ತಾಳಿಕೋಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಚೋರಗಸ್ತಿ ನೇಮಕ
ತಾಳಿಕೋಟಿ 29: ಮುದ್ದೇಬಿಹಾಳ ಮತಕ್ಷೇತ್ರದ ತಾಳಿಕೋಟಿ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬಸಾಬ ಚೋರಗಸ್ತಿ ಇವರನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಇವರು ಆದೇಶವನ್ನು ಹೊರಡಿಸಿದ್ದಾರೆ ಎಂದು ನಿಕಟಪೂರ್ವ ಅಧ್ಯಕ್ಷ ಸಿದ್ದನಗೌಡ ಪಾಟೀಲ ತಿಳಿಸಿದರು.
ಪಟ್ಟಣದ ಈದ್ಗಾ ಶಾದಿ ಹಾಲನಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರು ಹೊರಡಿಸಿದ ಆದೇಶ ಪತ್ರವನ್ನು ನೂತನ ಅಧ್ಯಕ್ಷ ಮಹೆಬೂಬ ಚೋರಗಸ್ತಿ ಇವರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಕಳೆದ ಇಪ್ಪತ್ತು ವರ್ಷಗಳಿಂದ ನಾನು ತಾಳಿಕೋಟಿ ಬ್ಲಾಕ್ನ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೆನೆ. ಪಕ್ಷ ನನಗೆ ಹೆಚ್ಚಿನ ಜವಾಬ್ದಾರಿ ವಹಿಸಿಕೊಟ್ಟು ಜಿಲ್ಲಾ ಕಾರ್ಯದಶರ್ಿಯನ್ನಾಗಿ ಮಾಡಿದೆ. ಈಗ ಈ ಹೊಣೆಯನ್ನು ಮಹೆಬೂಬ ಚೋರಗಸ್ತಿಗೆ ವಹಿಸಿಕೊಡಲಾಗುತ್ತಿದೆ. ಅವರ ಅವಧಿಯಲ್ಲಿ ಪಕ್ಷ ಅತ್ಯುತ್ತಮವಾಗಿ ಕೆಲಸ ಮಾಡಲಿ ನಮ್ಮೆಲ್ಲರ ಸಹಕಾರ ಅವರೊಂದಿಗಿರಲಿ ಎಂದರು.
ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ ಮಾತನಾಡಿ ಚೋರಗಸ್ತಿ ಇವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ನಮಗೆಲ್ಲರಿಗು ಸಂತೋಷವನ್ನುಂಟು ಮಾಡಿದೆ. ಅವರು ಅನುಭವಿಗಳು ಪುರಸಭೆ ಅಧ್ಯಕ್ಷರಾಗಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಸರ್ವಜನಾಂಗದ ಹಿತ ಬಯಸುತ್ತದೆ. ಚೋರಗಸ್ತಿಯವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ನೂತನ ಅಧ್ಯಕ್ಷ ಚೋರಗಸ್ತಿ ಅವರು ಪಕ್ಷ ನನ್ನ ಮೇಲೆ ವಿಶ್ವಾಸವಿರಿಸಿ ಈ ಜವಾಬ್ದಾರಿಯನ್ನು ಹೊರಿಸಿದೆ. ಬರಲಿರುವ 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ನಾವೇಲ್ಲರು ಶಕ್ತಿಮೀರಿ ಪ್ರಯತ್ನಿಸಬೇಕಾಗಿದೆ. ಇದಕ್ಕಾಗಿಯೆ ನನಗೆ ನಿಮ್ಮೇಲ್ಲರ ಸಹಕಾರ ಬೇಕು ನನಗೆ ಈ ಜವಾಬ್ದಾರಿಯನ್ನು ವಹಿಸಿಕೊಟ್ಟ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಹಾಗೂ ವಿಶೇಷವಾಗಿ ಮಾಜಿ ಸಚಿವ ಅಪ್ಪಾಜಿ ನಾಡಗೌಡರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
ಈ ಸಂಧರ್ಭದಲ್ಲಿ ಮುಸ್ಲಿಂ ಧರ್ಮಗುರು ಸೈಯದ ಶಕೀಲ ಅಹ್ಮದ ಖಾಜಿ ಮುಖಂಡರಾದ ಸಿದ್ಧನಗೌಡ ಪಾಟೀಲ, ಬಿ ಎಸ್ ಗಬಸಾವಳಗಿ, ಎಸ್ ಬಿ ಕಟ್ಟಿಮನಿ, ಎಂ ಜಿ ಪಾಟೀಲ, ಬಿ ಎನ್ ಹಿಪ್ಪರಗಿ, ಪ್ರಭುಗೌಡ ಮದರಕಲ್ಲ, ಮಲ್ಲಿಕಾಜರ್ುನ ಪಟ್ಟಣಶೇಟ್ಟಿ, ಗನಿಸಾಬ ಲಾಹೋರಿ, ಎ ಡಿ ಎಕೀನ, ಸಂಗನಗೌಡ ಅಸ್ಕಿ, ಫಯಾಜ ಉತ್ನಾಳ, ಸಂಗನಗೌಡ ನಾಡಗೌಡ, ಹಸನ ಮನಗೂಳಿ, ಮಂಜೂರ ಬೇಪಾರಿ, ಮಶಾಕ ಚೋರಗಸ್ತಿ, ಗೋಪಾಲ ವಿಜಾಪೂರ ರಜಾಕ ಮಮದಾಪೂರ, ಅಬ್ಬಾಸ ನಿಡಗುಂದಿ, ಖಾಸಿಂ ಅಬಾಲೆ, ಹುಸೇನ ಜಮಾದಾರ, ಮೈನು ಬೇಪಾರಿ, ಎಂ ಎ ಮೇತ್ರಿ ಇದ್ದರು