ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆ; ಡಾ ಪೂರ್ಣಿಮಾ ಪ್ರಭುದೇವರವರಿಗೆ ಸನ್ಮಾನ
ಹುಬ್ಬಳ್ಳಿ 05: ಶಿಕ್ಷಣ ಹಾಗೂ ಸಾಮಾಜಿಕ ಸುಧಾರಣೆಗೆ ಶ್ರಮಿಸಿದ ದೇಶದ ಮೊದಲ ಮಹಿಳಾ ಶಿಕ್ಷಕಿ, ಪರಮ ಪೂಜ್ಯರಾದ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆ ನಿಮಿತ್ ಮಹಿಳೆಯರ ಶಿಕ್ಷಣದ ಮಹತ್ವವನ್ನು ಜಗತ್ತಿಗೆ ಸಾರಿದ, ಅಂದಿನ ಕಠಿಣ ಕಾಲದಲ್ಲಿ ಶಿಕ್ಷಣಕ್ಕೆ ಬಹು ದೊಡ್ಡ ಕೊಡುಗೆ ನೀಡಿದ ಮಹಾನ್ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರ ಭಾವಚಿತ್ರಕ್ಕೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಪೂಜೆ ಸಲ್ಲಿಸಿ, ಮಾಲಾರೆ್ಣ ಮಾಡಿ ಶ್ರದ್ಧಾ, ಭಕ್ತಿಯಿಂದ ಗೌರವ ನುಡಿ ನಮನ ಸಲ್ಲಿಸಲಾಯಿತು. ಅಕ್ಷರ ತಾಯಿಯ ಗುಣಗಾನ ಮಾಡಲಾಯಿತು.
ಬೆಂಗಳೂರಿನ ಸರಕಾರಿ ಕಾಲೇಜಿನ ಪ್ರಾಧ್ಯಾಪಕಿ ಡಾ ಪೂರ್ಣಿಮಾ ಪ್ರಭುದೇವ ಬಗಲಿ ಅವರು ರೇವಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಕ್ಕೆ ಡಾ ಪೂರ್ಣಿಮಾ ಅವರಿಗೆ ಸಮಿತಿಯ ಸದಸ್ಯರು ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಶಾಲು, ಮಾಲಾರೆ್ಣ ಮಾಡಿ, ಹಣ್ಣುಗಳನ್ನು , ಗ್ರಂಥಗಳನ್ನು ನೀಡಿ ಗೌರವ ಪೂರ್ವಕವಾಗಿ ಆತ್ಮೀಯವಾಗಿ ಪ್ರೀತಿಯಿಂದ ಗೌರವಿಸಲಾಯಿತು. ಅವರು ಇನ್ನೂ ಹೆಚ್ಚು ಸಾಧನೆ ಮಾಡಲಿ ಎಂದು ಶುಭಾಶಯಗಳನ್ನು ಕೋರಿದರು. ಡಾ ಪೂರ್ಣಿಮಾ ಅವರು ಬಸವ ಪರಿಸರ ಸಂರಕ್ಷಣಾ ಸಮಿತಿಯ ಅಧ್ಯಕ್ಷರು, ಸಾಹಿತಿಗಳು, ನಿವೃತ್ತ ಪ್ರಾಧ್ಯಾಪಕರಾದ ಪ್ರೊ ಎಸ್.ವಿ.ಪಟ್ಟಣಶೆಟ್ಟಿ ಅವರ ಮಗಳಾಗಿದ್ದಾರೆ. ಪ್ರಥಮ ಕವಯತ್ರಿ, ಶರಣೆ ಅಕ್ಕಮಹಾದೇವಿ ಅವರ ಕುರಿತು ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಬಸವ ಪರಿಸರ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಪ್ರೊ ಎಸ್.ವಿ. ಪಟ್ಟಣಶೆಟ್ಟಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷರು, ಸಾಹಿತಿ ಪ್ರೊ ಎಸ್.ಎಂ.ಸಾತ್ಮಾರ, ಹಿರಿಯರಾದ ಪ್ರೊ ವಿ. ಬಿ. ಮಾಗನೂರ, ಎಸ್. ಬಿ. ಹೊಂಬಳ, ಅವರು ಮಾತನಾಡಿದರು. ಕಾರ್ಯಕ್ರಮ ಸಂಯೋಜಕ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಸ್ವಾಗತಿಸಿ, ನಿರೂಪಿಸಿದರು. ಪ್ರಭಾವತಿ ಪ್ರಸನ್ನಕುಮಾರ್ ಹೂಗಾರ್, ಪ್ರಸನ್ನಕುಮಾರ್ ಹೂಗಾರ್, ಪ್ರತಿಭಾ ಗೀರೀಶ್ ಪಟ್ಟಣಶೆಟ್ಟಿ, ವಿಭವ ಗೀರೀಶ್ ಪಟ್ಟಣಶೆಟ್ಟಿ, ಪ್ರಣವ್ ಗೀರೀಶ್ ಪಟ್ಟಣಶೆಟ್ಟಿ, ಗೀರೀಶ್ ಎಸ್. ಪಟ್ಟಣಶೆಟ್ಟಿ, ಪ್ರಿಯಾ ಪ್ರಭುದೇವ ಬಗಲಿ , ನಾಗರಾಜ್ ಚಿನಗುಡಿ, ಮುಂತಾದವರು ಇದ್ದರು.