ಎಸ್ಬಿಬಿಎಂಡಿ ಕಾಲೇಜಿನಲ್ಲಿ ಭಗತ್ ಸಿಂಗ್ ಜನ್ಮದಿನಾಚರಣೆ
ಲೋಕದರ್ಶನ ವರದಿ
ಶಿಗ್ಗಾವಿ 29: ಪಟ್ಟಣದ ಎಸ್.ಬಿ.ಬಿ.ಎಂ.ಡಿ ಕಾಲೇಜಿನಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್.ಎಫ್.ಐಶಹಿದ ಭಗತ್ ಸಿಂಗ್ ಅವರ 115 ನೆ ಜನ್ಮದಿನಾಚರಣೆಯನ್ನು ಕಾಲೇಜಿನ ಪ್ರಾಂಶುಪಾಲ ಆರ್ಎಸ್ ಭಟ್ ಅಧ್ಯಕ್ಷತೆಯಲ್ಲಿ ಆಚರಣೆ ಮಾಡಲಾಯಿತು. ಭಗತ್ ಸಿಂಗ್ ಅವರಅವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಂಶುಪಾಲ ಆರ್ಎಸ್ ಭಟ್ ಮಾತನಾಡಿ ಭಗತ್ ಸಿಂಗ್ ಅವರ ವಿಚಾರಗಳು "ಸ್ವಾತಂತ್ರ್ಯ ಅಂದರೆ ಕೇವಲ ಯಜಮಾನರ ಬದಲಾವಣೆ ಅಲ್ಲಾ ಅಸಮಾನತೆಯಿಂದ ಕೂಡಿದ ಶೋಷಣೆ ವ್ಯವಸ್ಥೆಯನ್ನು ಪೂರ್ಣವಾಗಿ ಬದಲಾಯಿಸುವುದು ಎಂದರ್ಥ ಎಂದರು.
ತಾಲ್ಲೂಕ ಮುಖಂಡರವಿ ಬಂಕಾಪುರ ಮಾತನಾಡಿ ಭಗತ್ ಸಿಂಗ್ ಮನುಷ್ಯರಿಂದ ಮನುಷ್ಯರ ಶೋಷಣೆ ಇಲ್ಲದ ಭಾರತ ನನ್ನ ಉದ್ದೇಶ. ಧರ್ಮದ ಹೆಸರಿನ ಸಂಘರ್ಷ ನಮ್ಮ ಉದ್ದೇಶವನ್ನು ಹಾಳುಗೆಡವುತ್ತದೆ ಮತ್ತು ಇಂದಿನ ಸರ್ಕಾರ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಯುವಕರಿಗೆ ಸ್ಫೂರ್ತಿದಾಯಕವಾದ ಭಗತ್ ಸಿಂಗ್ ರವರ ಜನ್ಮದಿನಾಚರಣೆಯನ್ನು ನಮ್ಮ ಘನ ಸರ್ಕಾರ ಮರೆತಿರುವುದು ನಮ್ಮದುರಾದೃಷ್ಟಕರವಾದ ಸಂಗತಿಯಾಗಿದೆ. ಸರ್ಕಾರ ಮರೆತಿರಬಹುದು ಆದರೆ ನಾವು ಎಸ.ಎಫ್.ಐ ಸಂಘಟನೆ ಮರೆಯುವುದಿಲ್ಲ. ಇನ್ನು ಅನೇಕ ವಿಚಾರಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಕಾಲೇಜಿನ ಶಿಕ್ಷಕ ಪೂಜಾರ್, ತಾಲ್ಲೂಕ ಮುಖಂಡ ಸುಪ್ರೀತ್ ಪಾಯಣ್ಣವರ, ಸಂಪತ ಪಾಟೀಲ ಮತ್ತು ಕಾಲೇಜು ಘಟಕದ ಮುಖಂಡರಿದ್ದರು