ದೇಶದ ಸಮೃದ್ಧಿ ನೃತ್ಯ ನಾಟಕ ಸಂಗೀತದಿಂದ ಮಾತ್ರ ಸಾಧ್ಯ: ಕೆ. ಚನ್ನಪ್ಪ
ಬಳ್ಳಾರಿ29: ರಮೇಶ್ಗೌಡ ಪಾಟೀಲ್ ಕಲಾ ಟ್ರಸ್ಟ್ (ರಿ) ಬಳ್ಳಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಸಾಮಾನ್ಯ ಯೋಜನೆ ಆಡಿಯಲ್ಲಿ ಸಂಗೀತ ನಾಟಕ ಸಂಭ್ರಮ ಕಾರ್ಯಕ್ರಮವನ್ನು ರಾಘವ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಘವ ಮೆಮೋರಿಯಲ್ ಅಸೋಸಿಯೇಷನ್ ನ ಗೌರವ ಅಧ್ಯಕ್ಷರಾಗಿರುವ ಕೆ.ಚನ್ನಪ್ಪನವರು ಮಕ್ಕಳಿಗೆ ವಿದ್ಯೆಯ ಜೊತೆಗೆ ಕಲೆಯಲ್ಲಿ ಸಾಧನೆ ಮಾಡುವ ಮನೋಭಾವವನ್ನು ಬೆಳೆಸಬೇಕು ಯುವಕರನ್ನ ರಂಗಭೂಮಿಗೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದು ನುಡಿದರು.
ರಂಗಗೀತೆಗಳ ಪರಂಪರೆ ಉಳಿಯಬೇಕು ಡಾ.ಮನ್ಸೂರು ಸುಭದ್ರಮ್ಮ ರವರ ಹಾಗೆ ಶಾಸ್ತ್ರೀಯ ಬದ್ಧವಾದ ಹಾಡಿಗೆ ಎಲ್ಲರೂ ಗಮನಹರಿಸಬೇಕು ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಬೇಕು ಕಲೆ ಒಂದು ದಿನದಲ್ಲಿ ಸಾಧಿಸುವಂತಹ ವಿದ್ಯೆಯಲ್ಲ ವರ್ಷಗಟ್ಟಲೆ ಸಾಧನ ಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶ್ರಾಂತ ಉಪನಿದರ್ೇಶಕ ಚೋರನೂರು ಟಿ.ಕೊಟ್ರಪ್ಪ ಸಭೆಯ ಅಧ್ಯಕ್ಷತೆ ವಹಿಸಿ ವ್ಯಕ್ತಪಡಿಸಿದರು.
ಅಕ್ಷರಸ್ಥರಿಗೂ, ಅನಕ್ಷರಸ್ಥರಿಗೂ ಏಕಕಾಲದಲ್ಲಿ ಶಿಕ್ಷಣ ನೀಡುವ ಮಾಧ್ಯಮ ರಂಗಭೂಮಿಯ ಚಟುವಟಿಕೆ ಉಳಿದಿರುವುದು ಗ್ರಾಮೀಣ ಪ್ರದೇಶದಲ್ಲಿ ನಾಟಕದಲ್ಲಿ ಪಾತ್ರ ಮಾಡುವ ಮಹಿಳೆಯರನ್ನ ನೋಡುವ ದೃಷ್ಟಿ ಬದಲಾಗಬೇಕು ರಂಗಭೂಮಿಗೆ ಹೊಸ ತಲೆಮಾರಿನ ಅಗತ್ಯ ಇದೆ ಹೊಸ ತಲೆಮಾರಿನವರಿಗೆ ನಾಟಕದ ಅಭಿರುಚಿ ಬೆಳೆಸುವುದರ ಬಗ್ಗೆ ಆಲೋಚಿಸ ಬೇಕಿದೆ ವಿಶ್ವ ವಿಖ್ಯಾತ ಬಳ್ಳಾರಿ ರಾಘವ ಹಾಗೂ ಅನೇಕ ಕಲಾವಿದರನ್ನು ಕೊಟ್ಟಿರುವ ಕೀರ್ತಿ ನಮ್ಮ ಬಳ್ಳಾರಿ ಜಿಲ್ಲೆಗೆ ಇದೆ ಎಂದು ಎಸ್.ಎಸ್.ಎ.ಕಾಲೇಜಿನ ನಾಟಕ ವಿಭಾಗದ ಮುಖ್ಯಸ್ಥರಾದ ಡಾ.ದಸ್ತಗಿರಸಾಬ್ ದಿನ್ನಿ ಯವರು ನುಡಿದರು
ಸಂಗೀತ ನೃತ್ಯ ನಾಟಕಗಳು ನಿರಂತರವಾಗಿ ಈ ವೇದಿಕೆಯಲ್ಲಿ ಪ್ರದರ್ಶನವಾಗುತ್ತಿರುತ್ತವೆ. ಅನೇಕ ರಂಗಮಂದಿರಗಳಿಗೆ ಹೋಲಿಸಿದರೆ ಬಳ್ಳಾರಿಯಲ್ಲಿ ರಾಘವ ಕಲಾ ಮಂದಿರ ವ್ಯವಸ್ಥೆಯಾಗಿ ಇರುವುದು ನೋಡಿದರೆ ನಮ್ಮ ಬಳ್ಳಾರಿಯ ಹೆಮ್ಮೆ ಎಂದು ನಾಡೋಜ ಪ್ರಶಸ್ತಿ ಪುರಸ್ಕೃತ ಬೆಳಗಲ್ಲು ವೀರಣ್ಣ ರವರು ನುಡಿದರು. ವೇದಿಕೆ ಮೇಲೆ ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿಗಳಾದ ಎನ್.ಪ್ರಕಾಶ್ ರವರು ಹಾಗೂ ರಮೇಶ್ ಗೌಡ ಪಾಟೀಲ್ ರವರು ಉಪಸ್ಥಿತರಿದ್ದರು. ನಂತರ ಕೆ.ಸಿ.ಸುಂಕಣ್ಣ ಮತ್ತು ತಂಡದವರು ಸಮೂಹ ನೃತ್ಯವನ್ನು, ವೀಣಾಕುಮಾರಿ ಮತ್ತು ತಂಡದವರು ರಂಗಗೀತೆಗಳನ್ನು ಪ್ರಸ್ತುತಪಡಿಸಿದರು
ಡಾ. ಹೆಲನ್ ಮೈಸೂರು ಮತ್ತು ತಂಡದವರು "ಶಬರಿ" ಎನ್ನುವಂತಹ ಪೌರಾಣಿಕ ನಾಟಕವನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ನಿರೂಪಣೆ ವಿಷ್ಣು ಹಡಪದ ಪ್ರಾರ್ಥನೆ ವೀಣಾ ಸ್ವಾಗತ ರಮಣಪ್ಪ ಭಜಂತ್ರಿ ವಂದನಾರ್ಪಣೆ ವಿ.ರಾಮಚಂದ್ರ ನೆರವೇರಿಸಿಕೊಟ್ಟರು ಕಾರ್ಯಕ್ರಮದಲ್ಲಿ ಅನೇಕ ಕಲಾಭಿಮಾನಿಗಳು ಪಾಲ್ಗೊಂಡು ಯಶಸ್ವಿಗೊಳಿಸಿದರು.