ಧಾರವಾಡ - ಹುಬ್ಬಳ್ಳಿ

ಆಯೋಗದ ಅಧ್ಯಕ್ಷರಿಂದ ಇನಾಂವೀರಾಪುರ ಗ್ರಾಮ ಭೇಟಿ; ಪರಿಸ್ಥಿತಿ ಅವಲೋಕನ

ಆಯೋಗದ ಅಧ್ಯಕ್ಷರಿಂದ ಇನಾಂವೀರಾಪುರ ಗ್ರಾಮ ಭೇಟಿ; ಪರಿಸ್ಥಿತಿ ಅವಲೋಕನ

ಹುಬ್ಬಳ್ಳಿ ಡಿ.25: ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ.ಎಲ್‌.ಮೂರ್ತಿ ಅವರು, ದಲಿತ ಕುಟುಂಬದ ದೌರ್ಜನ್ಯ ಹಿನ್ನಲೆಯಲ್ಲಿ ಇನಾಂವೀರಾಪುರ ಗ್ರಾಮಕ್ಕೆ ಇಂದು ಮಧ್ಯಾಹ್ನ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು. 

ದಲಿತ ಕುಟುಂಬಗಳು ವಾಸಿಸುವ ಓಣಿ ಹಾಗೂ ದೌರ್ಜನ್ಯಕ್ಕೆ ಒಳಗಾದ ವಿವೇಕಾನಂದ ಅವರ ಮನೆ, ದೌರ್ಜನ್ಯ ಮತ್ತು ಕೊಲೆ ಕೃತ್ಯ ನಡೆದ ಸ್ಥಳ ಪರೀಶೀಲಿಸಿ, ಸ್ಥಳೀಯ ನಿವಾಸಿಗಳಿಂದ, ಪೊಲೀಸ್ ಅಧಿಕಾರಿಗಳಿಂದ ಮತ್ತು ದಲಿತ ಸಂಘಟನೆಗಳ ಪ್ರಮುಖರಿಂದ ವಿವರವಾದ ಮಾಹಿತಿ ಪಡೆದುಕೊಂಡರು.ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು. 

ಈ ಸಂದರ್ಭದಲ್ಲಿ ಆಯೋಗದ ಸದಸ್ಯರಾದ ಸುನೀಲ ಉಕ್ಕಲಿ, ಕಾರ್ಯದರ್ಶಿ ಡಾ.ಎಚ್‌.ಎಸ್‌.ಶಿವರಾಮು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಡಿಸಿಪಿ ಮಾನಿಂಗ ನಂದಾಗಾವಿ, ಡಿವೈಎಸ್‌.ಪಿ ವಿನೋಧ ಮುಕ್ತೆದಾರ ಎಸಪಿ ಶಿವಪ್ರಕಾಶ ನಾಯ್ಕ್‌ , ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭ. ಪಿ., ತಹಶಿಲ್ದಾರ ಜಿ.ಆರ್‌.ಮಜ್ಜಗಿ, ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹಿರೇಮಠ, ಇನಸ್ಪೆಕ್ಟರಗಳಾದ ಮುರಗೇಶ ಚನ್ನಣ್ಣವರ, ಪ್ರಭು ಗಂಗೆನಹಳ್ಳಿ, ವೀರಭದ್ರ​‍್ಪ ಖಡಿ, ಹಾಗೂ ವಿವಿಧ ದಲಿತ ಸಂಘಟನೆಗಳ ಪ್ರಮುಖರಾದ ಎಂ.ಅರವಿಂದ, ಗುರುನಾಥ ಉಳ್ಳಿಕಾಶಿ, ಪ್ರೇಮನಾಥ ಚಿಕ್ಕತುಂಬಳ, ಪರಮೇಶ ಕಾಳೆ, ಶ್ರೀಧರ ಸೇರಿದಂತೆ ಇತರ ದಲಿತ ಸಂಘಗಳ ಪ್ರಮುಖರು ಇದ್ದರು. 


ಸುದ್ದಿ ಓದಿ