ಲಸಿಕೆ ಪಡೆದ ಮೇಲೂ ಕೊರೋನಾ ಸೋಂಕು: ನಟ ಪರೇಶ್ ರಾವಲ್
ಬೆಂಗಳೂರು, ಮಾರ್ಚ್ 27: ಬಾಲಿವುಡ್ ನ ಖ್ಯಾತ ನಟ ಪರೇಶ್ ರಾವಲ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಪರೇಶ್ ರಾವಲ್ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ್ದಾರೆ. 'ದುರದೃಷ್ಟವಶಾತ್ ನನಗೆ ಕೊರೋನಾ ಸೋಂಕು ತಗುಲಿದೆ. ಕಳೆದ 10 ದಿನಗಳಿಂದ ನನ್ನ ಜೊತೆ ಸಂಪರ್ಕಕ್ಕೆ ಬಂದವರೆಲ್ಲ ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ' ಎಂದು ಟ್ವೀಟ್ ಮಾಡಿದ್ದಾರೆ. ಪರೇಶ್ ರಾವಲ್ ಇತ್ತೀಚಿಗಷ್ಟೆ ಕೊರೊನಾ ಲಸಿಕೆ ಪಡೆದಿದ್ದರು. ಮಾರ್ಚ್ 9ರಂದು ಲಸಿಕೆ ಹಾಕಿಸಿಕೊಂಡಿದ್ದ ಬಗ್ಗೆ ಪರೇಶ್ ರಾವಲ್ ಫೋಟೋ ಶೇರ್ ಮಾಡಿದ್ದರು. ಲಸಿಕೆ ಪಡೆದ ಬೆನ್ನಲ್ಲೇ ಪರೇಶ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.ಪರೇಶ್ ರಾವಲ್ ಶೀಘ್ರ ಗುಣಮುಖರಾಗಲಿ ಎಂದು ಬಾಲಿವುಡ್ ನಟ, ನಟಿಯರು ಹಾರೈಸಿದ್ದಾರೆ.