ಮುಂದಗೋಡ

ಬೈಕ್ ಕಳುವು, ದೂರು ದಾಖಲು

ಬೈಕ್ ಕಳುವು, ದೂರು ದಾಖಲು

ಲೋಕದರ್ಶನ ವರದಿ

ಮುಂಡಗೋಡ:ತಾಲೂಕಿನ ಮೈನಳ್ಳಿ ಗ್ರಾಮದಲ್ಲಿ ಮನೆ ಮುಂದಿನ ಕಾಂಪೌಂಡ್ ಒಳಗೆ ನಿಲ್ಲಿಸಿ ಇಟ್ಟ ಬೈಕ್ ಕಳುವು ಆದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿದೆ.

ಹಳಿಯಾಳ ತಾಲೂಕಿನ ಬಿದ್ರೊಳ್ಳಿ ಗ್ರಾಮದ ಪ್ರಕಾಶ ಕ್ರಿಶ್ಚಿಯನ್ ದೂರು ನೀಡಿದ ವ್ಯಕ್ತಿ. ಇವರು ದಿ.11ರಂದು ಮೈನಳ್ಳಿ ಗ್ರಾಮದ ವೀರನಗರದ ಮಾವ ಗಣಪತಿ ಸಿದ್ದಿ ಅವರ ಮನೆ ಮುಂದಿನ ಕಾಂಪೌಂಡ್ ಒಳಗೆ ಇರುವ ಖುಲ್ಲಾ ಜಾಗೆಯಲ್ಲಿ ನಿಲ್ಲಿಸಿ ಇಟ್ಟ ಹೀರೋ ಕಂಪನಿಯ ಹೆಚ್.ಎಫ್. ಬೈಕ್ ಅನ್ನು ಕಳುವು ಮಾಡಿಕೊಂಡು ಹೋಗಿದ್ದಾರೆ. ಅದನ್ನು ಹುಡುಕಿ ಕೊಡಿ ಎಂದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ 

ಸುದ್ದಿ ಓದಿ