ನಾಳೆ ಬಾಲಕ, ಬಾಲಕಿಯರ ಸೈಕ್ಲಿಂಗ್ ಸ್ಪರ್ಧೆ
ಲೋಕದರ್ಶನ ವರದಿ,
ಜಮಖಂಡಿ28: 2022-23 ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಬಾಲಕ, ಬಾಲಕಿಯರ ಸೈಕ್ಲಿಂಗ್ ಸ್ಪರ್ಧೆಗಳು ನ.30 ರಂದು ಜಮಖಂಡಿ ಬಿಎಲ್ಡಿ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ನಡೆಯಲಿ ಎಂದು ಜಿಲ್ಲಾ ಪಿಯು ಉಪನಿರ್ದೇಶಕ ಡಾ.ಕೃಷ್ಣಪ್ಪ ಬಿಎಲ್ಡಿ ಕಾಲೇಜಿನ ಸಭಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ.29 ರಂದು ಸ್ಪರ್ಧಾಳುಗಳ ಪ್ರವೇಶ ಹಾಗೂ 30 ರಂದು ಬಾಲಕ ಮತ್ತು ಬಾಲಕಿಯರ 1000 ಮೀ. ಟೈಮ್ಟ್ರಾಯಲ್ಸ್, 3000 ಮೀ. ಇಂಡಿ ವಿಜುವಲ್ ಪರಸೂಟ ಹಾಗೂ 30 ಕಿಮೀ ರೋಟ್ ಸ್ಪರ್ಧೆಗಳು, 10 ಕಿಮೀ ರೋಡ ಟೈಮ್ ಟ್ರಾಯಲ್ಸ್ ಸ್ಪರ್ಧೆಗಳು ನಡೆಯಲಿವೆ. ಸುಮಾರು 30 ಜಿಲ್ಲೆಗಳಿಂದ 300 ಕ್ಕೂ ಹೆಚ್ಚು ಕ್ರೀಡಾಪಟುಗಳು ಆಗಮಿಸಲಿದ್ದು, ನಿಣರ್ಾಯಕರು, ತಂಡದ ವ್ಯವಸ್ಥಾಪಕರಿಗೆ ಊಟ, ಉಪಹಾರ, ವಸತಿ ವ್ಯವಸ್ಥೆ ಮಾಡಲಾಗಿದೆ. ಜಮಖಂಡಿ, ಜಂಬಗಿ ಮುಖ್ಯ ರಸ್ತೆಯಲ್ಲಿ ರೋಡ್ ಸೈಕ್ಲಿಂಗ್ ನಡೆಯಲಿದ್ದು, ಸಾರ್ವಜನಿಕರು ಅಂದು ಸಹಕಾರ ನೀಡಬೇಕೆಂದು ಕೇಳಿಕೊಂಡರು.
ನಕಾರ :
ಜಿಲ್ಲಾ ತಂಡದ ಕ್ರೀಡಾಪಟುಗಳಿಗೆ ವಿಶೇಷ ಸಮವಸ್ತ್ರ ನೀಡಲು ಇಲಾಖೆಯಲ್ಲಿ ಅವಕಾಶವಿಲ್ಲ, ಆದರೆ ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿಗಳು ಆದೇಶ ಮಾಡಿದರೆ ವಿಶೇಷ ಅನುದಾನದಲ್ಲಿ ಕ್ರೀಡಾಪಟುಗಳಿಗೆ ಸಮವಸ್ತ್ರ ಒದಗಿಸಬಹುದೆಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಉದ್ಘಾಟನೆ:
ನ.30 ರಂದು ಬೆಳಿಗ್ಗೆ 8 ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದು, ಶಾಸಕ ಆನಂದ ನ್ಯಾಮಗೌಡ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಎಲ್ಲ ಮತಕ್ಷೇತ್ರದ ಶಾಸಕರು, ಸಚಿವರು, ವಿಪ ಸದಸ್ಯರು, ನಗರಸಭೆ ಅಧ್ಯಕ್ಷ ದಾನೇಶ ಘಾಟಗೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಜೆ ನಡೆಯುವ ಬಹುಮಾನ ವಿತರಣಾ ಸಮಾರಂಭದಲ್ಲಿ ಪಿಯು ನಿದೇರ್ಶಶಕ ರ್.ರಾಮಚಂದ್ರನ್ ಹಾಗೂ ಅನೇಕರು ಅತಿಥಿಗಳು ಅಗಮಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬಿಎಲ್ಡಿ ಆಡಳಿತಾಧಿಕಾರಿ, ಶ್ರೀಕಾಂತ ಲಗಳಿ, ಬಿ.ಆರ್. ಪಾಟೀಲ, ಪ್ರಾಚಾರ್ಯ ಎಂ.ಎಂ.ಪುಟ್ಟಣ್ಣವರ, ಸೈಕ್ಲಿಸ್ಟ್ ಸಂಘ ಅಧ್ಯಕ್ಷ ವೆಂಕಪ್ಪ ಎಂಟೆತ್ತು, ವಿಠ್ಠಲ ಬುಜರ್ಿ, ಐ.ಎಸ್.ನ್ಯಾಮಗೌಡ, ಶರಣು ಬಂಡಿ, ಹಿಪ್ಪರಗಿ ಪ್ರಾಚಾರ್ಯ ಬೆಕ್ಕೇರಿ, ಎಸ್.ಕೆ. ಜಂಬಗಿ, ಸಿ.ಬಿ.ಪಾಟೀಲ, ಗುರು ಜನವಾಡ, ಸದಾಶಿವ ಮಾದರ ಅನೇಕರು ಇದ್ದರು.