ಭಗತ್ ಸಿಂಗ್ ಜನ್ಮದಿನಾಚರಣೆ
ಲೋಕದರ್ಶನ ವರದಿ
ಶಿಗ್ಗಾವಿ 29: ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ವಿಶ್ವ ಹಿಂದು ಪರಿಷತ್ ಬಜರಂಗದಳ ವಿದ್ಯಾರ್ಥಿ ಘಟಕದ ವತಿಯಿಂದ ಭಗತ್ ಸಿಂಗ್ ಅವರ ಹುಟ್ಟುಹಬ್ಬ ಆಚರಣೆ ಮಾಡಲಾಯಿತು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಜರಂಗದಳ ವಿದ್ಯಾರ್ಥಿ ಘಟಕದ ಅಧ್ಯಕ್ಷ ವಿನಯ ಅಂಗಡಿ ಅವರು ಭಗತ್ ಸಿಂಗ್ ಹೆಸರಿಗಷ್ಟೇ ಅಲ್ಲ ಭಗತ್ ಸಿಂಗ್ ಅವರ ಹಾಗೆ ಬದುಕಬೇಕು ದೇಶದ ಒಳಿತಿಗಾಗಿ ಕೆಲಸ ಮಾಡಬೇಕೆಂದು ಯುವಕರಲ್ಲಿ ಆತ್ಮಸ್ಥೈರ್ಯ ತುಂಬಿದರು ಅಲ್ಲದೇ ಪಿ.ಎಫ್.ಐ ಸೇರಿದಂತೆ ಎಂಟು ಸಂಘಟನೆಗಳನ್ನು ರದ್ದು ಮಾಡಿದ ಕೇಂದ್ರ ಸರ್ಕಾರ ಕ್ಕೆ ಅಭಿನಂದನೆಗಳು ತಿಳಿಸುವ ಮೂಲಕ ಮದ್ದು ಸುಟ್ಟು ಸಿಹಿ ಹಂಚಲಾಯಿತು.
ಈ ಸಂದರ್ಭದಲ್ಲಿ ಬಜರಂಗದ ಸಂಯೋಜಕ ಚೆನ್ನವೀರ ನೀರಲಗಿ, ಪ್ರತೀಕ್ ಕೊಳೇಕರ, ಬಸವರಾಜ, ಕಿರಣ್, ಮಂಜುನಾಥ್, ಹರೀಶ್, ಕಿಶನ್, ಮದನ್, ನಾಗರಾಜ್, ಸೇರಿದಂತೆಇನ್ನು ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು