ಹೋಳಿ ಹಬ್ಬ, ರಂಜಾನ ಸೌಹಾರ್ದತೆಯಿಂದ ಆಚರಿಸಿ:ಪಿಎಸ್‌ಐ ನಾಯಕ
ಕೊಲ್ಹಾರ 28: ದೇಶಿಯ ಹಬ್ಬಗಳನ್ನು ಹಿಂದಿನ ದಿನಮಾನಗಳಲ್ಲಿ ಹಿಂದೂ ಹಾಗೂ ಮುಸ್ಲಿಂ ಎಲ್ಲರೂ ಒಗ್ಗಟ್ಟಾಗಿ ಶಾಂತಿ ಸೌಹಾರ್ದತೆಯಿಂದ ಆಚರಣೆ ಮಾಡುತ್ತಿದ್ದರು ಎಂದು ಪಿಎಸ್‌ಐ ಅಶೋಕ ನಾಯಕ ಹೇಳಿದರು. ಪಟ್ಟಣದ ಪೋಲಿಸ ಠಾಣೆಯ ಆವರಣದಲ್ಲಿ ಶುಕ್ರವಾರ ಸಂಜೆ ಹೋಳಿ ಹಬ್ಬ ಮತ್ತು ರಂಜಾನ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಭಾರತ ಒಂದು ದೇಶಕ್ಕಾಗಲಿ ಜಾತಿಗಾಗಲಿ ಸೀಮಿತವಾಗಿಲ್ಲ. ಬೇರೆ ಬೇರೆ ಧರ್ಮದ ಆಚಾರ ವಿಚಾರಗಳನ್ನು ಇಟ್ಟುಕೊಂಡು ಅವರದ್ದೆಯಾದ ಸಾಂಪ್ರದಾಯಿಕ ಹಬ್ಬಗಳನ್ನು ಆಚರಣೆ ಮಾಡಿಕೊಂಡು ಬಂದಿರುತ್ತಾರೆ.
ಅಂತಹ ಸಂದರ್ಭಗಳಲ್ಲಿ ಕಿಡಿಗೇಡಿಗಳು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಿದರೆ ಅಂತವರ ಮೇಲೆ ಪಟ್ಟಣದ ಎಲ್ಲಾ ಕಡೆಗೂ ಸಿಸಿಟಿವಿ ಅಳವಡಿಕೆ ಮಾಡಲಾಗಿದ್ದು ಅವರ ಮೇಲೆ ಪೋಲಿಸ ನಿಗಾ ವಹಿಸುತ್ತೇವೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಭಾವನೆ ಕೆರಳಿಸುವ ವಿಷಯಗಳನ್ನು ಪೋಸ್ಟ್ ಮಾಡಿದರೆ ಅಂತವರ ಮೇಲೆ ಶಿಸ್ತು ಕ್ರಮ ಕೈಗೊಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಪಟ್ಟಣ ಪಂಚಾಯಿತಿ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ, ರಫೀಕ್ ಪಕಾಲಿ, ಉಸ್ಮಾನ್ ಪಟೇಲ್, ಟಿ.ಟಿ ಹಗಿದಾಳ, ಅಲ್ಲಾಬಕ್ಷ ಬಿಜಾಪುರ ಸೇರಿದಂತೆ ಪಟ್ಟಣದ ಹಿಂದೂ ಹಾಗೂ ಮುಸ್ಲಿಂ ಸಮಾಜದ ಮುಖಂಡರು ಹಾಗೂ ಪೋಲಿಸ ಸಿಬ್ಬಂದಿಗಳು ಉಪಸ್ಥಿತರಿದ್ದರು.