ಅಭಿವೃದ್ಧಿಯೇ ನನ್ನ ಜಾತಿ: ಶಾಸಕ ಸೋಮನಗೌಡ ಪಾಟೀಲ
ತಾಳಿಕೋಟಿ: ನಾನು ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ ನನಗೆ ಜಾತಿರಾಜಕಾರಣದಲ್ಲಿ ನಂಬಿಕೆಯು ಇಲ್ಲ ನನ್ನ ಮತಕ್ಷೇತ್ರದ ಎಲ್ಲ ಜಾತಿ ಧರ್ಮದವರ ಕೆಲಸಗಳನ್ನು ಮಾಡುವುದು ನನ್ನ ಕರ್ತವ್ಯ ಎಂದು ನಾನು ಭಾವಿಸಿದ್ದೇನೆ. ನನ್ನ ನಿಜವಾದ ಜಾತಿ ಯಾವುದಾದರು ಇದ್ದರೆ ಅದು ಅಭಿವೃದ್ಧಿಯಾಗಿದೆ ಎಂದು ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹೇಳಿದರು.
ತಾಲೂಕಿನ ಪೀರಾಪೂರ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ-ವಿಬಾಗ ಮುದ್ದೇಬಿಹಾಳ ಇಲಾಖೆಯ ವತಿಯಿಂದ ಹಮ್ಮಿಕೊಂಡ ರೂ. 98 ಲಕ್ಷ ಮೊತ್ತದ ಮನೆ-ಮನೆಗೆ ನಳ ಜೋಡಣೆ ಯೋಜನೆ (ಈಊಖಿಅ) ಹಾಗೂ ಸನ್ 2021-22ನೇ ಸಾಲಿನ ಲೆಕ್ಕ ಶೀಷಿಕೆ 5054ನೇ ಅಡಿಯಲ್ಲಿ ರೂ 50ಲಕ್ಷ ಮೊತ್ತದ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬ. ಸಾಲವಾಡಗಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೂ ನಾನು ಅನುದಾನವನ್ನು ಕೊಟ್ಟು ಅಲ್ಲಿಯ ಮೂಲ ಸೌಕರ್ಯಗಳಾದ ರಸ್ತೆ, ನೀರು, ವಿದ್ಯುತ್, ಆರೋಗ್ಯ, ಹಾಗೂ ಶಿಕ್ಷಣಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಬಹು ಹಳ್ಳಿ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೆ ತಂದಿದ್ದೇನೆ. ಈಗ ಮತ್ತೇ ಜೆಜೆಎಮ್ ಯೋಜನೆ ಹಾಗೂ ಸಿ.ಸಿ. ರಸ್ತೆಗಾಗಿ ಭೂಮಿ ಪೂಜೆ ನೆರವೇರಿಸಿದ್ಧೆನೆ. ಮುಂದೆ ಮತ್ತೇ ಇನ್ನೂ 50 ಲಕ್ಷ ಅನುದಾನ ಕೊಡಲಿದ್ದೇನೆ ಈ ಎಲ್ಲ ಕಾರ್ಯಗಳಲ್ಲಿ ನಿಮ್ಮೇಲ್ಲರ ಸಹಕಾರ ನನಗೆ ಬೇಕು ಎಂದು ಹೇಳಿದರು.
ಈ ಸಮಯದಲ್ಲಿ ಮುಖಂಡರಾದ ಸಂಗನಗೌಡ ಹೆಗರಡ್ಡಿ, ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ, ಪ್ರಶಾಂತ ಹಾವರಗಿ, ಗುತ್ತಿಗೆದಾರ ಎಸ್.ಟಿ ಬಿಂಜಲಭಾವಿ, ಬಸನಗೌಡ ಪಾಟೀಲ(ಪೀರಾಪೂರ), ಮಾಜಿ ಜಿ.ಪಂ ಸದಸ್ಯ ಸಾಹೇಬಣ್ಣ ಆಲ್ಯಾಳ, ಗುರುಗೌಡ ಗುರಡ್ಡಿ, ಸಾಹೇಬಗೌಡ ರಾರಡ್ಡಿ, ಮುತ್ತುಗೌಡ ಮಾಳಿ, ಪ್ರಭುಗೌಡ ಪಾಟೀಲ(ಲಕ್ಕುಂಡಿ), ಬಸನಗೌಡ ಪಾಟೀಲ(ಲಕ್ಕುಂಡಿ), ರಾಯಪ್ಪಗೌಡ ನೀರಲಗಿ, ಶಂಕರಗೌಡ ದೇಸಾಯಿ(ಶಳ್ಳಗಿ), ಎಇಇಗಳಾದ ಜೆ.ಪಿ. ಶೇಟ್ಟಿ, ಆನಂದಸ್ವಾಮಿ, ಜೆಇ ಸಜ್ಜನ, ಸಾಹೇಬಗೌಡ ಶಾಖಾಪೂರಿ ಇದ್ದರು