ಲೇಖನಗಳು

ಸಮಗ್ರ ಸಂಶೋಧಕ ಡಾ. ಮಲ್ಲೇಶಪ್ಪ ಮಡಿವಾಳಪ್ಪ ಕಲ್ಬುರ್ಗಿ

ಸಮಗ್ರ ಸಂಶೋಧಕ ಡಾ. ಮಲ್ಲೇಶಪ್ಪ ಮಡಿವಾಳಪ್ಪ  ಕಲ್ಬುರ್ಗಿ

ಸತ್ಯಕ್ಕೆ ಬದ್ದನಾಗಿರುವ ಸಂಶೋಧಕನು ಕವಿ ಮತ್ತು ವಿಮರ್ಶಕನಂತೆ ಜನಪ್ರಿಯ ಸಾಹಿತಿಯಾಗಲಾರ.  ಪ್ರಿಯವಾಗಿದ್ದ ಆತನ ಬರವಣಿಗೆ ಜನಪ್ರಿಯವಾಗುವುದಕ್ಕಿಂತ, ಅಪ್ರಿಯವಾಗಿದ್ದ  ಅವನ ಬರೆವಣಿಗೆ ಜನದೂಷಣೆಗೆ ಗುರಿಯಾಗುವುದೇ ಹೆಚ್ಚು.  "ಸತ್ಯ ಹೊಸ್ತಿಲು ದಾಟುವ ಮೊದಲೇ ಸುಳ್ಳು ಊರು ಸುತ್ತಿ ಬಂದಂತೆ". ಎಂಬ ಗಾದೆಯ ಅರ್ಥಕ್ಕೆ ಡಾ. ಎಂ. ಎಂ. ಕಲ್ಬುಗರ್ಿಯವರು ಅನ್ವರ್ಥವಾಗುತ್ತಾರೆ. ಶ್ರೀಯುತರು ಸತ್ಯದ ಬೆನ್ನು ಹತ್ತಿ, ನಿಷ್ಠುರ ಮಾತುಗಳಿಂದ ಲೋಕವಿರೋಧಿಯಾಗಿ ಸತ್ಯವನ್ನು ಶೋಧಿಸುವ ಕಾಯಕದಲ್ಲಿ ತೊಡಗಿ ಸಮಾಜದ ಸಂಕಷ್ಟಗಳಿಗೆ ಪರಿಹಾರ ಒದಗಿಸಿಲು ಶ್ರಮಿಸಿದರು. ಆ ಮೂಲಕ ಉತ್ತಮ ಸಂಶೋಧಕರಾಗಿ ಹೊರಹೊಮ್ಮಿದರು.  ಭೂತಕಾಲದಲ್ಲಿ ಹುದುಗಿ ಹೋಗಿದ್ದ ಸತ್ಯವನ್ನು ಹೊರಗೆಳೆದು, ವರ್ತಮಾನದಲ್ಲಾಗುವ ಅನಾಹುತಗಳಿಗೆ ಮದ್ದನ್ನಾಗಿ ಕಲ್ಪಿಸುವ ಸಲುವಾಗಿ ಸಂಶೋಧನೆ ಎಂಬ ಕಬ್ಬಿಣದ ಕಡಲೆಯನ್ನು ಆಯ್ದುಕೊಂಡು ಅಧ್ಯಯನ ಆರಂಭಿಸಿದರು. ಭೂತಕಾಲದ ಘಟನೆಗಳನ್ನು ಮಾಹಿತಿ ಆಧಾರಗಳಿಂದ ಬೆಳಕಿಗೆ ತರುವುದೇ ಸಂಶೋಧನೆ ಎನಿಸಿಕೊಂಡಿದ್ದ ಕಾಲದಲ್ಲಿ ಸಂಶೋಧನೆ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಕಲ್ಬುಗರ್ಿಯವರು ವರ್ತಮಾನದ ಹಲವು ಆಗುಹೋಗುಗಳಿಗೆ ಭೂತಕಾಲದ ಘಟನೆಗಳೇ ಕಾರಣಎಂದರಿತುಅದನ್ನು ಸಾಬೀತುಪಡಿಸುವ ಅನಿವಾರ್ಯತೆಯ ಸಂಕಷ್ಟದ ಸವಾಲನ್ನು ಎದುರಿಸಬೇಕಿತ್ತು.  ಕೇವಲ ಮಾಹಿತಿ ನಿಷ್ಠ ಮತ್ತು ಆದರ್ಶ ನಿಷ್ಠ ಸಂಶೋಧಕರಾಗಿರದೆ ಶೈಕ್ಷಣಿಕ ಹಾಗೂ ಸಾಮಾಜಿಕ ನೆಲೆಯಲ್ಲಿ ಸಂಶೋಧನೆಯನ್ನು ಕೈಗೊಂಡರು.  ಇದ್ದದ್ದನ್ನು ಪರಿಷ್ಕರಿಣೆಗೊಳಿಸಿ, ಹೊಸದನ್ನು ಶೋಧಿಸಿ, ಸಂಸ್ಕೃತಿ ಮತ್ತು ಚಿಂತನೆಯೊಂದಿಗೆ ಸಂಶೋಧನೆಯನ್ನು ಹೊಂದಿಸಬೇಕಾದ ಸವಾಲನ್ನು ಎದುರಿಸಿದರು. ಡಾ. ಎಂ. ಎಂ. ಕಲ್ಬುಗರ್ಿಯವರು ಕ್ರಿಯಾಶೀಲ ಸಂಶೋಧಕರಾಗಿ ಹೊರ ಹೊಮ್ಮುವ ಕಾಲದಲ್ಲಿ ಸಂಶೋಧನಾಕ್ಷೇತ್ರವು ಸುಲಭವಾಗಿರಲಿಲ್ಲ.  ಚವರ್ಿತಚರ್ವಣ ಎನಿಸಿಕೊಂಡಿದ್ದ ಹಾಗೂ ಶೈಕ್ಷಣಿಕ ಕ್ಷೇತ್ರದ ನಿಷ್ಪ್ರಯೋಜಕ ಶಾಖೆಯಂತಿದ್ದ ಸಂಶೋಧನೆಗೆ ಗಂಭೀರತೆಯನ್ನು ತರಬೇಕಿತ್ತು. ಸಮಾಜೋ ಶೈಕ್ಷಣಿಕ ಶಿಸ್ತನ್ನುಅಳವಡಿಸಬೇಕಿತ್ತು. ಆಕರಶೋಧ ಗ್ರಂಥಗಳ ಮೂಲಕ ಮಾಹಿತಿ ಕ್ರೋಢೀಕರಣವಾಗಿದ್ದ ಈ ವಲಯವನ್ನು ಮುಂದಿನ ಹಂತದ ಕಾರ್ಯಗಳಿಗೆ ವಿಸ್ತರಿಸಬೇಕಿತ್ತು.  ಸಾಮಾಜಿಕ ಪರಿಣಾಮಗಳನ್ನು ಮುಂದುವರಿಸಿಕೊಂಡು ಸಂಶೋಧನೆಯ ಫಲಶೃತಿಯನ್ನು ಹೊಂದಿಸಬೇಕಿತ್ತು. ಮತ್ತುತಮ್ಮ ಸೃಜನಶೀಲ ಮನೋಧರ್ಮಕ್ಕೆ ವಿಮುಖವಾಗಿದ್ದ ಕ್ಷೇತ್ರಕ್ಕೆ ಕೈ ಹಾಕಿ ಸರಿಪಡಿಸಬೇಕಿತ್ತು. ಇಂತಹ ಹತ್ತಾರು ಸವಾಲುಗಳನ್ನು ಮನಗಂಡು ಕಲ್ಬುಗರ್ಿಯವರು ಸಂಶೋಧನೆಗೆ ಮುಂದಾದರು.

ಪ್ರಾರಂಭದಲ್ಲಿ ಸಂಶೋಧನೆಯ ಮೂಲ ಆಕರಗಳನ್ನು ಹುಡುಕಲು ಶಾಸನಗಳ ಅಧ್ಯಯನವನ್ನು ಆರಂಭಿಸಿದರು. ಆ ಮೂಲಕ ಹತ್ತಾರು ವಿಷಯಗಳನ್ನು ಶೋಧಿಸಿದರು.   ಸಂಶೋಧನೆಎಂದರೆ ಕೇವಲ ಇತಿಹಾಸದ ಶೋಧವಲ್ಲ. ಇತಿಹಾಸವನ್ನು ಮುಂದು ಮಾಡಿಕೊಂಡು ವರ್ತಮಾನವನ್ನು ದುರುಪಯೋಗ ಮಾಡಿಕೊಳ್ಳುವವರೊಂದಿಗೆ ನೆಡೆಸುವ ಹೋರಾಟವೆಂದು ಭಾವಿಸಿ ಸತ್ಯವೆಂಬ ಭೂತಕಾಲದ ಬಲದಿಂದಅಸತ್ಯವೆಂಬ ವರ್ತಮಾನ ಕಾಲವನ್ನು ಸರಿಪಡಿಸುವುದೇ ಸಂಶೋಧನೆಯಮೂಲ ಆಶಯಎಂಬುದನ್ನು ತೋರಿಸಿದರು.  ಹಾಗೂ ಶೋಧನೆ ಕೇವಲ ಶೈಕ್ಷಣಿಕ ಕ್ಷೇತ್ರದ ಗಂಭೀರ ಚಟುವಟಿಕೆ ಎಂದಷ್ಟೇ ಭಾವಿಸದೆ- ಅದರ ಫಲಶೃತಿ ಸಮಾಜೋಸಾಂಸ್ಕೃತಿಕ ವಲಯದಲ್ಲಿ ಉತ್ತಮ ಪರಿಣಾಮ ಬೀರುವಂತಿರಬೇಕು ಎಂದು ತಿಳಿಸಿದರು.

ಆಕರಶೋಧ ಮತ್ತು ಆಕರ ವಿಶೇಷಣಗಳಿಗೆ ಆಕರ ವ್ಯಾಖ್ಯಾನಗಳನ್ನು ಪೂರೈಸಿ ಪೂರ್ಣ ಪ್ರಮಾಣದ ಸಂಶೋಧಕರಾಗಿ ಬಿಂಬಿತರಾದರು.  ಪ್ರಮುಖ ಜ್ಞಾನ ಶಾಖೆಗಳಾದ   ಸಾಹಿತ್ಯ, ಇತಿಹಾಸ, ಸಂಸ್ಕ್ಕೃತಿ, ಸಮಾಜೋಧಾಮರ್ಿಕ ಕ್ಷೇತ್ರಗಳ ಶಾಸನ, ಕಾವ್ಯ, ಛಂದಸ್ಸು, ಅಲಂಕಾರ, ಗ್ರಂಥ ಸಂಪಾದನೆ, ಜಾನಪದ ಮೊದಲಾದ ನೆಲೆಗಳಲ್ಲಿ ಹುದುಗಿದ್ದ ಸತ್ಯವನ್ನು ವಿಶ್ಲೇಷಿಸಿ, ವ್ಯಾಖ್ಯಾನಿಸಿದ ಏಕೈಕ ಸಂಶೋಧಕರೆನಿಸಿದರು. ತಮ್ಮ ಐವತ್ತು ವರ್ಷಗಳ ಸಂಶೋಧನಾ ಅನುಭವದ ಆಧಾರದ ಮೇಲೆ 1992 ರಲ್ಲಿ ಕನ್ನಡ ಸಂಶೋಧನಾ ಶಾಸ್ತ  ಎಂಬ ಕೃತಿಯನ್ನು ರಚಿಸಿದರು. ಸತ್ಯ  ಸತ್ವ  ಹಾಗೂ ತತ್ವ ಎಂಬ ಆದರ್ಶಗಳನ್ನು ರೂಢಿಸಿಕೊಂಡಿದ್ದ ಡಾ. ಕಲ್ಬುಗರ್ಿಅವರುತಮ್ಮ ವಿಸ್ತಾರವಾದ ವ್ಯಾಸಾಂಗ, ಖಚಿತ ವಿಷಯಜ್ಞಾನ, ಸಂಶೋಧನಾ ತತ್ವಗಳ ಗ್ರಹಿಕೆ, ಹೊಸದನ್ನು ಹೇಳಬೇಕೆನ್ನುವ ಹಂಬಲ. ಇವು ಅವರನ್ನು ಮೇಲ್ಪಂಕ್ತಿಗೆ ತಂದು ನಿಲ್ಲಿಸಿದವು. ಮತ್ತು ಆ ಸಂಪ್ರದಾಯಕ ಸಂಶೋಧನಾದೃಷ್ಠಿಯ ದಿಟ್ಟಿಗೆ ಅಂಟಿಕೊಂಡಿದ್ದ ಜಿಗುಟು ಮನೋಧರ್ಮ.  ಶೈಕ್ಷಣಿಕ ಔನ್ಯತ್ಯವನ್ನು ಕಾಪಾಡಬೇಕೆಂಬ ಹಂಬಲ, ಇವು ಅವರ ಅಸಾಧಾರಣ ಸಾಧನೆಗೆ ಅಡಿಗಲ್ಲಾಗಿ ಪರಿಣಮಿಸಿದವು.

ಬಾಲ್ಯ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನಗೆಡ್ಡೇವಾಡ (ತಾಯಿಯತವರು ಮನೆ) ಯಲ್ಲಿ ನವೆಂಬರ್ 06 1932 ರಂದು ಮಡಿವಾಳಪ್ಪ ಹಾಗೂ ಗುರಮ್ಮ ದಂಪತಿಗಳಿಗೆ ಜನಿಸಿದರು.  ಬಾಲ್ಯದಲ್ಲಿಯೇ ಅಪ್ರತಿಮಾ ಬುದ್ದಿಮತ್ತೆಯನ್ನು ಹೊಂದಿದ್ದ ಕಲ್ಬುಗರ್ಿಯವರು ಇಪ್ಪತ್ತಕ್ಕೂ ಅಧಿಕ ಜನರಿದ್ದ ಮಧ್ಯಮ ವರ್ಗದಕೂಡು ಕುಟುಂಬದಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಮಲ್ಲೇಶಪ್ಪ ಮಡಿವಾಳಪ್ಪ ಕಲ್ಬುಗರ್ಿ ಇದ್ದು  ನಾಡಿನ ಸಾಹಿತ್ಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವಲಯದಲ್ಲಿ  ಎಂ. ಎಂ. ಕಲ್ಬುಗರ್ಿ ಎಂದೇ ಖ್ಯಾತರು. ಶ್ರಮ ವಹಿಸಿ ದುಡಿದು, ಕೂಡಿಬಾಳುವ ಮನೋಧರ್ಮವನ್ನು ಹೊಂದಿದ್ದ ಇವರು ಆದರ್ಶ ಬದುಕನ್ನು ಹಂಬಲಿಸಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ ಯರಗಟ್ಟಿನಲ್ಲೇ ಪೂರೈಸಿದರು.  ಪ್ರತಿಭಾವಂತ ವಿದ್ಯಾಥರ್ಿಯಾಗಿದ್ದಇವರು ಏಳನೇ ತರಗತಿಯಲ್ಲಿ ಪ್ರಥಮದಜರ್ೆಯಲ್ಲಿ ಪಾಸಾಗಿ ಸಿಂದಗಿ ಹೈಸ್ಕೂಲಿನಲ್ಲಿ ಸುಲಭವಾಗಿ ಎಂಟನೇ ತರಗತಿಗೆ ಪ್ರವೇಶ ಪಡೆದರು. ಅಲ್ಲಿಯೂ ಹತ್ತನೇ ತರಗತಿಯಲ್ಲಿ ಪ್ರಥಮ ದಜರ್ೆಯಲ್ಲಿ ಉತ್ತೀರ್ಣರಾಗಿ ವಿಜಯಪುರದ ವಿಜಯ ಕಾಲೇಜಿನಲ್ಲಿ ಮುಂದಿನ  ಶಿಕ್ಷಣಕ್ಕೆ  ಪ್ರವೇಶ ಪಡೆದರು.  ಹದಿನೆಂಟನೆ ವಯಸ್ಸಿನ  ಕಾಲೇಜು ಅಧ್ಯಯನದ ಅವಧಿಯಲ್ಲಿ  ಎಂ. ಎಂ. ಕಲ್ಬುಗರ್ಿಯವರು  ಬಿ ಟಿ ಸಾಸನೂರು ಅವರಂಥ ವಿದ್ವಾಂಸರನ್ನು ಗುರುಗಳಾಗಿ ಪಡೆದರು. ಡಾ ಸಾಸನೂರು ಅವರು ತಮ್ಮ ಶ್ರಮ ಮತ್ತು ಶಿಸ್ತಿನ ಗುಣದಿಂದ ಉತ್ತಮ ಪ್ರಾಧ್ಯಾಪಕರನ್ನಾಗಿ  ರೂಪಿಸಿದರು. ವಿಜಯ ಕಾಲೇಜಿನಲ್ಲಿ ಪದವಿ ಪಡೆದು ಸ್ನಾತಕೋತ್ತರ ಪದವಿಗಾಗಿ ಕನರ್ಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ವಿದ್ಯಾಥರ್ಿಯಾಗಿ ಸೇರಿದರು. ಈ ಹಂತದಲ್ಲಿ ಪ್ರೊ. ಆರ್ ಸಿ ಹಿರೇಮಠ ಅವರು ತಮ್ಮ ಅಪಾರ ವಿದ್ವತ್ತಿನಿಂದ ಗ್ರಾಮೀಣ ಪರಿಸರದ ಕಲ್ಲಿನಂತಿದ್ದ ಕಲ್ಬುಗರ್ಿಯವರನ್ನು ಒಂದು ಸುಂದರ ಶಿಲೆಯನ್ನಾಗಿ ಹೊರ ಹೊಮ್ಮಿಸಿದರು. ಅಂದರೆ-ಉತ್ತಮ ಸಂಶೋಧಕರನ್ನಾಗಿ ರೂಪಿಸಿದರು. ಈ ನಡುವೆ ಫೆಬ್ರವರಿ 06 1966ರಲ್ಲಿ ಮುದ್ದೇಬಿಹಾಳದ ಉಮಾದೇವಿಯವರನ್ನು ವಿವಾಹವಾದರು. ತುಂಬು ಕುಟುಂಬದಲ್ಲಿ ಬದುಕಿದ ಎಂ. ಎಂ. ಕಲ್ಬುಗರ್ಿ ಮತ್ತು ಉಮಾದೇವಿ ದಂಪತಿಗಳಿಗೆ ಪೂಣರ್ಿಮಾ, ಪ್ರತಿಮಾ, ಶ್ರೀವಿಜಯ ಮತ್ತು ರೂಪದಶರ್ಿ ಎಂಬ ನಾಲ್ಕು ಮಕ್ಕಳನ್ನು ಪಡೆದು ಸುಖಮಯಜೀವನ ಸಾಗಿಸುತ್ತಿದ್ದರು. 

ಅಧ್ಯಯನವನ್ನು ಮುಂದುವರಿಸಿ  "ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ ಎಂಬ ವಿಷಯದ ಮೇಲೆ ಪಿ ಹೆಚ್ ಡಿ ಪದವಿಯನ್ನು ಆರಂಭಿಸಿದರು. ಈ ಹಂತದಲ್ಲಿ ಅನೇಕ ಆಕರ ಗ್ರಂಥಗಳನ್ನು ಶೋಧಿಸಿದರು. ಊದಾಹರಣೆಗೆ  ಬಸವಣ್ಣನವರ ಶಾಸನಗಳು 1968.  ಶಾಸನಗಳಲ್ಲಿ ಶಿವಶರಣರು ಎಂಬ ಕೃತಿಗಳನ್ನು  ರಚಿಸಿದರು. ಆರಂಭದ ಸಂಶೋಧನಾಕಾರ್ಯದಲ್ಲಿ ಶಾಸನಗಳ ಅಧ್ಯಯನದ ಕಡೆಗೆ ತಮ್ಮ ಆಸಕ್ತಿಯನ್ನು ತೋರಿಸಿದ್ದರು.  ನಂತರ ಸಾಹಿತ್ಯ, ಛಂದಸ್ಸು,  ವ್ಯಾಕರಣ, ಅಲಂಕಾರ, ಇತಿಹಾಸ, ಜಾನಪದ ಹಾಗೂ ಸಂಪಾದನೆಯಂತ ಕ್ಷೇತ್ರಗಳಲ್ಲಿ ಸಂಶೋಧನೆಯನ್ನು ಮಾಡಿದರು. ಇದಕ್ಕೆ ಫಲವೆಂಬಂತೆ 1962 ರಿಂದ 1966ರ ವರೆಗೆ ಕನರ್ಾಟಕ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಅವರು ರೂಢಿಸಿಕೊಂಡ ಬೋಧನಾ ವಿಧಾನ, ಅಧ್ಯಯನ ಮತ್ತು ಬರವಣಿಗೆಯಂಥ ಶ್ರಮವು ಅವರನ್ನು ಉತ್ತಮ ಸಂಶೋಧಕನನ್ನಾಗಿ ರೂಪಿಸಿದವು. ತೀಕ್ಷ್ಣದೃಷ್ಠಿ- ಹರಿತವಾದವಿಚಾರಗಳು ಸಂಪ್ರದಾಯವನ್ನೊಪ್ಪದ ನಡೆ- ನಿಷ್ಠುರವಾದಿ, ರಾಗಧ್ವೇಷರ ಹಿತನಿರ್ಣಯ, ಕಾರ್ಯಗೌರವದ ಪ್ರಜ್ಞೆ ಹಾಗೂ ಸತ್ಯಶೋಧಕದಂತ ಗುಣಗಳು ಪರಿಪಕ್ವವಾದ ಕಾರ್ಯಪ್ರವೃತ್ತಿಗೆ ಅಡಿಗಲ್ಲುಗಳಾಗಿದ್ದು ಹೆಚ್ಚು ಹೆಚ್ಚು ಶತ್ರುಗಳನ್ನು ಸೃಷ್ಠಿಸಿದವು. ಮತ್ತು ಹಿರಿಯ ವಿದ್ವಾಂಸರ ಕೃತಿಗಳನ್ನು ಪರಿಶೀಲಿಸಿ ದೋಷಗಳನ್ನು ಹುಡುಕಿ ಹೇಳುವಷ್ಟು ಧೈರ್ಯ ತಂದವು.  ಕೇಶೀರಾಜನ ಶಬ್ದ ಮಣಿದರ್ಪಣ, ಶ್ರೀವಿಜಯನ ಕವಿರಾಜಮಾರ್ಗದಂತ ಅನೇಕ ಕೃತಿಗಳನ್ನು ಪುನರವಲೋಕನ ಮಾಡುವಷ್ಟು ಬೆಳೆದರು. ಇವರ ಈ ಪ್ರಬುದ್ಧತೆ ನಾಡಿನ ಹಿರಿಯ ಸಾಹಿತಿಗಳು, ವಿದ್ವಾಂಸರು. ಸಂಶೋಧಕರು ಹಾಗೂ ಚಿಂತಕರಾದ ಪ್ರೊ. ಡಿ ಎಲ್ ನರಸಿಂಹಾಚಾರ್ಯ, ಟಿ ಬಿ ವೆಂಕಟ ಚಲಶಾಸ್ತಿ, ದೇಜವರೆಗೌಡ, ಹಾ. ಮಾ. ನಾಯಕ, ಬಿವಿವೇಕರೈ, ಹಂಪಾನಾಗರಾಜಯ್ಯ, ಸಿ. ಪಿ. ಕೃಷ್ಣಮೂತರ್ಿ, ಆರ್. ಶೇಷಾದ್ರಿ ಮುಂತಾದವರ ಮೆಚ್ಚುಗೆಗೆ ಪಾತ್ರವಾಗಿತ್ತು.  ಸರಿಸುಮಾರು ಐವತ್ತು ವರ್ಷಗಳ ಸಂಶೋಧನಾ ಅನುಭವದ ಆಧಾರದ ಮೇಲೆ ಕನ್ನಡ ಸಂಶೋಧನಾ ಶಾಸ್ತೃ ಎಂಬ ಕೃತಿಯನ್ನು ರಚಿಸಿದರು. ಆ ಮೂಲಕ ಸಂಶೋಧಕನ ನಿಜವಾದ ಜವಬ್ದಾರಿ ಏನೆಂಬುದನ್ನು ತಿಳಿಸಿದರು.    ಅದೊಂದು ತಪಸ್ಸು ಅದನ್ನು ಸಾಧಿಸಲು ಸತ್ಯವನ್ನು ಪಾಲಿಸಿ, ನಿಷ್ಠುರತೆಯಫಲವನ್ನು ಅನುಭವಿಸಿ, ಸಾಮಾಜಿಕ ನಿಜದ ಹೂರಣವನ್ನು ಉಣಿಸಿ, ಪ್ರಗತಿಯ ಹಾದಿಯನ್ನು ತೋರಬೇಕಾಗುತ್ತದೆ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.  ಅವರೆಹೆಳಿದಂತೆ, ಈ ನಾಡಿನಲ್ಲಿ ಸಂಶೋಧಕನು ಆಗಾಗ ಸಣ್ಣ ಸಣ್ಣ ಶಿಲುಬೆಗಳನ್ನು ಏರಬೇಕಾಗುತ್ತದೆ. ಅನೇಕಅಗ್ನಿ ಕುಂಡಗಳನ್ನು ದಾಟಬೇಕಾಗುತ್ತದೆ. ಆದರೆ ಕಾಲ ಕೆಳಗಿನ ಅಗ್ನಿ ಗಿಂತಕಣ್ಣ ಮುಂದಿನ ಬೆಳಕು ದೊಡ್ಡದು. ಎಂಬ ನಂಬಿಕೆಯಿಂದ ಬದುಕಿದವನು ನಾನು. ಎಂದಿದ್ದಾರೆ. ಶೋಧನೆ ಎಂಬುದು ಬಹಳಷ್ಟು ಸಲ ಅಲ್ಪವಿರಾಮ, ಅರ್ಧವಿರಾಮಗಳ ಮೂಲಕ ಪೂರ್ಣವಿರಾಮದ ಕಡೆಗೆ ಸಾಗುವ ಕ್ರಿಯೆಯಾಗಿದೆ ಎಂದಿದ್ದಾರೆ.

ನಿಜವಾದ ಸಂಶೋಧಕನಿಗೆ ಸಂಶೋಧನೆ ಎಂಬುದು ಕೇವಲ ಸತ್ಯದ ಅನ್ವೇಷಣೆ ಅಲ್ಲ, ಸತ್ಯದಸಹವಾಸ. ನಿಜ ಜೀವನದಲ್ಲಿ ಸತ್ಯವನ್ನು ಪ್ರೀತಿಸುವ, ಅಸತ್ಯವನ್ನು ಪ್ರತಿಭಟಿಸುವ ಮತ್ತು ಸಮಾಜದ ಪ್ರತಿಭಟನೆಯನ್ನು ಎದುರಿಸುವ ಧೈರ್ಯ ತೋರಬೇಕಾಗುತ್ತದೆ ಎಂದು ಹೇಳುತ್ತಾ ಸಂಶೋಧನೆ ಹಾಗೂ ಸಂಶೋಧಕನ ಘನತೆಯನ್ನು ಎತ್ತಿಹಿಡಿದಿದ್ದಾರೆ.  ಧಾರವಾಡದ ಕನರ್ಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಪೀಠದ ಯೋಜನೆಯೊಂದರ ಸಹಾಯಕ ಸಂಶೋಧಕರಾಗಿ ಆರಂಭಗೊಂಡ ಕಲ್ಬುಗರ್ಿಯವರ ವೃತ್ತಿಜೀವನ, ಅಧ್ಯಯನ ಪೀಠದ ಉಪನ್ಯಾಸಕ, ಪ್ರವಚಕ, ಪ್ರಾಧ್ಯಾಪಕ. ಮುಖ್ಯಸ್ತ ಹಾಗೂ ನಿದರ್ೇಶಕರಾಗುವವರೆಗೂ ಮುಂದುವರೆದು ಸಂಶೋಧನಾ ಕ್ಷೇತ್ರಕ್ಕೆ ಘನತೆ ಮತ್ತು ಗಂಭೀರತೆಯನ್ನು ತಂದರು, ಶ್ರೇಷ್ಠ ಸಂಶೋಧಕ ಎನಿಸಿಕೊಂಡರು. ಇದರ ಪರಿಣಾಮವಾಗಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೆಮಕಗೊಂಡು 1998 ರಿಂದ 2001 ರವರೆಗೆ ಸೇವೆ ಸಲ್ಲಿಸಿ ಸಂಶೋಧನಾ ಕ್ಷೇತ್ರದಲ್ಲಿ ಆಮೂಲಾಗ್ರ ಹೊಸತನವನ್ನು ತಂದರು. ಸಂಶೋಧನಾ ವಿಧಾನದಲ್ಲಿ ಆಕರ ಮುಖ್ಯ ಸಂಶೋಧನೆ.  ವಿಶ್ಲೇಷಣಾ ಮುಖ್ಯ ಸಂಶೋಧನೆ.  ವ್ಯಾಖ್ಯಾನ ಮುಖ್ಯ ಸಂಶೋಧನೆ. ಸಮಾಜ ಮುಖ್ಯ ಸಂಶೋಧನೆ. ಆನಂದ ಮುಖ್ಯ ಸಂಶೋಧನೆ ಹಾಗೂ ಶಾಸ್ತೀಯ ಮುಖಿ ಸಂಶೋಧನೆ ಎಂಬ ಅಧ್ಯಾಯಗಳನ್ನೊಳಗೊಂಡ 'ಕನ್ನಡ ಗ್ರಂಥ ಸಂಪಾದನಾ ಶಾಸ್ತ್ರ ಎಂಬ ಕೃತಿಯನ್ನು ರಚಿಸಿ ಸಂಶೋಧನೆಯೂ ಒಂದು ಶಾಸ್ತೃ ಎಂದು ಸಾದರಪಡಿಸಿದರು. ಹೀಗೆ ಶಾಸನಾಧ್ಯಯನದಿಂದ ಆರಂಭವಾದ ಸಂಶೋಧನಾ ಕಾರ್ಯವನ್ನು ಕನ್ನಡ ಸಾಹಿತ್ಯ, ಇತಿಹಾಸ, ಛಂದಸ್ಸು, ಅಲಂಕಾರ, ಜಾನಪದ ಮುಂತಾದ ಕ್ಷೇತ್ರಗಳಿಗೆ ವಿಸ್ತರಿಸಿಕೊಂಡು ನೂರಾರು ಕೃತಿಗಳ ಪ್ರಥಮ ಆಕರ ಕೃತಿಯನ್ನು ಶೋಧಿಸಿ ಭೂತಕಾಲದ ಸತ್ಯವನ್ನು ವರ್ತಮಾನಕ್ಕೆ ತಿಳಿಸಿದರು. ಹತ್ತಾರು ಕೃತಿಗಳನ್ನು ರಚಿಸಿದರು. ವಿವಿಧ ಸ್ಥರದ ಹುದ್ದೆಗಳನ್ನು ಅಲಂಕರಿಸಿದರು. ಹಲವಾರು ಪ್ರಶಸ್ತಿ ಗೌರವ ಸನ್ಮಾನಗಳನ್ನು ಸ್ವೀಕರಿಸಿದರು. ಬರಹಗಾರರಾಗಿ, ಸಂಶೋಧಕರಾಗಿ, ಪ್ರಾಧ್ಯಾಪಕರಾಗಿ, ಅನೇಕ ಹೊಸ

ಸಾಧನೆಗಳನ್ನು ಮಾಡಿದರು.  ತಮ್ಮಮಾರ್ಗ 04 ಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿತು. ಇದು ಅವರನ್ನು ಸಮಗ್ರ ಸಂಶೋಧಕರನ್ನಾಗಿ ಹೊರ ಹೊಮ್ಮಿಸಿತು. ಸತ್ಯಕ್ಕಾಗಿ ಬದುಕಿದ ಡಾ. ಎಂ. ಎಂ. ಕಲ್ಬುಗರ್ಿಯವರು ಸತ್ಯವನ್ನು ಸಹಿಸದ ಹಂತಕರಿಂದ  30/08/ 2015ರಂದು ಬೆಳಗಿನ ಜಾವ ಇಹಲೋಕ ತ್ಯಜಿಸಿದರು. ಆದರೆಅವರ ಶೈಕ್ಷಣಿಕ, ಸಾಮಾಜಿಕ, ಹಾಗೂ ಸಾಂಸ್ಕೃತಿಕ ವಲಯದಲ್ಲಿನ ಸಾಧನೆ ಅನಂತ ಕಾಲದವರೆಗೂ  ಉಳಿಯುವಂತಾಯಿತು.  ಸಮಾಜೋ ಸಾಂಸ್ಕೃತಿಕ ಕ್ಷೇತ್ರವು ಹೊಸ ಚೈತನ್ಯದೊಂದಿಗೆ ಉಳಿದು ಬೆಳೆಯುವುದಕ್ಕೆ ಬುನಾದಿ ಹಾಕಿದಂತಾಯ್ತು. ಬರುವ ಪೀಳಿಗೆಗೆ ಸಂಶೋಧನೆ ಸುಲಭ ಸರಳವಾದ ಅಧ್ಯಯನ ಕ್ಷೇತ್ರವಾಯಿತು.

- ವೆಂಕಟೇಶ ಈಡಿಗರ

ರಾಣೇಬೆನ್ನೂರು

ಮೊ.900869831 

ಸುದ್ದಿ ಓದಿ