ಜಮಖಂಡಿ

ಬೀದಿ ದನಗಳ ಕಾಳಗದಿಂದ ಗೂಳಿ ಕಣ್ಣಿಗೆ ತೀವ್ರ ಗಾಯ: ಶಸ್ತ್ರಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಪತ್ರಕರ್ತ ಶಶಿಕಾಂತ ತೇರದಾಳ

ಬೀದಿ ದನಗಳ ಕಾಳಗದಿಂದ ಗೂಳಿ ಕಣ್ಣಿಗೆ ತೀವ್ರ ಗಾಯ: ಶಸ್ತ್ರಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಪತ್ರಕರ್ತ ಶಶಿಕಾಂತ ತೇರದಾಳ

ಜಮಖಂಡಿ 01 : ನಗರದಲ್ಲಿ ಬೀದಿ ದನಗಳ ಕಾಳಗದಿಂದ ಗೂಳಿಯೊಂದಕ್ಕೆ ಎಡ ಭಾಗದ ಕಣ್ಣಿಗೆ ಕೊಡುಗಳಿಂದ ತಿವಿದ್ದರಿಂದ. ಕಣ್ಣುಗುಡೆ ಕಳೆದುಕೊಂಡು ತೀವ್ರ ರಕ್ತ ಸಾವ್ರದಿಂದ ಬಳಲುತ್ತಾ .ಕೆಳೆದ ಮೂರನಾಲ್ಕು ದಿನದಿಂದ ಬೀದಿಯಲ್ಲಿ ತಿರುಗಾಡುತ್ತಿದ್ದನ್ನು ನೋಡಿದ ಪತ್ರಕರ್ತ ಶಶಿಕಾಂತ ತೇರದಾಳ ವೈದ್ಯರ ಸಹಾಯದಿಂದ ಶಸ್ತ್ರಚಿಕಿತ್ಸೆ ಕೊಡಿಸಿ ಮಾನವೀಯತೆಯನ್ನು ಮೆರೆದಿದ್ದಾರೆ. 

ನಗರದ ವಿಜಯಪೂರ ರಸ್ತೆಯ ಬದಿಯಲ್ಲಿ ಗೂಳಿಯೊಂದು ಮಲಗಿದ್ದು. ಎಡಭಾಗದ ಕಣ್ಣುಗುಡೆ ಕಿತ್ತು ಹೊರಗೆ ಬಂದು ತೀವ್ರ ರಕ್ತಸಾವ್ರದಿಂದ ಬಳಲುತ್ತಿದ ಬೀದಿ ಗೂಳಿಯನ್ನು ಕಂಡ ಪತ್ರಕರ್ತ ಶಶಿಕಾಂತ ತೇದಾಳ ಅವರು ಪಶು ವೈದ್ಯಕೀಯ ಇಲಾಖೆಯ ವೈದ್ಯರಿಗೆ ಪೋನ್ ಕರೆ ಮಾಡಿದ ತಕ್ಷಣ. ವೈದ್ಯರು ಸ್ಥಳಕ್ಕೆ ಆಗಮಿಸಿ. ಗೂಳಿಯನ್ನು ಹಿಡಿಯಲು ಹಿಂದೇಟ್ಟು ಹಾಕುವ ಸಮಯದಲ್ಲಿ. ರಸ್ತೆಯಲ್ಲಿ ಹೋಗುವ ಸಾರ್ವಜನಿಕರ ಸಹಾಯ ಪಡೆದು. ಬೀದಿ ಗೂಳಿಗೆ ಶಸ್ತ್ರಚಿಕಿತ್ಸೆಯನ್ನು ನೀಡಲಾಗಿದೆ. ಗೂಳಿಯ ಎಡಭಾಗದ ಕಣ್ಣು ಸಂಪೂರ್ಣವಾಗಿ ಗಾಯವಾಗಿದ್ದು. ಅದನ್ನು ಪಶುವೈದ್ಯರು ಶಸ್ತ್ರಚಿಕಿತ್ಸೆ ಮಾಡಿ. ಕಣ್ಣುಗುಡೆಯನ್ನು ಹೊರೆಗೆ ತೆಗೆದು. ಓಷಧಿಯನ್ನು ಹಾಕಿ ಸ್ವಚ್ಚಗೊಳಿಸಿದರು.  

ಇದೇ ಸಂದರ್ಭದಲ್ಲಿ ಬಸವರಾಜ ಹೆಗ್ಗರಿ ಅವರು ಗೂಳಿಯ ಕಾಲಿಗೆ ಹಗ್ಗವನ್ನು ಕಟ್ಟಿ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿದರು. ಶಸ್ತ್ರಚಿಕಿತ್ಸೆಗೆ ಬೇಕಾದ ವಸ್ತುಗಳನ್ನು ಗೀರೀಶ ಕಡ್ಡಿ ಅವರು ನೀಡಿದರು. ಹಿರಿಯ ಪಶುವೈದ್ಯಾಧಿಕಾರಿ ಈಶ್ವರ ಹೊಸಮನಿ, ಪಶುವೈದ್ಯಕೀಯ ಸಹಾಯಕ ಚೇತನ ಗುರವ್ವ ಶಸ್ತ್ರಚಿಕಿತ್ಸೆ ಮಾಡಿದರು. ಸಂತೋಷ ಕೋಳಿ, ಮಹಮ್ಮದ ಮೋಮಿನ, ಆಲಮ್ಮ ಮಳಲ್ಲಿ, ಬಸು ಪೂಜಾರಿ, ರಿಯಾಜ ಮುಲ್ಲಾ ಸೇರಿದಂತೆ ಅನೇಕ ಇದ್ದರು. 

ಪೋಟೋ : ಎ, ಬಿ, ಸಿ, ಬೀದಿ ಗೂಳಿಯೊಂದು ಕಣ್ಣುಗುಡೆ ಕಳೆದುಕೊಂಡು ತೀವ್ರ ರಕ್ತಸಾವ್ರದಿಂದ ಬಳಲುತ್ತಿದ್ದನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಿರುವುದು. 


ಸುದ್ದಿ ಓದಿ