮನಿ ಅವರಿಗೆ ಹೊಸದಾಗಿ ಈ ಪ್ರಕ್ರಿಯೆ ಕೈಗೊಳ್ಳಲು ತಿಳಿಸಿದ್ದಾಗಿ ಹೇಳಿದರು.
ಉಪ ವಿಭಾಗಾಧಿಕಾರಿ ಮೊಹಮ್ಮದ ಕೈಜರ್, ತಹಸೀಲ್ದಾರ್ ಸಂತೋಷ ಹಿರೇಮಠ, ಮುಖ್ಯಾಧಿಕಾರಿ ಸಂಗನಬಸಯ್ಯ ಸೇರಿದಂತೆ ಪುರಸಭೆ ಸದಸ್ಯರಾದ ಸುಭಾಸ ಚವ್ಹಾಣ, ಪರಶುರಾಮ ಸೊನ್ನದ, ರಮೇಶ ವನಹಳ್ಳಿ, ಸುಲೇಮಾನ ತರ್ಲಘಟ್ಟ, ಜಾಫರಖಾನ ಪಠಾಣ, ಮಂಜುನಾಥ ಬ್ಯಾಹಟ್ಟಿ, ರವಿ ಗುಡಸಲಮನಿ, ಬಸಲಿಂಗಪ್ಪ ನರಗುಂದ ಮತ್ತು ಸಾರ್ವಜನಿಕರು ಇದ್ದರು