ಶಿಗ್ಗಾವ್

ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ

ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ

ಲೋಕದರ್ಶನ ವರದಿ

ಶಿಗ್ಗಾವಿ 26:   ಶಿಗ್ಗಾವಿ ಮತ್ತು ಸವಣೂರ ತಾಲೂಕಿನ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾದ 90 ಸಾವಿರ ವಿದ್ಯಾರ್ಥಿಗಳಿಗೆ 4.5 ಲಕ್ಷ ಉಚಿತವಾಗಿ ನೋಟ್ಬುಕ್ಗಳನ್ನು ನಮ್ಮ ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ಆಶ್ರಯದಲ್ಲಿ ನೀಡುವ ಗುರಿ ಹೋಂದಲಾಗಿದೆ ಎಂದು ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಶಿಧರ ಯಲಿಗಾರ ಹೇಳಿದರು.

     ಬಂಕಾಪೂರ ಪಟ್ಟಣದ ಕೊಟ್ಟಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಗಳನ್ನು ವಿತರಿಸಿ ಮಾತನಾಡಿದ ಅವರು, ನಾನು ಕೋರೋನಾ ದಿಂದ ಪಾರಾಗಿ ಪುನರ್ಜನ್ಮ ಪಡೆದುಕೊಂಡು ಬಂದ ಮೇಲೆ ಮೊದಲು ನಾನಾ ಕೃತಜ್ಞತಾ ಪೂರ್ವಕವಾಗಿ ಆಶಾ ಕಾರ್ಯಕರ್ತರು, ಶುಶ್ರುಕಿಯರು, ವೈದ್ಯಾಧಿಕಾರಿಗಳು ಸೇರಿ ಒಟ್ಟು 750 ಜನರಿಗೆ ಗೌರವದನದೋಂದಿಗೆ ಅವರನ್ನು ಸನ್ಮಾನಿಸಿ ಅವರ ಋಣವನ್ನು ಕಡಿಮೆಮಾಡಿಕೋಳ್ಳಲು ಪ್ರಯತ್ನಿಸಿದ್ದೇನೆ. ಅಲ್ಲಿಂದ ಪ್ರಾರಂಭವಾದ ನನ್ನ ಸಮಾಜ ಸೇವೆ ನಿರಂತರವಾಗಿ ಮುಂದುವರೆದುಕೋಂಡು ಬಂದಿದೆ. ಕಳೆದಬಾರಿ ಸುಮಾರು 70 ಲಕ್ಷಕ್ಕೀಂತಲೂ ಅಧಿಕ ವೆಚ್ಚದಲ್ಲಿ ಶಿಗ್ಗಾವಿ, ಸವಣೂರ ತಾಲೂಕಿನಾದ್ಯಂತ ವಿರುವ ಶಾಲಾ ಕಾಲೇಜು ವಿದ್ಯಾಥರ್ಿಗಳಿಗೆ ಉಚಿತ ಬಸ್ ಪಾಸ್ ನೀಡಿರುವ ಸಂತೃಪ್ತಿ ನನಗಿದೆ ಎಂದು ಹೇಳಿದರು.

     ಲಯನ್ಸ ವಿದ್ಯಾಶಾಲೆಯ ಮುಖ್ಯ ಶಿಕ್ಷಕಿ ಜಿ.ಎಸ್.ದೇಸಾಯಿ ಮಾತನಾಡಿ, ಶಶಿಧರ ಯಲಿಗಾರ ರವರಲ್ಲಿ ಕಳೆದ ಬಾರಿ ನಮ್ಮಶಾಲೆಯ ವಿದ್ಯಾಥರ್ಿಗಳಿಗೂ ಸಹಾಯ ಮಾಡುವಂತೆ ಮನವಿ ಮಾಡಿದ ಪ್ರತಿಫಲವಾಗಿ ಈ ಬಾರಿ ಸಕರ್ಾರಿ ಶಾಲೆಯ ವಿದ್ಯಾಥರ್ಿಗಳ ಜೊತೆಗೆ ಖಾಸಗಿ ಶಾಲೆಯ ವಿದ್ಯಾಥರ್ಿಗಳಿಗೂ ಉಚಿತ ನೋಟ್ ಬುಕ್ಗಳನ್ನು ನೀಡಿರುವುದು ಅವರ ಸೇವಾ ಮನೋಬಾವನೆಗೆ ಹಿಡಿದ ಕೈಗನ್ನಡಿಯಾಗಿದೆ. ಕಳೆದ ಮೂರು ವರ್ಷಗಳಿಂದ ಅವರ ದಿ.ತಂದೆಯವರ ಹೆಸರಿನಲ್ಲಿ ಮಾಡುತ್ತಿರುವ ಸಮಾಜ ಸೇವೆಯನ್ನು ನೋಡಿದರೆ ಕರ್ಣನ ನೆನಪಾಗುತ್ತದೆ. ಅವರ ಸೇವೆ ನಿರಂತರವಾಗಿ ಮುಂದುವರೆಯಲಿ ಎಂದು ಆಶಿಸಿದರು.

    ಅರಳೆಲೆಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಗಳು ಧಿವ್ಯಸಾನಿದ್ಯವಹಿಸಿ ಆಶೀರ್ವಚನ ನೀಡಿದ ಶ್ರೀಗಳು ಸಾಕಷ್ಟು ಜನ ಹಣವಂತರಿದ್ದರೂ ಕೊಡುವ ಮನಸ್ಸಿರುವುದಿಲ್ಲ. ಆದರೆ ಶಶಿಧರ ಯಲಿಗಾರ ರವರ ಸೇವೆ ನಿಸ್ವಾರ್ಥ ಸೇವೆಯಾಗಿದ್ದು, ಅವರು ಗಳಿಸಿದ ಹಣದಲ್ಲಿ ಸ್ವಲ್ಫ ಬಾಗವನ್ನು ಸಮಾಜ ಸೇವೆಗೆ ಮಿಸಲಿರಿಸುವ ಮೂಲಕ ತಮ್ಮ ಜೀವನವನ್ನು ಸಾರ್ಥಕ ಪಡೆಸಿಕೊಳ್ಳುತ್ತಿದ್ದಾರೆ. ಆ ದೇವರು ಅವರಿಗೆ ಆಯೂರಾರೋಗ್ಯ ಸಿರಿ ಸಂಪತ್ತು ಕರುಣಿಸಿ ಇನ್ನು ಹೆಚ್ಚಿನ ಸಮಾಜ ಸೇವೆ ಮಾಡಲು ಶಕ್ತಿ ನೀಡಲಿ ಎಂದು ಹರಸಿದರು.

    ಮುಖ್ಯ ಶಿಕ್ಷಕ ಎಂ.ಎಂ.ದೇವಕ್ಕಿಗೌಡ್ರ ಮಾತನಾಡಿದರು. ರೈತದ್ವನಿ ವಾಹಿನಿಯ ಸಂಪಾದಕ ಬಸವರಾಜ ಕುರಗೋಡಿ, ಎಸ್.ಡಿ.ಎಮ್.ಸಿ. ಅಧ್ಯಕ್ಷ ಚನ್ನಪ್ಪ ಗುಡಮಿ, ಶಿಕ್ಷಕರಾದ ಎಮ್.ಎಚ್.ಸನ್ನುಖಾನ, ಸುಶೀಲಾ ಬೆಟಗೇರಿ, ಚಂದ್ರಕಲಾ, ಎಮ್.ರಾಮಗಿರಿ, ಕರೆಕನ್ನಮ್ಮನವರ, ಎಮ.ಎ.ಹಾಜಿ, ಗಣೇಶ ಲಮಾಣಿ ಪ್ರವೀಣ ಜಾದವ ಸೇರಿದಂತೆ ಪಟ್ಟಣದ ಸರ್ವಶಾಲೆಯ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು 

ಸುದ್ದಿ ಓದಿ