ಭಕ್ತ ಕನಕದಾಸರ ಜಯಂತ್ಯೋತ್ಸವ
ಸಿಂದಗಿ: ಭಕ್ತಿ ಹಾಗೂ ದಾಸ ಪರಂಪರೆಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುವವರು ದಾಸ ಶ್ರೇಷ್ಠ ಕನಕದಾಸರು ಎಂದು ಲಿಂಬೆ ಅಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ ಹೇಳಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಮ್ಮಿಕೊಂಡ ಭಕ್ತ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವನೋಲಿದಾತನೇ ನಿಜವಾದ ಕುಲಜ ಎಂಬ ಸರ್ವ ಕಾಲಿಕ ಸತ್ಯವನ್ನು ಲೋಕಕ್ಕೆ ಸಾರಿದವರು ಭಕ್ತ ಕನಕದಾಸರು ಎಂದರು.
ಅಬು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎ.ಖತೀಬ, ಶಿಲ್ಪಾ ಕುದರಗೊಂಡ, ಪತ್ರಕರ್ತ ಆನಂದ ಶಾಬಾದಿ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ ಮಾತನಾಡಿದರು.
ಈ ವೇಳೆ ಶರಣಮ್ಮ ನಾಯಕ, ಶಾಂತೂ ರಾಣಾಗೋಳ, ಗೋಲ್ಲಾಳಪ್ಪ ಬಿರಾದಾರ, ಎಸ್.ಎಮ್ ಚಿಗರಿ, ವರ್ಷಾಪಾಟೀಲ, ಅಶ್ವೀನಿ ಪಾತ್ರೋಟ್ಟಿ, ಬೀರು ಚೌಧರಿ ಸೇರಿದಂತೆ ಅನೇಕರಿದ್ದರು.
ಕಸಾಪ ನೂತನ ಅಧ್ಯಕ್ಷ ಶಿವಾನಂದ ಬಡಾನೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲನಗೌಡ ಪಾಟೀಲ ನಿರೂಪಿಸಿದರು. ಅಂಬಿಕಾ ಪಾಟೀಲ ವಂದಿಸಿದರು.