ನಿರ್ಗತಿಕ ವೃದ್ಧಗೆ ಪಿಂಚಣಿ ಆದೇಶ ಪತ್ರ ವಿತರಣೆ
ತಾಳಿಕೋಟಿ : ರಾಮಪ್ಪ ಬಂಡಿವಡ್ಡರ್ ಎಂಬ ನಿರ್ಗತಿಕ ಅನಾಥ ವೃದ್ಧ ಯಾರ ಆಶ್ರಯವೂ ಇಲ್ಲದೆ ಜೀವನೋಪಾಯಕ್ಕಾಗಿ ಕಂಗೆಟ್ಟು ಅಲೆಯುತ್ತಿರುವಾಗ ಅಂಥವನನ್ನು ಗುರುತಿಸಿ ಅವನಿಗೆ ಸರಕಾರದ ಮಹತ್ವಾಕಾಂಕ್ಷೆಯ ಸಂದ್ಯಾ ಸುರಕ್ಷಾ ಅಡಿಯಲ್ಲಿ ಪಿಂಚಣಿ ಆದೇಶ ಪತ್ರವನ್ನು ವಿತರಿಸಿ ಜೀವನಕ್ಕೆ ಭದ್ರತೆ ಸಿಗುವಂತೆ ಮಾಡಿ ತಹಶೀಲ್ದಾರ ಶ್ರೀಧರ ಗೋಟೂರ ಮಾನವೀಯತೆಯನ್ನು ಮೆರೆದಿದ್ದಾರೆ.
ಪಿಂಚಣಿ ಆದೇಶ ಪತ್ರ ವಿತರಿಸಿ ಮಾತನಾಡಿದ ತಹಶೀಲ್ದಾರ ಶ್ರೀಧರ ಗೋಟೂರ ಅವರು ನಮ್ಮ ಸಮಾಜದಲ್ಲಿ ಇಂದು ಆಶ್ರಯವಿಲ್ಲದೆ ಕೆಂಗಟ್ಟಿರುವ ನೂರಾರು ದುರ್ಬಲ ಜನರು ನಮಗೆ ಸಿಗುತ್ತಾರೆ ಅಂಥವರನ್ನು ಗುರುತಿಸುವ ಕಾರ್ಯ ನಮ್ಮ ಸಾಮಾಜಿಕ ಸಂಸ್ಥಗಳು ಮಾಡಬೇಕು ಇದು ನಾಗರಿಕ ಸಮಾಜದ ಜವಾಬ್ದಾರಿ ಕೂಡ ಆಗಿದೆ ಎಂದು ಹೇಳಿದರು.
ಈ ಸಮಯದಲ್ಲಿ ಉಪತಹಶಿಲ್ದಾರ ಶಮರ್ಾ, ಸಾಮಜಿಕ ಕಾರ್ಯಕರ್ತರಾದ ಸುಭಾಷ ಚಮಲಾಪೂರ, ಸಿದ್ದಾರ್ಥ ಕಟ್ಟಿಮನಿ, ಕೇಸವರ್ಕರ ಮುನ್ನಾ ಅತ್ತಾರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು