ಬೆಂಕಿ ಅಪಘಾತಗಳಿಂದ ತಪ್ಪಿಸಿಕೊಳ್ಳುವ ಮುನ್ನೆಚ್ಚರಿಕೆಯ ಕ್ರಮಗಳ ಜಾಗೃತಿ

ಬೆಂಕಿ ಅಪಘಾತಗಳಿಂದ ತಪ್ಪಿಸಿಕೊಳ್ಳುವ ಮುನ್ನೆಚ್ಚರಿಕೆಯ ಕ್ರಮಗಳ ಜಾಗೃತಿ


ಕೊಲ್ಹಾರ 29: ಜೀವನದ ಯಾವುದೇ ಸಂದರ್ಭದಲ್ಲೂ ಅಚಾತುರ್ಯವನ್ನು ತೋರಬೇಡಿ ನಾವು ಮಾಡುವ ಕೆಲವು ಸಣ್ಣ ತಪ್ಪುಗಳು ಮುಂದೆ ದೊಡ್ಡ ಅನಾಹುತವನ್ನು ಸೃಷ್ಟಿಸುವಂತಾಗಬಾರದು ಎಂದು ಕೂಡಗಿಯ ಎನ್‌. ಟಿ. ಪಿ. ಸಿ.ಯ ಹೆಡ್ ಕಾನ್ಸ್ಟೇಬಲ್ ಉಮೇಶ್ ಹೆಚ್ ಹೇಳಿದರು.  

ತಾಲೂಕಿನ ಕೂಡಗಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರಿ​‍್ಡಸಿದ "ಬೆಂಕಿ ಅಪಘಾತಗಳಿಂದ ತಪ್ಪಿಸಿಕೊಳ್ಳುವ ಬಗೆ ಮುನ್ನೆಚ್ಚರಿಕೆಯ ಕ್ರಮಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಮಾತನಾಡಿದರು.   

ಆಕಸ್ಮಿಕದಿಂದಾಗುವ ಬೆಂಕಿಯ ಅಪಘಾತದಿಂದ ನೀವು ಯಾರನ್ನಾದರೂ ರಕ್ಷಿಸುವುದು ಉತ್ತಮ ಮಾರ್ಗವೆಂದರೆ ಮೊದಲು ಗಾಭರಿಯಾಗದೆ ಬೆಂಕಿಯ ಅಪಘಾತವನ್ನು ತಡೆಗಟ್ಟುವುದರ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ನಿಮ್ಮ ಜಾಣ್ಮೆ ಬಹುತೇಕ ಎಲ್ಲಾ ಬೆಂಕಿಯನ್ನು ತಡೆಗಟ್ಟಬಹುದು ಎಂದು ಹೇಳಿದರು.   

ಫೈರ್ ಸುಬೇದಾರ್ ತುಕಾರಾಂ ಲಮಾಣಿ ಮಾತನಾಡಿ ಹೊಗೆಯಿಂದ ಉಸಿರಾಡಲು ಬಾರದ ಅಥವಾ ಸುಟ್ಟುಹೋದ ವ್ಯಕ್ತಿಯನ್ನು ಅಪ್ಪಿಕೊಳ್ಳುವಿಕೆಯಿಂದ ತೆಗೆದುಹಾಕಿ, ಸುಟ್ಟಗಾಯಗಳನ್ನು ತಂಪಾಗಿಸಿ, ಹೆಚ್ಚಿನ ಹರಿವಿನ ಆಮ್ಲಜನಕವನ್ನು ಒದಗಿಸಿ ಮತ್ತು ಲಭ್ಯವಿದ್ದರೆ ಆಸ್ಪತ್ರೆಗೆ ತ್ವರಿತವಾಗಿ ಸಾಗಿಸಿ, ಮೊದಲು ಜೀವ, ನಂತರ ಆಸ್ತಿ ಎಲ್ಲಿಯಾದರೂ ಬೆಂಕಿ ಕಾಣಿಸಿಕೊಂಡರೆ ತುರ್ತಾಗಿ ಅಗ್ನಿಶಾಮಕ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ತಿಳಿಸಬೇಕು ಎಂದರು.  

ಕಾಲೇಜು ಪ್ರಾಚಾರ್ಯ ಜಿ ಲಮಾಣಿ ವೇದಿಕೆ, ಸಿ.ಐ.ಎಸ್‌.ಎಫ್ ನ ಕಾನ್ಸ್ಟೇಬಲ್ ರಿಂಕುಕುಮಾರ ಫೈರ್, ಪ್ರೊ ಎಸ್ ಬಿ ದೇಸಾಯಿ, ಮಹಾಂತೇಶ್ ಪಾಟೀಲ್, ಲಕ್ಷ್ಮಿ ಅಂಗಡಿ, ಬಸವರಾಜ ಜಾಲವಾದಿ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಇದ್ದರು. 


ಸುದ್ದಿ ಓದಿ