ಜಮಖಂಡಿ

ತಾಲೂಕು ಅಕ್ಷರ ದಾಸೋಹ ಅಧಿಕಾರಿ ಹುದ್ದೆಗೆ ಶಿಕ್ಷಣ ಇಲಾಖೆಯ ಮುಖ್ಯ ಗುರುಗಳನ್ನೇ ನೇಮಿಸುವಂತೆ ಆಗ್ರಹ

ತಾಲೂಕು ಅಕ್ಷರ ದಾಸೋಹ ಅಧಿಕಾರಿ ಹುದ್ದೆಗೆ ಶಿಕ್ಷಣ ಇಲಾಖೆಯ ಮುಖ್ಯ ಗುರುಗಳನ್ನೇ ನೇಮಿಸುವಂತೆ ಆಗ್ರಹ

ಲೋಕದರ್ಶನ ವರದಿ,

ಜಮಖಂಡಿ  29: ತಾಲೂಕು ಅಕ್ಷರ ದಾಸೋಹ ಅಧಿಕಾರಿ ಹುದ್ದೆಗೆ ಶಿಕ್ಷಣ ಇಲಾಖೆಯ ಮುಖ್ಯ ಗುರುಗಳನ್ನೇ ನೇಮಿಸಬೇಕೆಂದು ಆಗ್ರಹಿಸಿ ಇಂದು ಮುಖ್ಯ ಶಿಕ್ಷಕರ ಸಂಘದ ಪದಾಧಿಕಾರಿಗಳು ಬಿಈಓ ಅಶೋಕ ಬಸಣ್ಣವರ ಅವರ ಮೂಲಕ ಆಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಪ್ರಸ್ತುತ ತಾಲೂಕು ಅಕ್ಷರ ದಾಸೋಹ ಅಧಿಕಾರಿ ಹುದ್ದೆಯಲ್ಲಿ ಪ್ರೌಢಶಾಲಾ ಮುಖ್ಯಶಿಕ್ಷಕರು ಅತ್ಯಂತ ಪ್ರಾಮಾಣಿಕ, ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಅವರನ್ನೆ ಮುಂದುವರೆಸಬೇಕೆಂದು ವಿವಿಧ ಸಂಘಟನೆಗಳು ಮನವಿ ಸಲ್ಲಿಸಲಾಯಿತು.

ರಾಜ್ಯದ ಪ್ರತಿ ತಾಲೂಕಿನ ಎಲ್ಲ ಶಾಲಾ ಮಕ್ಕಳಿಗೆ ಗುಣಮಟ್ಟದ ಆಹಾರವನ್ನು ಒದಗಿಸುವುದರ ಜೊತೆಗೆ ಕ್ಷೀರಭಾಗ್ಯ, ಮೊಟ್ಟೆ ವಿತರಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗಿದೆ. ಇದರ ಜೊತೆಗೆ ಪ್ರತಿ ಶಾಲೆಗಳಿಗೆ ಭೇಟಿ ಮಾಡಿ ಅಡುಗೆ ಕೋಣೆ, ದಾಸ್ತಾನು ಕೊಠಡಿ ಪರಿಶೀಲನೆ, ಆಹಾರದ ಗುಣಮಟ್ಟದ ಪರಿಶೀಲನೆ ಮಾಡಿ ಆ ಶಾಲೆಯ ಶಾಲಾ ದಾಖಲಾತಿ, ಹಾಜರಾತಿ ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಶಾಲಾ ಶಿಕ್ಷಕರೊಂದಿಗೆ ಚರ್ಚಿಸಿ ಗುಣಾತ್ಮಕ ಶಿಕ್ಷಣ ನೀಡಲು ಶಿಕ್ಷಕರಿಗೆ ಮಾರ್ಗದರ್ಶನ ಸಲಹೆ ಸೂಚನೆಗಳನ್ನು ನೀಡಿ, ಶಾಲಾ ಮಕ್ಕಳ ದಾಖಲಾತಿ ಹೆಚ್ಚಿಸಲಾಗಿದೆ ಎಂದರು.

ತಾಲೂಕುಗಳಲ್ಲಿ ಶಾಲೆಗಳ ದತ್ತು ತೆಗೆದುಕೊಳ್ಳುವುದು ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆ ಕ್ರಮಗಳಲ್ಲಿ ಭಾಗಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಖ್ಯಶಿಕ್ಷಕರು ಶೈಕ್ಷಣಿಕ ಆಡಳಿತ ಮತ್ತು ಶೈಕ್ಷಣಿಕ ಮನೋವಿಜ್ಞಾನ ವಿಷಯದ ಜ್ಞಾನ ಪಡೆದಿರುವುದರಿಂದ ತಾಲೂಕು ಅಕ್ಷರ ದಾಸೋಹ ಅಧಿಕಾರಿ ಹುದ್ದೆಯಲ್ಲಿ ಮುಂದುವರೆಸುವಂತೆ ಆಗ್ರಹಿಸಿದರು.

ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ  ಶಿವಾಜಿ ನಾಯಕ, ಜಮಖಂಡಿ ಮತ್ತು ರಬಕವಿ ಬನಹಟ್ಟಿ ಶಿಕ್ಷಣಾಧಿಕಾರಿಗಳ ಸಂಘದ ತಾಲೂಕಾಧ್ಯಕ್ಷ ಬಸವರಾಜ ಸಾವಳಗಿ, ಭಿಮಪ್ಪ ಕಡಕೋಳ, ಸಹಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ ಕಲ್ಲೊಳ್ಳಿ, ಬಾಬಾಗೌಡ ಪಾಟೀಲ, ಹಣಮಂತ ಅರಕೇರಿ, ಭೂಷಣ ಪತ್ತಾರ, ದುಂಡಪ್ಪ ಕಾಂಬಳೆ, ಎಂ.ಬಿ.ಮಾಳೇದ, ಬಿ.ಎಂ. ಬಳೋಲಮಟ್ಟಿ, ಕಾಡೇಶ ಹಂಚಿನಾಳ, ಸಂಗಮೇಶ ಉಟಗಿ, ಸುರೇಂದ್ರ ಯಲ್ಲಟ್ಟಿ, ರಾಜು ಕೊಕ್ಕನವರ, ಹೆಚ್.ವೈ.ಆಲಮೇಲ, ಮಂಜುನಾಥ ಬುಜರುಕ, ಸುರೇಶ ನಾವಿ ಸೇರಿದಂತೆ ಅನೇಕರು ಇದ್ದರು.


ಸುದ್ದಿ ಓದಿ