ಸಿರುಗುಪ್ಪ

ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ

ಅವಿರೋಧವಾಗಿ ಆಯ್ಕೆಯಾದ  ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ

ಸಿರುಗುಪ್ಪ-ತಾಲೂಕಿನ ಬಗ್ಗೂರು ಗ್ರಾಮ ಪಂಚಾಯತ್ ಕಾಂಗ್ರೆಸ್ ಬೆಂಬಲಿತರೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ ಎಂದು ವಿಧಾನಸಭಾ ಕ್ಷೇತ್ರದ ಶಾಸಕ  ಬಿಎಂ ನಾಗರಾಜ್ ಅವರು ಹೇಳಿದರು ನೂತನ ಅಧ್ಯಕ್ಷರಾದ ಚಾಣಕನೂರು ನಾಗಮ್ಮ, ಗಂಡ ಮಲ್ಲಯ್ಯ ಹಾಗೂ ಉಪಾಧ್ಯಕ್ಷ ಕರ್ಚಿಗನೂರು ಸಿ ವೀರೇಶ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಕ್ಕೆ ಅವರ ಯಶಸ್ಸಿಗೆ ದೊರೆತಿರುವ ಗೌರವಕ್ಕೆ ಶಾಸಕ ಬಿ ಎಂ ನಾಗರಾಜ್ ಅವರು ಶಾಲು ಹೂ ಮಾಲೆದೊಂದಿಗೆ ಸನ್ಮಾನಿಸಿ ಅಭಿನಂದಿಸಿ ಗ್ರಾಮ ಪಂಚಾಯತ್ ಮತ್ತು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒಗ್ಗಟ್ಟಾಗಿ ಶ್ರಮಿಸೋಣ ಸರ್ಕಾರದ ಯೋಜನೆಗಳ ಸೌಲಭ್ಯ ಫಲಾನುಭವಿಗಳಿಗೆ ತಲುಪಿಸುವ ಮೂಲಕ ಜನಪರ ಕೆಲಸ ಮಾಡೋಣ ಎಂದರು ಗಜಗಿನ ಹಾಳು ವೀರೇಶ ಗೌಡ ಚಾಣಕನೂರು ಬಗ್ಗೂರು ಗೌಡ, ಬಗ್ಗೂರು ಕೆ ಮಾರೆಪ್ಪ ,ಕೆ ಪಂಪನಗೌಡ, ಹುಲುಗಪ್ಪ, ಕರ್ಚಿಗನೂರು, ಬಗ್ಗೂರು ಗೌಡ, ಜೆ ಬಸವನಗೌಡ, ಶಂಕರಗೌಡ, ಸಿ ವೀರಯ್ಯ, ಕಾಂಗ್ರೆಸ್ ಮುಖಂಡರು ಜಮೀನ್ದಾರ್ ಸೈಯದ್ ಮೋಹಿಯುದ್ದೀನ್ ಖಾದ್ರಿ, ಸಮಾಜ ಸೇವಕ ಅಬ್ದುಲ್ ನಬಿ, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮದ ಮುಖಂಡರು ಇದ್ದರು.

ಸುದ್ದಿ ಓದಿ