ಶಿಗ್ಗಾವ್

ಗಾಂಧೀಜಿ ಕಂಡ ಕನಸು ನನಸು ಮಾಡುತ್ತಿರುವ ಬಿಜೆಪಿ: ಮ್ಯಾಗೇರಿ

ಗಾಂಧೀಜಿ ಕಂಡ ಕನಸು ನನಸು ಮಾಡುತ್ತಿರುವ ಬಿಜೆಪಿ: ಮ್ಯಾಗೇರಿ

ಲೋಕದರ್ಶನ ವರದಿ

ಶಿಗ್ಗಾವಿ 06:  ಗಾಂಧೀಜಿಯವರ ಕಂಡ ಕನಸು ಗ್ರಾಮರಾಜ್ಯ ರಾಮರಾಜ್ಯ ಆಗಬೇಕು ಎಂಬುದು ಇಂದು ಪ್ರಧಾನಿ ನರೇಂದ್ರ ಮೋದಿಜಿ ಅವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ಹಮ್ಮಿಕೊಂಡಿರತಕ್ಕಂತ ಸೇವಾ ಪಾಕ್ಷಿಕ ಚಟುವಟಿಕೆಯೇ ಕಾರಣ ಎಂದು ಬಿಜೆಪಿ ಅಧ್ಯಕ್ಷ ಶಿವಾನಂದ್ ಮ್ಯಾಗೇರಿ ಹೇಳಿದರು.

ತಾಲೂಕಿನ ಕೃಷಿ ನಗರ ಪ್ರಾಥಮಿಕ ಶಾಲಾ ಮಕ್ಕಳಿಗೆ ಎಸ್ ಟಿ ಮೋಚರ್ಾ ವತಿಯಿಂದ ಬ್ಯಾಗ್ ಹಾಗೂ ನೋಟ್ ಪುಸ್ತಕ ವಿತರಣಾಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಗ್ರಾಮಗಳು ಅಭಿವೃದ್ಧಿಯಾಗಬೇಕು ಆರೋಗ್ಯಕರವಾಗಬೇಕು ಸ್ವಚ್ಛತೆಯಾಗಬೇಕು ಬಡವರು ಕಾರ್ಮಿಕರು ಸಹಾಯಕರನ್ನು ಗುರುತಿಸಿ, ಮೇಲೆತ್ತುವ ಕೆಲಸ ಆಡಳಿತದಲ್ಲಿ ಆಗಬೇಕು ಎಂಬ ಕನಸು ಇಂದು ಪ್ರಧಾನಿ ನರೇಂದ್ರ ಮೋದಿಜಿ ಅವರ ಕೇಂದ್ರ ಸರಕಾರ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ರಾಜ್ಯ ಸಕರ್ಾರಗಳು ಜಂಟಿಯಾಗಿ ಅಂತ್ಯೋದಯ ಪರಿಕಲ್ಪನೆಯೊಂದಿಗೆ ಸೇವೆ ಮಾಡುತ್ತಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ ಎಂದರು. 

ಪ್ರಧಾನಿ ಮೋದಿಜಿ ಅವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸ್ವಚ್ಛತಾ ಕಾರ್ಯ ರಕ್ತದಾನ ಶಿಬಿರ. ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ. ಬ್ಯಾಗ್ ಮತ್ತು ನೋಟ್ ಪುಸ್ತಕ ವಿತರಣೆ. ಕೆರೆ ಬಾವಿ ಹೂಂಡಗಳ  ಸ್ವಚ್ಛತೆ  ಗರ್ಭಣಿಯರಿಗೆ ಉಡಿ ತುಂಬಿ ಸಹಭೋಜನ ಕಾರ್ಯ. ಉಚಿತಆರೋಗ್ಯ ಶಿಬಿರಗಳು.ಶಾಲೆ- ಕಾಲೇಜು ಮಠಮಂದಿರಗಳಲ್ಲಿ ಸಸಿ ನೆಡುವ ಕಾರ್ಯ. ಸ್ವಚ್ಛತಾಕಾರ್ಯ ವೃದ್ಧಾಶ್ರಮಗಳ ಸ್ವಚ್ಛತೆ ಮತ್ತು ವೃದ್ಧರ ಪಾದಪೂಜೆ ಸನ್ಮಾನ ಸಹಭೋಜನ ಕಾರ್ಯ. ಹಿರಿಯರಿಗೆ ಕಾರ್ಮಿಕ ರಿಗೆ ವೈದ್ಯರಿಗೆ ಸೈನಿಕರಿಗೆ ಸನ್ಮಾನ ಕಾರ್ಯ. ಬಡವರು ಕಾರ್ಮಿಕರಿಗೆ ಉಚಿತವಾಗಿ ಈ ಶ್ರಮಕಾರ್ಡ ವಿತರಣೆ, ಬಾಳು ಬಿದ್ದ ಅನೇಕ ಗುಡಿ ಮಠ ಮಂದಿರಗಳನ್ನು ಸ್ವಚ್ಛತೆಗೊಳಿಸಿ ಸುಣ್ಣ ಬಣ್ಣ ಹಚ್ಚಿರುವುದು .ಕಿವುಡ ಮತ್ತು ಮೂಕ ಮಕ್ಕಳ ಶಾಲೆಗೆ ಭೇಟಿ ನೀಡಿ ಹಾಲು ಹಣ್ಣು ಸಿಹಿ ವಿತರಿಸಿ ಅವರೊಂದಿಗೆ ಕೆಲಕಾಲ ಕುಳಿತು ಸಂತೋಷ ಪಟ್ಟಿರುವುದು.  ಹಳ್ಳಿಗಳಲ್ಲಿರುವ ಬಡ ರೋಗಿಗಳಿಗೆ ಉಚಿತ ಆರೋಗ್ಯ ಶಿಬಿರದೊಂದಿಗೆ ಉಚಿತವಾಗಿ ಔಷಧಿ ವಿತರಣೆ. ಸರಕಾರಿ ಆಸ್ಪತ್ರೆಗಳಲ್ಲಿ ಇರುವ ರೋಗಿಗಳಿಗೆ ಹಾಲು ಹಣ್ಣು ವಿತರಿಸಿರುವುದು. ಅನೇಕ ಎಸ್ ಸಿ ಕಾಲೋನಿಗಳಲ್ಲಿ ತೆರಳಿ ಸಹಭೋಜನ. ಕಲಾವಿದರು ಸಾಹಿತಿಗಳನ್ನು ಗುರುತಿಸಿ ಅಭಿನಂದಿಸಿರುವುದು. ಇನ್ನೂ ಹತ್ತು ಹಲವಾರು ಸಮಾಜಮುಖಿಯಾದ ಜನಪರವಾದ ಆರೋಗ್ಯಕರವಾದ ಚಟುವಟಿಕೆ ಮಾಡುವ ಮೂಲಕ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲಿನ ಆಡಳಿತ ಮಾಡುತ್ತಿರುವ ಪ್ರಧಾನಿ ಮೋದಿಜಿಯವರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಅವರ ಆಡಳಿತ ನಮಗೆ ಸ್ಪೂರ್ತಿಯಾಗಿದೆ ಬಿಜೆಪಿ ಪಕ್ಷ ಕೇವಲ ರಾಜಕೀಯ ಪಕ್ಷವಲ್ಲ ಸಮಾಜಮುಖಿಯಾಗಿ ನೊಂದವರೊಂದಿಗೆ ಬಂದುವಾಗಿ ಬದುಕುವ ಸಂಘಟನಾ ಶಕ್ತಿಯಾಗಿದೆ ಎಂದರು.  

ಎಸ್.ಟಿ ಮೋರ್ಚಾದ ಅಧ್ಯಕ್ಷ ಹನುಮಂತಪ್ಪ ಗುಳೇದ್ ಪ್ರಧಾನ ಕಾರ್ಯದರ್ಶ  ದಾನಿಗಳು ಆದ ಬಸನಗೌಡ ರಾಮನಗೌಡರ, ಶ್ರೀಕಾಂತ್ ಓಲೆಕಾರ್, ಬಸವರಾಜ ನಾರಾಯಣಪುರ, ರೇಣುಕನಗೌಡ ಪಾಟೀಲ್,ಎಸ್ಡಿಎಂಸಿ ಅಧ್ಯಕ್ಷ ನಾಗರಾಜರಿತ್ತಿ, ವಸಂತತಿಮ್ಮಪುರ,್ಎಲ್ಲಪ್ಪ ಶಿಂದೆ, ಬಸವರಾಜರಿತ್ತಿ, ದಾರಿಗೆ ಜಾಗದಾನ ಮಾಡಿದ ಗೋವಿಂದಪ್ಪ ಎಲ್ಲ ಪ್ಪರಿತ್ತಿ, ಹನುಮಂತಪ್ಪ ವಡ್ಡರ್, ಮುಖ್ಯೋಪಾಧ್ಯಾಯ ನಟರಾಜ್ ದೊಡ್ಡಮನಿ, ರೂಪ ಪಾಟೀಲ್,ರವಿ ಬಿ ಶೆಟ್ಟಿ, ಮಾದೇವ ಹಡಪದ, ಎಲ್ಲಪ್ಪ ಮಾದರ್, ರಾಜು ದೊಡ್ಡಮನಿ, ಸಂಜೀವ್ ಭಾರಿ ಗಿಡದ ಇನ್ನು ಅನೇಕ ಹಿರಿಯರು ಬಿಜೆಪಿ ಕಾರ್ಯಕರ್ತರು ಮೋದಿ ಹಾಗೂ ಬೊಮ್ಮಾಯಿ ಅಭಿಮಾನಿಗಳು  ಗ್ರಾಮಸ್ಥರು ಶಾಲಾ ಮಕ್ಕಳು ಹಾಜರಿದ್ದರು 

ಸುದ್ದಿ ಓದಿ