ಬಡ ಕೂಲಿ ಕಾರ್ಮಿಕರಿಗೆ ಸಾಮಾಗ್ರಿಗಳ ವಿತರಣೆ
ಬಳ್ಳಾರಿ: ನಗರದಲ್ಲಿ ಫೆ.05ರಂದು ನಡೆದ ಕಾಂಗ್ರೆಸ್ ಕಾರ್ಮಿಕರ ಘಟಕದ ವತಿಯಿಂದ ನಗರದ ಮಹಾನಂದಿ ಕೊಟ್ಟಂ , ಅಂಬೇಡ್ಕರ್ ನಗರ , ಮತ್ತು ಕನ್ನಡ ನಗರ , ಭಗತ್ ಸಿಂಗ್ ನಗರದ ವಿವಿಧ ಏರಿಯಗಳಿರುವ ಬಡ ಕೂಲಿ ಕಾರ್ಮಿಕರುಗಳಿಗೆ ಅನುಕೂಲಕರವಾಗಿರುವ ಕೂಲಿ ಕಾರ್ಮಿಕರಿಗೆ ಕೆಲಸಕ್ಕೆ ಹೋಗಲು, ಗಡಾರಿ, ಚಲಿಕೆ, ಪುಟ್ಟಿ, ದಿನಗೂಲಿ ಬೇಕಾಗಿರುವಂತಹ ಸಾಮಾಗ್ರಿಗಳು ಹಾಗೂ ಸಾಮಾನುಗಳನ್ನು ಮಾಜಿ ಶಾಸಕ ಅನಿಲ್ ಲಾಡ್ ಹೆಚ್ ರವರು ವಿತರಣೆ ಮಾಡಿದರು. ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಕೂಲಿ ಕಾರ್ಮಿಕರಿಗಾಗಿ ವಿವಿಧ ಬಗೆಯ ಜನರಿಗೆ ನೂರಾರು ಕಲ್ಯಾಣ ಕಾರ್ಯಕ್ರಮಗಳನ್ನು ಸರ್ಕಾರ ಘೋಷಿಸಿದೆ. ಆದರೆ, ಅವುಗಳ ಅನುಷ್ಠಾನ ಸರಿಯಾಗಿ ನಡೆಯದಿರುವುದು ದುರಂತದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಂತರ ಹೀಗಾಗಿ ದುಡಿದು ಜೀವನ ಕುಟುಂಬ ನಿರ್ವಹಣೆ ಮಾಡುವುದು ಅಸಾಧ್ಯವಾಗಿರುವ ಅಹಿಂದ ಸಮಾಜದವರು ಹಾಗೂ ಬಡವರು ಕುಟುಂಬಗಳು ಮೂಲಭೂತ ಸೌಕರ್ಯಗಳನ್ನು ಇತ್ತೀಚಿನ ದಿನಗಳಲ್ಲಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗೂ ಇಂದಿಗೂ ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ ಏಕೆಂದರೆ ಬಡತನ, ಅನಾರೋಗ್ಯ, ನಿರುದ್ಯೋಗ ತಾಂಡವಾಡುತ್ತಿದೆ ಎಂದು ಕಾಮರ್ಿಕ ಘಟಕದ ಅಧ್ಯಕ್ಷ ಲಕ್ಷ್ಮಣ್ ಮಹಾನಂದಿ ಕೊಟ್ಟಂ ರವರು ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ನಗರದ ಹಿರಿಯ ಮುಖಂಡರುಗಳು, ಕಾರ್ಮಿಕರು ಹಾಗೂ ಮಹಿಳೆಯರು ಕಾಂಗ್ರೆಸ್ ಪದಾಧಿಕಾರಿಗಳು ಕಾರ್ಯಕರ್ತರುಗಳು ಉಪಸ್ಥಿತರಿದ್ದರು.