ತಾಳಿಕೋಟಿ

ಶಾಂತರೀತಿಯಿಂದ ಹೋಳಿ ಹಬ್ಬ ಆಚರಿಸಿ

ಶಾಂತರೀತಿಯಿಂದ ಹೋಳಿ ಹಬ್ಬ ಆಚರಿಸಿ

ಪಿ. ಎಸ್. ಐ ಸುರೇಶ ಮಂಟೂರ ಸಲಹೆ | ಕಾನೂನು ಉಲ್ಲಂಘಿಸಿದರೆ ಕ್ರಮ

ತಾಳಿಕೋಟಿ: ಹೋಳಿ ಹಬ್ಬ ಶಾಂತಿ ಭಾತೃತ್ವದ ಹಬ್ಬವಾಗಿದೆ. ಎಲ್ಲ ಸಮಾಜದವರೂ ಸೇರಿಕೊಂಡು ಪಟ್ಟಣದ ಶಾಂತಿಸುವ್ಯವಸ್ಥೆ ಕಾಪಾಡಿಕೊಂಡು ಶಾಂತರೀತಿಯಿಂದ ಹಬ್ಬವನ್ನು ಆಚರಿಸಿ ಎಂದು ಪಿ ಎಸ್ ಐ ಸುರೇಶ ಮಂಟೂರ ಹೇಳಿದರು.

ಪಟ್ಟಣದ ಪೊಲೀಸ್ಠಾಣೆ ಆವರಣದಲ್ಲಿ ಶುಕ್ರವಾರ ಹೋಳಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ಶಾಂತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಯುವಕರು ಹಲೆಗೆ ಬಾರಿಸುವುದರಲ್ಲಿ ಸಂಯಮದಿಂದ ವರ್ತಿಸಬೇಕು.

ಪರೀಕ್ಷೆಗಳು ಹತ್ತಿರ ಇರುವುದರಿಂದ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.

ಕಾಮದಹನ ಮಾಡುವವರು ಠಾಣೆಗೆ ಮುಂಚಿತವಾಗಿ ಮಾಹಿತಿ ತಿಳಿಸಿ ಕಾನೂನು ಸುವ್ಯವಸ್ಥೆಗೆ ಸಹಕರಿಸಿ ನಿಯಮ ಉಲ್ಲಂಘಿಸಿದರೆ ಕ್ರಮ ಅನಿವಾರ್ಯವಾಗುತ್ತದೆ. ಹಬ್ಬದ ಆಚರಣೆ ಶಾಂತಿ ಸುವ್ಯವಸ್ಥಿತವಾಗಿರಲಿ ಎಂದರು.

ಪುರಸಭೆ ಮಾಜಿ ಸದಸ್ಯರಾದ ಪ್ರಭುಗೌಡ ಮದರಕಲ್ಲ, ಇಬ್ರಾಹಿಂ ಮನಸೂರ ಸದಸ್ಯರಾದ ಜಯಸಿಂಗ್ ಮೂಲಿಮನಿ,

ಸಮಾಜ ಸೇವಕರಾದ ಎಸ್. ಎ. ನಾಲಬಂದ ಮಾತನಾಡಿ ಇವತ್ತು ಪಟ್ಟಣದಲ್ಲಿ ಸೌಹಾರ್ದತೆಯ ವಾತಾವರಣವಿದ್ದು ಎಲ್ಲರೂ ಒಂದಾಗಿ ಈ ಹಬ್ಬವನ್ನು ಆಚರಿಸುತ್ತೇವೆ. ಈ ಹಬ್ಬ ಭಾತೃತ್ವದ ಸಂಕೇತವಾಗಿದೆ ಎಂದರು.

ಮಾ. 08 ಹಾಗೂ 09 ರಂದು ಹೋಳಿ ಬಣ್ಣದಾಟ ಇರಲಿದೆ. ಮಾ. 05 ರಂದು ಹಿಂದೂ ಮಹಾ ಸಂಘಟನೆಯ ವತಿಯಿಂದ ಹಲಗಿ ಮೇಳ ಆಯೋಜಿಸಲಾಗಿದೆ ಎಂದು ಪುರಸಭೆ ನಾಮ ನಿರ್ದೇ ಶಿತ ಸದಸ್ಯ ರಾಘವೇಂದ್ರ ವಿಜಾಪೂರ ತಿಳಿಸಿದರು.ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ ಉಪಾಧ್ಯಕ್ಷ ಮುಸ್ತಫಾ ಚೌದ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಕೆ. ಚೋರಗಸ್ತಿಪ್ರಕಾಶ ಹಜೇರಿ ಪುರಸಭೆ ಸದಸ್ಯರಾದ ಅಣ್ಣಪ್ಪಜಗತಾಪ, ನಿಂಗರಾಜ ಕುಂಟೋಜಿ, ಶರಣಗೌಡ ಗೊಟಖಂಡ್ಕಿ,ಡಿ. ವಿ. ಪಾಟೀಲ, ಎಂ. ಕೆ ಪಟ್ಟಣಶೆಟ್ಟಿ, ಫಯಾಜ ಉತ್ನಾಳ, ಸಿಕಂದರ ಡೋಣಿ, ಗೌಸ ನಾಸೀರ, ಮೋದಿನಸಾ ನಗಾರ್ಚಿ , ಎ.ಎಸೈ. ಎ.ಎಸ್.ನಾಯ್ಕೋಡಿ, ಗಿರೀಶ ಚಲವಾದಿ, ಬಸವರಾಜ ಕಳ್ಳಿಗುಡ್ಡ, ಬಸವರಾಜ ಹಡಗಲಿ,ಎಂ. ಎಲ್. ಪಟ್ಟೇದ, ಮಹ್ಮದ ಡೋಣೂರ, ಇದ್ದರು 

ಸುದ್ದಿ ಓದಿ