ಮನರಂಜನೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಸ್ ನಾರಾಯಣ್ ಪುತ್ರ ಪವನ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಸ್ ನಾರಾಯಣ್ ಪುತ್ರ ಪವನ್

ಬೆಂಗಳೂರು, ಫೆ.22 :ಸ್ಯಾಂಡಲ್​ವುಡ್​ನ ಹಿರಿಯ ನಿರ್ದೇಶಕ ಎಸ್​ನಾರಾಯಣ್​ ಅವರ ದ್ವಿತೀಯ ಪುತ್ರ ಪವನ್​  ದಾಂಪತ್ಯ ಜೀವನಕ್ಕೆ‌ ಕಾಲಿಟ್ಟಿದ್ದಾರೆ.ಇಂದು ಬೆಳಗ್ಗೆ 7.30 ರಿಂದ 8.30ಕ್ಕೆ ನಡೆದ ಶುಭ ಮುಹೂರ್ತದಲ್ಲಿ ಪವಿತ್ರಾ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.ಆರತಕ್ಷತೆಯಲ್ಲಿ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಟ ಶರಣ್, ನಟ ಶ್ರೀ ಮುರಳಿ,  ಮುಖ್ಯಮಂತ್ರಿ  ಚಂದ್ರು, ನಟಿಯರಾದ ಸುಧಾರಾಣಿ‌‌, ಮಾಳವಿಕಾ ಅವಿನಾಶ್,ಅಮೂಲ್ಯ ಹಾಗೂ ಸಚಿವ ಗೋಪಾಲಯ್ಯ ,  ಸಂಸದೆ ಸುಮಲತಾ, ರಾಕ್ ಲೈನ್ ವೆಂಕಟೇಶ್  ಕಾರ್ಯಕ್ರಮದಲ್ಲಿ ಭಾಗಿಯಾಗಿ ನವದಂಪತಿಗೆ ಶುಭ  ಕೋರಿದರು.ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಪವನ್​, ತಮ್ಮ ತಂದೆಯ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿಯೂ‌‌ ಕಾರ್ಯನಿರ್ವಹಿಸಿದ್ದಾರೆ. ಈ ವರ್ಷ ಸೆಟ್ಟೇರಿದ ಡಾರ್ಲಿಂಗ್​ ಕೃಷ್ಣ ಅಭಿನಯದ  ‘ಶುಗರ್​ ಪ್ಯಾಕ್ಟರಿ’ ಚಿತ್ರದಲ್ಲಿ ಪವನ್​ ನಟಿಸಿದ್ದಾರೆ.ಅಲ್ಲದೇ,  'ಮುತ್ತು ರತ್ನ’ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಪವನ್  ಕಾಣಿಸಿಕೊಳ್ಳಲಿದ್ದಾರೆ.  ಇನ್ನು, ‘ನವಮಿ’ ಎಂಬ ಚಿತ್ರಕ್ಕೆ ಪವನ್ ನಿರ್ದೇಶನ ಮಾಡಿದ್ದಾರೆ. ಆದರೆ, ಈ ಎರಡು  ಚಿತ್ರಗಳು ಇನ್ನೂ ಬಿಡುಗಡೆಗೊಂಡಿಲ್ಲ.


ಸುದ್ದಿ ಓದಿ