ರೈತ ಸಂಪರ್ಕ ಕೇಂದ್ರದಿಂದ ತಾಡಪಾಲ ವಿತರಣೆ
ತಾಳಿಕೋಟಿ: ರೈತಾಪಿ ಜನರಿಗೆ ರಾಶಿ ಮಾಡುವಾಗ ಉಪಯೋಗಿಸಲು ಬೇಕಾಗುವ ತಾಡಪಾಲ (ತಾಡಪತ್ರಿ)ಗಳನ್ನು ಸ್ಥಳೀಯ ರೈತಸಂಪರ್ಕ ಕೇಂದ್ರದಲ್ಲಿ ಕೃಷಿ ಸಂಸ್ಕರಣಾ ಘಟಕದಡಿಯಲ್ಲಿ ವಿತರಿಸಲಾಯಿತು.
ತಾಡಪಾಲ ಪಡೆಯಲು ಅರ್ಜಿ ಹಾಕಿದ ಎಲ್ಲ ರೈತರ ಸಮಕ್ಷಮದಲ್ಲಿ ಲಾಟರಿ ಮಾಡುವ ಮೂಲಕ ಆಯ್ಕೆ ಮಾಡಿ ತಾಡಪತ್ರಿ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೃಷಿ ಸಮಾಜದ ಉಪಾಧ್ಯಕ್ಷ ಬಸನಗೌಡ ಮಾಡಗಿ ಅವರು ಮಾತನಾಡಿ ರೈತಬಾಂಧವರಿಗೆ ಸರಕಾರಗಳು ಹಲವಾರು ಯೋಜನೆಗಳನ್ನು ಹೊರತಂದಿವೆ. ಅವುಗಳ ಸದ್ಬಳಕೆಯನ್ನು ಮಾಡಿಕೊಳ್ಳಲು ರೈತರು ಸಂಪರ್ಕ ಕೇಂದ್ರದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರಬೇಕು.
ಕೃಷಿ ಅಧಿಕಾರಿಗಳು ಸಮಯಾನುಸಾರ ನೀಡುವ ಸಲಹೆ-ಸೂಚನೆಗಳನ್ನು ಪಾಲಿಸಬೇಕು ಎಂದರು.
ಈ ಸಮಯದಲ್ಲಿ ಕೃಷಿ ಅಧಿಕಾರಿಗಳಾದ ಮಹೇಶ ಜೋಶಿ, ಎಂ.ಎಚ್. ಬೀಳಗಿ, ತಾಂತ್ರಿಕ ವ್ಯವಸ್ಥಾಪಕ ಸಂಗಮೇಶ ಪಾಟೀಲ, ಅಕೌಂಟಂಟ್ ವಿನೋದ ನಾಯಕ, ನಂದಿಕೋಲಮಠ, ಅಮರ್ ಅಂಗಡಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.