ದಂತ ಆರೋಗ್ಯವನ್ನು ಪರೀಕ್ಷಿಸಿ: ಡಾ. ಬೀನಾ ದೇವಿ
ಲೋಕದರ್ಶನ ವರದಿ
ಕನಕಗಿರಿ 05: ಜಿಲ್ಲೆಯಲ್ಲಿ ದಂತ ಭಾಗ್ಯ ಯೋಜನೆಯ ಅರ್ಹ ಪಲಾನುಭವಿಗಳನ್ನು ಆಯ್ಕೆ ಮಾಡಿಕೊಳಲಾಗುವುದು. ಮುಂದಿನ ದಿನಗಲ್ಲಿ ಅರ್ಹರಿಗೆ ಉಚಿತವಾಗಿ ದಂತ ಪಂಕ್ತಿ ವಿತರಿಸುವ ಜೊತೆಗೆ ಹಲ್ಲುಗಳ ಆರೋಗ್ಯದ ಹರಿವು ಮೂಡಿಸುವ ಪ್ರಯತ್ನ ನಡೆದಿದೆ. ಆದ್ದರಿಂದ ಕನಕಗಿರಿ ಭಾಗದ ಎಲ್ಲಾ ರೋಗಿಗಳು ತಮ್ಮ ಹಲ್ಲುಗಳನ್ನು ಪರೀಕ್ಷಿಸಬೇಕೆಂದು ದಂತ ವೈದ್ಯಾಧಿಕಾರಿ ಡಾ. ಬೀನಾ ದೇವಿ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮ ಹಾಗೂ ದಂತ ಸಪ್ತಾಹ ಶಿಬಿರದಲ್ಲಿ ಅವರು ಮಾತನಾಡಿದರು.
ನಿಮ್ಮ ವಸಡಿನ ತೊಂದರೆ ಹಾಗೂ ಹಿರಿಯ ವಯಸ್ಸಿನಲ್ಲಿ ಬಹಳಷ್ಟು ಜನ ತಮ್ಮ ಹಲ್ಲುಗಳನ್ನು ಕಳೆದುಕೊಳ್ಳುತ್ತಾರೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ಹಲ್ಲಿನ ತಪಾಸಣೆಯನ್ನು ಮಾಡಿಸಿಕೊಂಡು ಆದರಿಂದ ಸರಿಯಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುವಂತೆ ತಿಳಿಸಿ ನಿಮಗೆ ಹಲ್ಲಿನ ಜೋಡಣೆಯನ್ನು ಇದ್ದರೆ ಜಿಲ್ಲೆಯಲ್ಲಿ ಉಚಿತವಾಗಿ ಹಲ್ಲಿನ ಜೋಡಣೆಯನ್ನು ಮುಂದಿನ ದಿನಗಲ್ಲಿ ನೀಡಲಾಗುವುದು. 45 ವರ್ಷ ಮೇಲ್ಪಟ್ಟ ಎಲ್ಲಾ ಬಿಪಿಎಲ್ ಕಾರ್ಡ್ ದವರು ದಂತ ಸಮಸ್ಯೆ ಇದ್ದರೆ ಉಚಿತವಾಗಿ ದಂತ ಚಿಕಿತ್ಸೆಯನ್ನು ನೀಡಲಾಗುವುದು. ಆದ್ದರಿಂದ ಆಶಾ ಕಾರ್ಯಕರ್ತರು ಆರೋಗ್ಯ ಕಾರ್ಯಕತರ್ೆಯರು ಮತ್ತು ಸ್ವಯಂಸೇವಕರು ದಂತ ಸಮಸ್ಯೆಯನ್ನು ಗುರುತಿಸಿ ಸಮಯದಾಯ ಆರೋಗ್ಯ ಕೇಂದ್ರ ಕನಗಿರಿ ಗೆ ಕರೆದುಕೊಂಡು ಬರುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಡಾ. ರಾಘವೇಂದ್ರ ಮಾತನಾಡಿ, ಸರ್ಕಾರದಿಂದ ಉಚಿತವಾಗಿ ಸಿಗುವ ದಂತ ಭಾಗ್ಯ ಯೋಜನೆಯನ್ನು ಹಾಗೂ ಸರಕಾರದ ಇತರೆ ಯೋಜನೆಗಳನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳುವಂತೆ ಜನರಿಗೆ ತಿಳಿಸಿದರು.ಈ ಸಂದರ್ಭದಲ್ಲಿ ಡಾ.ಸೌಮ್ಯ , ಸಿಬ್ಬಂದಿಗಳಾದ ಸಿದ್ದರಾಮಪ್ಪ, ರಮೇಶ್, ಮಲ್ಲೇಶಪ್ಪ, ರುದ್ರಮ್ಮ ಅಮೀನ್ ಸಾಬ್ ಸೇರಿದಂತೆ ಇತರರು ಇದ್ದರು