ಸಹಕಾರಿ ಸಂಸ್ಥೆ ಒಬ್ಬ ಶಾಸಕರಿಗಿಂತ ಹೆಚ್ಚು ಕೆಲಸ ಮಾಡುತ್ತಿವೆ: ಕೋರಳ್ಳಿ
ತಾಳಿಕೋಟೆ20: ಸಹಕಾರಿ ಸಂಸ್ಥೆಗಳು ಒಬ್ಬ ಶಾಸಕರಿಗಿಂತ ಹೆಚ್ಚು ಕೆಲಸ ಮಾಡುತ್ತಿವೆ. ಸಂಕಷ್ಟದ ಸಮಯದಲ್ಲಿ ಬಡವರ ಕೈ ಹಿಡಿದು ಲಾಭಕ್ಕಿಂತ ನೆರವಿನ ಹಸ್ತ ಚಾಚುವ ಕಾರ್ಯ ಸಹಕಾರಿ ಸಂಸ್ಥೆಗಳು ಮಾಡುತ್ತವೆ ಎಂದು ವಿಜಯಪುರ ಸಹಕಾರಿ ಯುನಿಯನ್ ಅಧ್ಯಕ್ಷ ಎಂ.ಎಸ್.ಪಾಟೀಲ ಕೋರಳ್ಳಿ ಹೇಳಿದರು.
ಅವರು ಪಟ್ಟಣದ ದಿ.ತಾಳಿಕೋಟೆ ಸಹಕಾರಿ ಬ್ಯಾಂಕ ಲಿ(ಅರ್ಬನ್) ಅಧ್ಯಕ್ಷ ವಿಠ್ಠಲಸಿಂಗ ಹಜೇರಿ ಅವರಿಗೆ ಸಹಕಾರ ರತ್ನ ಪ್ರಶಸ್ತಿ ದೊರೆತ ಹಿನ್ನಲೆಯಲ್ಲಿ ಬ್ಯಾಂಕನ್ ಆಡಳಿತ ಮಂಡಳಿ ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹಕಾರಿ ಇತಿಹಾಸಕ್ಕೆ ನೂರು ವರ್ಷಗಳಾಗುತ್ತಿವೆ. ಇಂತಹ ಸುವರ್ಣ ಸಂದರ್ಭದಲ್ಲಿ ಹಿರಿಯ ವಿಠ್ಠಲಸಿಂಗ ಅವರಿಗೆ ದೊರೆತ ಸಹಕಾರರತ್ನ ಪ್ರಶಸ್ತಿ ಗೌರವ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ದೊರೆತುದುದು ಸೌಭಾಗ್ಯವೇ ಸರಿ. ಇಂತಹ ಸಹಕಾರಿಯನ್ನು ಸಾಯಲು ಬಿಡಬೇಡಿ, ತಶಾಸಕ ಸೋಮನಗೌಡರು ನುಡಿದಂತೆ ನಡೆದಿದ್ದಾರೆ: ಹೆಗರಡ್ಡಿ
ತಾಳಿಕೋಟಿ: ಮತಕ್ಷೇತ್ರದ ಅಭಿವೃದ್ಧಿಗಾಗಿ ಅತಿ ಹೆಚ್ಚು ಅನುದಾನವನ್ನು ತಂದು ಕೆಲಸ ಮಾಡಿದ ಕೀರ್ತಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ)ರಿಗೆ ಸಲ್ಲುತ್ತದೆ. ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆ. ಅವರೊಬ್ಬ ನುಡಿದಂತೆ ನಡೆಯುವ ವ್ಯಕ್ತಿಯಾಗಿದ್ದಾರೆ ಎಂದು ಭಂಟನೂರ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಹೆಗರಡ್ಡಿ ಹೇಳಿದರು.
ಇತ್ತೀಚೆಗೆ ದೇ.ಹಿಪ್ಪರಗಿ ಮತಕ್ಷೇತ್ರದ ಮೈಲೇಶ್ವರ ಗ್ರಾಮದಲ್ಲಿ ರೂ. 1 ಕೋಟಿ ಮೊತ್ತದ ಸಿ.ಸಿ. ರಸ್ತೆ ಕಾಮಗಾರಿಗೆ ಶಾಸಕ ಸೋಮನಗೌಡರು ಭೂಮಿಪೂಜೆ ನೆರವೇರಿಸಲು ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಹಮ್ಮಿಕೊಂಡ ಸನ್ಮಾನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಇಂದು ದೇವರ ಹಿಪ್ಪರಗಿ ಮತಕ್ಷೇತ್ರ ಜಿಲ್ಲೆಯ ಒಂದು ಮಾದರಿ ಕ್ಷೇತ್ರವಾಗುತ್ತಿದೆ. ಇಂಥಹ ಅಭಿವೃದ್ಧಿಯ ಹರಿಕಾರನನ್ನು ಪಡೆದದ್ದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಲು ನಾವೆಲ್ಲರೂ ಸೇರಿ ಪ್ರಯತ್ನಿಸಬೇಕಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸೋಮನಗೌಡರು ಮತಕ್ಷೇತ್ರದ ಅಭಿವೃದ್ಧಿಗಾಗಿ ಶಕ್ತಿಮೀರಿ ಪ್ರಯತ್ನಿಸಿದ್ದೇನೆ. ಇದರಲ್ಲಿ ಯಾವುದೇ ರೀತಿಯ ತಾರತಮ್ಯ ನಾನು ಮಾಡಿಲ್ಲ. ಇನ್ನುಳಿದ ಅವಧಿಯಲ್ಲೂ ಅನುದಾನ ತಂದು ಕೆಲಸ ಮಾಡಲಿದ್ದೇನೆ, ಇದಕ್ಕೆ ನಿಮ್ಮೆಲ್ಲರ ಸಹಕಾರ ನನಗೆ ಬೇಕು ಎಂದರು.
ಈ ಸಮಯದಲ್ಲಿ ಮುಖಂಡರಾದ ಪ್ರಶಾಂತ ಹಾವರಗಿ, ಬಸನಗೌಡ ಬಿರಾದಾರ, ಸಾಹೇಬಣ್ಣ ಆಲ್ಯಾಳ, ಗುರುಗೌಡ ಗುರಡ್ಡಿ, ಸಾಹೇಬಗೌಡ ರಾರಡ್ಡಿ, ಮುತ್ತುಗೌಡ ಮಾಳಿ, ಬೊಮ್ಮನಹಳ್ಳಿ ಗ್ರಾಪಂ ಉಪಾಧ್ಯಕ್ಷ ಶಿವಶಂಕರ ಕಟ್ಟಿಮನಿ, ಸಿದ್ರಾಮಪ್ಪ ಚೌದ್ರಿ, ಬಸಯ್ಯ ಹಿರೇಮಠ, ಪಂಚಯ್ಯ ಹಿರೇಮಠ, ಬ.ಸಾಲವಾಡಗಿ ಗ್ರಾಪಂ ಅಧ್ಯಕ್ಷ ಮಲ್ಲನಗೌಡ ಇದ್ದರು.ಾಳಿಕೋಟೆಯ ಅಣ್ಣಾ ಹಜಾರೆ ಇವರು ಎಂದರು.
ನಿವೃತ್ತ ಪ್ರಧಾನ ವ್ಯವಸ್ಥಾಪಕ ಬಿ.ಕೆ.ಯಡ್ರಾಮಿ ಮಾತನಾಡಿ, ಸಿಬ್ಬಂದಿಯನ್ನು ತಮ್ಮ ಮನೆಯ ಸದಸ್ಯರಂತೆ ಕಾಳಜಿ ಮಾಡಿದವರು ವಿಠ್ಠಲಸಿಂಗ್ ಹಜೇರಿಯವರು. ಲವಕುಶರಂತಿದ್ದ ಸುಬ್ಬಯ್ಯ ಶೆಟ್ರು ಹಾಗೂ ಹಜೇರಿ ಕಾಕಾರ ಶ್ರಮದಿಂದ ಸಹಕಾರಿ ಬ್ಯಾಂಕ್ ಈಗ 200 ಕೋಟಿ ಬಂಡವಾಳ ಹೊಂದಿದೆ ಎಂದರು.
ನಿವೃತ್ತ ಉಪ ನಿಬಂಧಕ ಪಿ.ಬಿ.ಕಾಳಗಿ, ಜಿಲ್ಲಾ ಯುನಿಯನ ಸಹಕಾರಿಯ ಸವಿತಾ ಬಿಸನಾಳ ಮಾತನಾಡಿದರು. ದಿ.ತಾಳಿಕೋಟೆ ಸಹಕಾರಿ ಬ್ಯಾಂಕ್ ನಿಯಮಿತ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ, ಬ್ಯಾಂಕಿನ ನಿವೃತ್ತ ಸಿಬ್ಬಂದಿಗಳು, ಭಾಗವಾನ್ ಕೋ ಆಪ್ ಸೊಸೈಟಿ, ಬಣಜಿಗ ಕ್ಷೇಮಾಭಿವೃದ್ಧಿ ಸಂಘ, ಬಸವೇಶ್ವರ ಸೌಹಾರ್ದ, ಅಡತ್ ಮರ್ಚಂಟ್ಸ ಅಸೋಶಿಯೇಶನ್, ಅಲ್ಲಮಪ್ರಭು ಪತ್ತಿನ ಸಹಕಾರಿ, ಪಂಚಾಚಾರ್ಯ ಸಹಕಾರಿ ಪತ್ತಿನ ಸಂಘ, ಮುಸ್ಲಿಂ ಕೋ-ಆಪ್ ಬ್ಯಾಂಕ್, ಭಾವಸಾರ ಕ್ಷತ್ರೀಯ ಕೋ ಆಪ್, ಪಿಕೆಪಿಎಸ್ ಮಿಣಜಗಿ, ಶ್ರಿನಿಧಿ ಸೌಹಾರ್ದ ಪತ್ತಿನ ಸಹಕಾರಿ ಸೇರಿದಂತೆ ಅನೇಕ ಪ್ರಮುಖರು ಸಹಕಾರ ರತ್ನ ಪುರಸ್ಕೃತರನ್ನು ಗೌರವಿಸಿ ಸನ್ಮಾನಿಸಿದರು. ಬಿ.ಕೆ.ಸಜ್ಜನ ಸ್ವಾಗತಿಸಿದರು. ಶ್ರೀಕಾಂತ ಪತ್ತಾರ ನಿರ್ವಹಿಸಿದರು. ಶಿವಲೀಲಾ ದೇಸಾಯಿ ವಂದಿಸಿದರು.