ಕಟ್ಟಡ ಸಾಮಗ್ರಿಗಳ ಪ್ರದರ್ಶನದ ಬಿಲ್ಡ್ ಎಕ್ಸ್ಪೋ-2025; ಬಿಲ್ಡ್ ಎಕ್ಸ್ಪೋ ಎಲ್ಲರ ಸಂಪರ್ಕ ಕೊಂಡಿಯಾಗಿ ಕಾರ್ಯಮಾಡುತ್ತಿದೆ- ಮಹೇಶ ಟೆಂಗಿನಕಾಯಿ
ಧಾರವಾಡ 26: ಕೇಂದ್ರದ ಶಾಸಕರಾದ ಮಹೇಶ ಟೆಂಗಿನಕಾಯಿ ನಿರ್ಮಾಣ ಕ್ಷೇತ್ರದ ನವೀನ ತಂತ್ರಜ್ಞಾನಗಳು, ಉತ್ಪನ್ನಗಳು ಮತ್ತು ಸೇವೆಗಳು ಪ್ರದರ್ಶಿಸಲು, ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಉದ್ಯಮಿಗಳು, ಗುತ್ತಿಗೆದಾರರು, ಎಂಜಿನಿಯರ್ಗಳು, ವಾಸ್ತುಶಿಲ್ಪಿಗಳು ಒಂದೇ ವೇದಿಕೆಯಲ್ಲಿ ಸೇರಿಸಲು, ಸ್ಥಳೀಯ ಹಾಗೂ ರಾಷ್ಟ್ರೀಯ ಕಂಪನಿಗಳಿಗೆ ಮಾರುಕಟ್ಟೆ ಅವಕಾಶ ಕಲ್ಪಿಸಲು, ಹೂಡಿಕೆದಾರರು ಮತ್ತು ಅಭಿವೃದ್ಧಿಕಾರರ ನಡುವೆ ಸಂಪರ್ಕ ಬೆಳೆಸಲು ಹಾಗೂ ಪರಿಸರ ಸ್ನೇಹಿ, ಸ್ಥಿರ ಕಟ್ಟಡ ಪದ್ಧತಿಗಳನ್ನು ಉತ್ತೇಜಿಸಲು ಇದು ಉತ್ತಮ ವೇದಿಕೆಯಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಕೇಂದ್ರದ ಶಾಸಕರಾದ ಮಹೇಶ ಟೆಂಗಿನಕಾಯಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ, ಲೋಕಲ್ ಸೆಂಟರ್ ಧಾರವಾಡ ಮತ್ತು ಟರ್ಬೊ ಸ್ಟೀಲ್ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಕಾಲೇಜಿನ ಆವರಣದಲ್ಲಿ ಏರಿ್ಡಸಿದ ಬಿಲ್ಡ್ ಎಕ್ಸ್ಪೋ -2025 ರ ಉದ್ಘಾಟನಾ ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಬಿಲ್ಡ್ ಎಕ್ಸ್ಪೋ ನಿರ್ಮಾಣ ಕ್ಷೇತ್ರದ ಬೆಳವಣಿಗೆ, ಗುಣಮಟ್ಟ ಮತ್ತು ನವೀನತೆಯನ್ನು ಉತ್ತೇಜಿಸುವ ಮಹತ್ವದ ವೇದಿಕೆಯಾಗಿದೆ. ಇದು ಉದ್ಯಮ, ಉದ್ಯೋಗ ಮತ್ತು ಆರ್ಥಿಕ ಅಭಿವೃದ್ಧಿಗೆ ನೇರವಾಗಿ ಸಹಕಾರ ನೀಡುತ್ತದೆ ಎಂದು ಹೇಳಿದರು. ಟರ್ಬೊ ಸ್ಟೀಲ್ ನ ಮಾರಾಟ ವಿಭಾಗದ ಎಸ್.ಜಿ.ಎಮ್ ಶಿವಪುತ್ರ್ಪ ಅವರು ಮಾತನಾಡಿ, ಗುಣಮಟ್ಟ, ಗ್ರಾಹಕರ ಮತ್ತು ಉಧ್ಯಮಿಗಳ ಉತ್ತಮ ಸಂಪರ್ಕ ಕೊಂಡಿಯಾಗಿ ಇಂತಹ ಬಿಲ್ಡ್ ಎಕ್ಸ್ಪೋ ಕಾರ್ಯಕ್ರಮಗಳು ಸಹಕಾರಿಯಾಗಿರುತ್ತದೆ. ಇದು ಮಾರಾಟದ ಉದ್ದೇಶ ಇದ್ದರೂ ಅವರ ಸಾರ್ವಜನಿಕರ ಅಭಿಪ್ರಾಯದಿಂದ ಮುಂದಿನ ಅಭಿವೃದ್ಧಿ ಕಾರ್ಯಕ್ಕೆ ಸಹಾಯಕವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸನ ಅಧ್ಯಕ್ಷರಾದ ಸುನೀಲ ಬಾಗೇವಾಡಿ ವಹಿಸಿ ಮಾತನಾಡಿ ನಮ್ಮ ಅಸೋಸಿಯೇಷನ್ ಧಾರವಾಡದಲ್ಲಿ ಕಟ್ಟಡ ಕಟ್ಟುವವರಿಗೆ ತಂತ್ರಜ್ಞಾನ ಪುನಃಚೇತನಕ್ಕೆ ವೇದಿಕೆಯನ್ನು ಕಲ್ಪಿಸಿಕೊಡುವುದೇ ಈ ಬಿಲ್ಡ್ ಎಕ್ಸ್ಪೋ ಉದ್ದೇಶ. ಇದಕ್ಕೆ 27, 28 ರಂದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದರೆ ಇದರ ಉದ್ದೇಶ ಫಲಿಸಿದಂತೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಇಂ. ದಾಮೋದರ ಹೆಗಡೆ ಪ್ರಾರ್ಥಿಸಿದರು.ಅಸೋಸಿಯೇಷನ್ ನ ಉಪಾಧ್ಯಕ್ಷರಾದ ಅರುಣಕುಮಾರ ಶೀಲವಂತ ಸ್ವಾಗತಿಸಿದರು. ಬಿಲ್ಡ್ ಎಕ್ಸ್ಪೋ -2025 ರ ಸಂಚಾಲಕರಾದ ಅಜಿತ ಕರೋಗಲ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಸೋಸಿಯೇಷನ್ ನ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ ವಂದಿಸಿದರು.
ನಂತರ ಸಂಜೆ 6-00ಕ್ಕೆ ಮಾರ್ತಾಂಡಪ್ಪ ಕತ್ತಿ ಅವರ ನೇತೃತ್ವದಲ್ಲಿ ಕಲಾಶಕ್ತಿ ಫೌಂಡೇಷನ್, ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಹಾಗೂ ಮನಸ್ವಿ ಎಚ್ ಜೆ ಅವರಿಂದ ಭರತನಾಟ್ಯ, ಶ್ರೀಮತಿ ವೀಣಾ ಮಠ ಮತ್ತು ಸ್ವಾತಿ ಅಭಿಷೇಕ ಪಾಟೀಲ ಅವರಿಂದ ಜಾನಪದ ವೈಭವ, ಪ್ರಮೀಳಾ ಜಕ್ಕಣ್ಣವರ ಅವರಿಂದ ಹಾಡುಗಳ ವೈವಿಧ್ಯಮಯ ಹಾಗೂ ವಿವಿಧ ಕಲಾ ತಂಡಗಳ, ವೈಯಕ್ತಿಕ ಜನಪದ ವೈಭವ, ಡ್ಯಾನ್ಸ್, ಮನರಂಜನಾ ಕಾರ್ಯಕ್ರಮಗಳು ನಡೆದವು. ಈ ಕಾರ್ಯಕ್ರಮದಲ್ಲಿ ಟರ್ಬೋ ಸ್ಟೀಲ್ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕರಾದ ರವಿ ಕುಳೇನೂರು ಹಾಗೂ ಅಭಿಷೇಕ್ ಕಾಳೆ ಜೊತೆಗೆ ಅಸೋಸಿಯೇಷನ್ ಸದಸ್ಯರಾದ ಸಂಜಯ್ ಲೋಂಡೇ, ಸಂಶುದ್ದೀನ್ ದಿಡಗೂರು, ಅಶೋಕ್ ಕೌಜಗೇರಿ, ಅಲ್ತಾಫ್ ಅಲೀ ಹತ್ತೀಮತೂರ್, ಕಬೀರ್ ನದಾಫ್, ಜುಬೇರ್ ಅಬ್ಬೀಹಾಳ, ಸುಮೀತ್ ಸುಣಗಾರ, ಅಮಿತ್ ಪಾಟೀಲ, ಕೃಷ್ಣಾ ಎಲಿಗಾರ್, ಪರವೇಜ್ ಶಿಮೋಗ್ಗಾ, ಮಂಜುನಾಥ ಕೋಟೂರು,ನಾಗರಾಜ ದೇಸಾಯಿ,ಹರೀಶ ದವಡೆ, ಮಹೇಶ ಮಠದ, ಸಂಜಯ ಕಬ್ಬೂರ, ಪವನ ಬೆಟಗೇರಿ, ದರ್ಶನ ಹೂಲಿ, ಲಿಂಗರಾಜ ತೊರವಿ ವಿಜಯೇಂದ್ರ ಪಾಟೀಲ, ಸೋಮಶೇಖರ ಬೆರಿ, ವಿಜಯ ತೋಟಗೇರ, ದಯಾನಂದ ಮಾಸೂರ ಮತ್ತಿತರರು ಉಪಸ್ಥಿತರಿದ್ದರು. ಮಾರ್ತಾಂಡಪ್ಪ ಎಮ್ ಕತ್ತಿಶ್ರೀವಿಜಯ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು ಧಾರವಾಡ.