ಬಳ್ಳಾರಿ

ಬಳ್ಳಾರಿ: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳ ಕರಡು ಪಟ್ಟಿ ಪ್ರಕಟ

ಬಳ್ಳಾರಿ: ಜಿಲ್ಲಾ ಪಂಚಾಯತ್ ಮತ್ತು  ತಾಲೂಕು ಪಂಚಾಯತ್ ಕ್ಷೇತ್ರಗಳ ಕರಡು ಪಟ್ಟಿ ಪ್ರಕಟ

ಲೋಕದರ್ಶನ ವರದಿ

ಬಳ್ಳಾರಿ 09: ಜಿಲ್ಲಾ ಪಂಚಾಯತ್ 28 ಕ್ಷೇತ್ರಗಳ ಮತ್ತು ಬಳ್ಳಾರಿ ಜಿಲ್ಲೆಯ 80 ತಾಲೂಕು ಪಂಚಾಯತ್ ಕ್ಷೇತ್ರಗಳ ಕರಡು ಪಟ್ಟಿ ಪ್ರಕಟ ವಿವರವಾದ ಮಾಹಿತಿ ಸಿರುಗುಪ್ಪ-ಬಳ್ಳಾರಿ ಜಿಲ್ಲಾ ಪಂಚಾಯತ್ನ 28 ಕ್ಷೇತ್ರಗಳ ಮತ್ತು ಬಳ್ಳಾರಿ ಜಿಲ್ಲೆಯ 80 ತಾಲೂಕು ಪಂಚಾಯತ್ ಕ್ಷೇತ್ರಗಳ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿದ ನಂತರ ಜಿಲ್ಲೆಯ ಐದು ತಾಲೂಕುಗಳಲ್ಲಿನ ಕರಡುಪಟ್ಟಿ ಪ್ರಕಟಿಸಿರುವ ಸರ್ಕಾರ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಅವಕಾಶ ನೀಡಲಾಗಿದೆ ಕ್ಷೇತ್ರಗಳ ಮಾಹಿತಿಯನ್ನು ಕರಡುನಲ್ಲಿ ನೀಡಲಾಗಿದೆ ಪಂಚಾಯತ್ ರಾಜ್ ಇಲಾಖೆ ನಿದರ್ೆಶಕ ಡಾ ಎನ್  ಸೋಮೇಶ್ ಕುಮಾರ್ ಆದೇಶಿಸಿ ಪ್ರಕಟಿಸಿದ್ದಾರೆ ಎಂದು ಜನಾಭಿಪ್ರಾಯ ಮುಖಂಡ ಅಬ್ದುಲ್ ನಬಿ ಅವರು ತಿಳಿಸಿದ್ದಾರೆ.

     ಬಳ್ಳಾರಿ ಜಿಲ್ಲೆಯ ಐದು ತಾಲೂಕುಗಳ ಜಿಲ್ಲಾ ಪಂಚಾಯತ್ ಒಟ್ಟು 28 ಕ್ಷೇತ್ರಗಳ ರಚಿಸಿದ ವಿವರ ಸಿರುಗುಪ್ಪ ತಾಲೂಕಿನ ಹೆಚ್ಚೋಳ್ಳಿ, ಅಗಸನೂರು, ರಾರಾವಿ, ಹಳೆಕೋಟೆ, ಕರೂರು, ತಾಳೂರು, ಸಿರಿಗೇರಿ. ಸಂಡೂರು ತಾಲೂಕಿನ ಯಶವಂತನಗರ , ಚೋರನೂರು, ಕೃಷ್ಣ ನಗರ, ದೇವಗಿರಿ, ತೋರಣಗಲ್ಲು, ವಡ್ಡು , ಅಂತಾಪುರ.ಬಳ್ಳಾರಿ ತಾಲೂಕಿನ ಕೊರ್ಲಗುಂದಿ, ಶ್ರೀಧರ ಗಡ್ಡೆ, ಕೊಳಗಲ್ಲು, ಮೋಕಾ, ಸಿಂಧವಾಳ, ಸಂಗನಕಲ್ಲು, ರೂಪನ ಗುಡಿ, ಹಲಕುಂದಿ. ಕುರುಗೋಡು ತಾಲೂಕು ಗೆಣಿಕೆ ಹಾಳು, ಬಾದನಹಟ್ಟಿ, ಕೋಳೂರು.ಕಂಪ್ಲಿ ತಾಲೂಕು ಎಮ್ಮಿಗನೂರು, ದೇವಸಮುದ್ರ ಮೆಟ್ರಿ, ಬಳ್ಳಾರಿ ಜಿಲ್ಲೆಯ 5 ತಾಲೂಕುಗಳ ಒಟ್ಟು 80 ತಾಲೂಕು ಪಂಚಾಯತ್ ಕ್ಷೇತ್ರಗಳ ರಚಿಸಿದ ವಿವರ ಸಿರುಗುಪ್ಪ 20, ಸಂಡೂರು 21, ಬಳ್ಳಾರಿ 21, ಕುರುಗೋಡು 9, ಕಂಪ್ಲಿ 9, ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಕ್ಷೇತ್ರಗಳ ಸೀಮೆಯನ್ನು ಗುರುತಿಸಿ ಕರಡುನಲ್ಲಿ ನೀಡಲಾಗಿದ್ದು  ಕ್ಷೇತ್ರಗಳ ರಚನೆ ಮತ್ತು ಸೀಮೆ ಕುರಿತಂತೆ ಆಕ್ಷೇಪಣೆಗಳಿದ್ದಲ್ಲಿ ಆನ್ಲೈನ್ ಮೂಲಕ  https/rdpr.karnataka.gov.in/rdc/publicನಲ್ಲಿ ಇಲ್ಲವೇ ಅಂಚೆ ಮೂಲಕ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ 3ನೇ ಗೇಟ್, 2ನೇ ಮಹಡಿ, ಕೊಠಡಿ ಸಂಖ್ಯೆ 222/2ಎ, ಬಹುಮಡಿ ಕಟ್ಟಡ ಅಂಬೇಡ್ಕರ್ ವೀಧಿ, ಬೆಂಗಳೂರು-560001ಗೆ ಸಲ್ಲಿಸಬಹುದಾಗಿದೆ ಎಂದು ಅಬ್ದುಲ್ ನಬಿ ಅವರು ತಿಳಿಸಿದ್ದಾರೆ 

ಸುದ್ದಿ ಓದಿ