ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ: ಕೊಪ್ಪದ ಸಲಹೆ
ತಾಳಿಕೋಟಿ 10: ಕ್ರೀಡೆಯಲ್ಲಿ ಸೋಲು-ಗೆಲುವು ಸಹಜವಾಗಿರುತ್ತದೆ. ಸೋತವರು ಗೆಲುವಿನ ಆತ್ಮಶಕ್ತಿ ಬೆಳೆಸಿಕೊಳ್ಳಬೇಕು. ಸೋತೆವು ಎಂದು ಚಿಂತಿಸದೆ ಮುಂದಿನ ಗೆಲುವಿಗೆ ಸಿದ್ಧತೆ ಮಾಡಿಕೊಳ್ಳಬೇಕು. ಉತ್ತಮ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು ಎಂದು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಆರ್. ಎಲ್. ಕೊಪ್ಪದ ಹೇಳಿದರು.
ಪಟ್ಟಣದ ಎಸ್.ಕೆ. ಕಾಲೇಜು ಮೈದಾನದಲ್ಲಿ ತಾ.ಪಂ. ತಾಳಿಕೋಟಿ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರದ ಇವರ ಸಹಯೋಗದಲ್ಲಿ ಹಮ್ಮಿಕೊಂಡ ತಾಳಿಕೋಟಿ ತಾಲೂಕಿನ ಗ್ರಾಮೀಣ ಮಟ್ಟದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ತಾಲೂಕಿನ ವ್ಯಾಪ್ತಿಗೆ ಬರುವ ಸುಮಾರು 14 ಗ್ರಾ.ಪಂನ ಕ್ರೀಡಾಪಟುಗಳು ಭಾಗವಹಿಸಿ ಈ ಕೂಟದಲ್ಲಿ ಮುಖ್ಯವಾಗಿ ಕಬಡ್ಡಿ, ಖೋಖೋ, ಕುಸ್ತಿ ಹಾಗೂ ಎತ್ತಿನ ಬಂಡಿ ಸ್ಪಧರ್ೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಬಡ್ಡಿ ಪಂದ್ಯದಲ್ಲಿ ಕೊಣ್ಣೂರ ಗ್ರಾ.ಪಂ ಪ್ರಥಮ ಹಾಗೂ ಭಂಟನೂರ ಗ್ರಾ.ಪಂ ದ್ವಿತೀಯ, ಖೋಖೋದಲ್ಲಿ ಬೊಮ್ಮನಹಳ್ಳಿ ಗ್ರಾ.ಪಂ ಪ್ರಥಮ, ಕೊಡಗಾನೂರ ಗ್ರಾ.ಪಂ ದ್ವಿತೀಯ, ಎತ್ತಿನ ಬಂಡಿಯಲ್ಲಿ ಗ್ರಾ.ಪಂ ಹಿರೂರದ ಶಾಂತಪ್ಪ ಬಸಪ್ಪ ದೊಡಮನಿ ಪ್ರಥಮ ಸ್ಥಾನಪಡೆದುಕೊಂಡರು.
ಕುಸ್ತಿ ಸ್ಫರ್ಧೆ ಯಲ್ಲಿ ಕೆಜಿಯಲ್ಲಿ ರಿಯಾಜ್ ಚೌಧರಿ, 55 ಕೆಜಿಯಲ್ಲಿ ಬಸವರಾಜ ತಳೂಳ್ಳಿ, 75 ಕೆಜಿಯಲ್ಲಿ ಹಣಮಗೌಡ ಆನೇಸೂರ ಹಾಗೂ 95 ಕೆಜಿಯಲ್ಲಿ ಶಿವಾನಂದ ಗೊಲ್ಲರ ಪ್ರಥಮ ಸ್ಥಾನ ಪಡೆದುಕೊಂಡರು.
ಎಲ್ಲ ವಿಜೇತರಿಗೆ ತಾಲೂಕಾ ಪಂಚಾಯತ ಸಹಾಯಕ ನಿರ್ದೇಶ ಕಿ ಎಸ್. ಎಸ್. ಬಿರಾದಾರ, ಪಿಡಿಓ ಗಳಾದ ಬಿ.ಎಂ. ಸಾಗರ, ಎಸ್.ಆಯ್. ದಳವಾಯಿ, ಎ.ಸಿ. ಕಿರಣಗಿ, ಸಿ.ಎಸ್. ಮಠ, ಎಸ್. ವಾಯ್. ತಳವಾರ ಕಾರ್ಯದರ್ಶಿ , ಎಚ್.ಜಿ. ಚೌಧರಿ, ಮಹಾಂತಗೌಡ ದೊರೆಗೋಳ, ಚೌಧರಿ, ಆರೀಫ ಹೊನ್ನುಟಗಿ, ಸಂಗನಗೌಡ ಬಿರಾದಾರ ಇದ್ದರು