ಬಳ್ಳಾರಿ

ಬಳ್ಳಾರಿ; ಜಿಪಂ ಆವರಣದಲ್ಲಿ ಸಂಸದರಿಂದ ಸ್ತ್ರೀ-ಶಕ್ತಿ ಕ್ಯಾಂಟೀನ್ ಉದ್ಘಾಟನೆ

ಬಳ್ಳಾರಿ; ಜಿಪಂ ಆವರಣದಲ್ಲಿ ಸಂಸದರಿಂದ ಸ್ತ್ರೀ-ಶಕ್ತಿ ಕ್ಯಾಂಟೀನ್ ಉದ್ಘಾಟನೆ

ಬಳ್ಳಾರಿ,ಸೆ.04: ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಸಿಐಎಫ್ ಅನುದಾನದಡಿ ರೂ.1.20 ಲಕ್ಷ ಸಹಾಯಧನದಲ್ಲಿ ಸ್ತೀ-ಶಕ್ತಿ ಸಂಘವತಿಯಿಂದ ಸ್ಥಾಪಿಸಲಾದ ಸ್ತ್ರೀ-ಶಕ್ತಿ ಕ್ಯಾಂಟೀನ್ ಅನ್ನು ಸಂಸದ ವೈ.ದೇವೆಂದ್ರಪ್ಪ ಅವರು ಸೋಮವಾರ ಉದ್ಘಾಟಿಸಿದರು.

 ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಜಿಪಂ ಉಪ ಕಾರ್ಯದರ್ಶಿ ಗಿರಿಜಾ ಶಂಕರ್, ಜಿಪಂ ಯೋಜನಾ ನಿರ್ದೇಶಕ ಪ್ರಮೋದ್ ಸೇರಿದಂತೆ ಜಿಲ್ಲಾ ಪಂಚಾಯತ್ನ ಇತರೆ ಅಧಿಕಾರಿಗಳು ಮತ್ತು ಯೋಜನೆಯ ಎಲ್ಲಾ ಸಿಬ್ಬಂದಿಗಳು ಮತ್ತು ಮಹಿಳೆಯರು ಇದ್ದರು.


ಸುದ್ದಿ ಓದಿ