ರಾಷ್ಟ್ರೀಯ

ದೇಶದಲ್ಲಿ ಕೋಟಿ ದಾಟಿದ ಕೊರೋನ ಸೋಂಕಿತರ ಸಂಖ್ಯೆ.....

ದೇಶದಲ್ಲಿ ಕೋಟಿ ದಾಟಿದ  ಕೊರೋನ ಸೋಂಕಿತರ  ಸಂಖ್ಯೆ.....

ನವದೆಹಲಿ, ಜ 4:  ದೇಶದಲ್ಲಿ 24 ಗಂಟೆಗಳ ಅವಧಿಯಲ್ಲಿ  16,504 ಹೊಸ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿ,  ಈವರೆಗೆ  ಒಟ್ಟು ಸೋಂಕಿತರ ಸಂಖ್ಯೆ 1.03 ಕೋಟಿಗೆ  ಏರಿಕೆಯಾಗಿದೆ ಎಂದು  ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲಿ ಸದ್ಯ ಒಟ್ಟು ಸೋಂಕಿತರ ಸಂಖ್ಯೆ 1,03,40,470ಕ್ಕೆ ಏರಿಕೆಯಾಗಿದ್ದು, ಇನ್ನು ನಿನ್ನೆ 19,557 ಸೋಂಕಿತರು ಗುಣಮುಖರಾಗಿದ್ದಾರೆ.

ಆ ಮೂಲಕ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 99,46,867ಕ್ಕೆ ಏರಿಕೆಯಾಗಿದೆ. ಪ್ರಸ್ತುತ ದೇಶದಲ್ಲಿ 2,43,953 ಸಕ್ರಿಯ ಪ್ರಕರಣಗಳಿವೆ.   ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 214 ಮಂದಿ ಸೋಂಕಿತರು ಮೃತಪಟ್ಟಿದ್ದು  ಇದರೊಂದಿಗೆ ದೇಶದಲ್ಲಿ ಕೊರೋನಾಗೆ ಬಲಿಯಾದವರ  ಸಂಖ್ಯೆ 1,49,649ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ಹೇಳಿದೆ. ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿನ ಕಾರಣಕ್ಕೆ 7,35,978 ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ವರೆಗೂ 17,56,35,761 ಕೊರೋನ  ಪರೀಕ್ಷೆ ನಡೆಸಲಾಗಿದೆ ಎಂದೂ ಐಸಿಎಂಆರ್ ಹೇಳಿದೆ. 



ಸುದ್ದಿ ಓದಿ