ಶಿಗ್ಗಾವ್

ರೈತರ- ಗ್ರಾಹಕರ ಸಮಸ್ಯೆಗಳ ಪರಿಹಾರಕ್ಕೆ ಮನವಿ

ರೈತರ- ಗ್ರಾಹಕರ ಸಮಸ್ಯೆಗಳ ಪರಿಹಾರಕ್ಕೆ ಮನವಿ

ಲೋಕದರ್ಶನ ವರದಿ

ಶಿಗ್ಗಾವಿ 06: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ರೋಷನ್ ಅವರನ್ನು ಭೇಟಿ ಮಾಡಿಗುತ್ತಿಗೆದಾರರ ರೈತರ ಹಾಗೂ ಗ್ರಾಹಕರ ಸಮಸ್ಯೆಗಳ ಪರಿಹಾರಕ್ಕೆ ಮನವಿ ಮಾಡಿಕೊಂಡ ರಾಜ್ಯ ಅನುಮತಿ ಪಡೆದ ಗುತ್ತಿಗೆದಾರ ಸಂಘದ ಪೂರ್ವ ನಿಯೋಜಿತ ಕೇಂದ್ರಕಾರ್ಯ ಸಮಿತಿ ಸದಸ್ಯ ಮಂಜುನಾಥ್ ಮಣ್ಣಣ್ಣವರ್ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಪರವಾನಿಗೆಯಂತೆ ಹುಬ್ಬಳ್ಳಿಯಲ್ಲಿರುವ ಅವರ ಗೃಹ ಕಚೇರಿಯಲ್ಲಿ ಸಂತ ಶಿಶುನಾಳ ಶರೀಫರ ನಾಗಲಿಂಗ ಹಾಗೂ ತಾಯಿ ದ್ಯಾಮವ್ವವಿರುವ ಭಾವಚಿತ್ರ ನೀಡಿ ಗಮನ ಸೆಳೆದರು.

 ಮಂಜುನಾಥ್ ಮುನ್ನಣ್ಣವರ್ ತದನಂತರ ಮಾತನಾಡಿ ವಾಣಿಜ್ಯ ಬಳಕೆ ಹಾಗೂ ಕೈಗಾರಿಕೆ ವಿದ್ಯುತ್ಗ್ರಾಹಕರ ಹಾಗೂ ರೈತರ ಕೆಲವು ಕಾರ್ಯ ಕೆಲಸಗಳ ಕುರಿತು ಚರ್ಚೆ ಮಾಡಿರೈತರ ಕೃಷಿ ಪಂಪಶೆಟ್ಟಿಗಳಿಗೆ ಮೊದಲಿನಂತೆ ಮಂಜೂರಾತಿ ನೀಡುವಕುರಿತು ಹಾಗೂ ವಿದ್ಯುತ್ಗುತ್ತಿಗೆದಾರರ ಸಮಸ್ಯೆಗಳ ಬಗ್ಗೆ ಮಾತನಾಡಿರೈತರ ಕೃಷಿ ಪಂಪ ಸೆಟ್ ಗಳಿಗೆ ವಿದ್ಯುತ್ ಮಂಜೂರಾತಿ ಹಾಗೂ ಸಂಪರ್ಕ ವಿಚಾರ ಸರ್ಕಾರದ ಮಟ್ಟದಲ್ಲಿ ಚರ್ಚೆಯಲ್ಲಿದ್ದು ತಾವುಗಳು ಸಹ ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದುಕುರಿತ ಪರಿಹಾರಕ್ಕಾಗಿ ಮನವಿ ಮಾಡಿಕೊಳ್ಳಲಾಯಿತು ಗುತ್ತಿಗೆದಾರರಿಗೆ ಸರ್ಕಾರದ ಕೆಲವು ಕಾಮಗಾರಿಗಳನ್ನು ಟೆಂಡರ್ ಕರೆಯದೆ ತುಂಡುಗುತ್ತಿಗೆ ಕಾಮಗಾರಿಗಳನ್ನು ನಿರ್ವಹಿಸಲು ಅನುಕೂಲ ಮಾಡಿಕೊಟ್ಟಿದ್ದು ಅದನ್ನು ಮುಂದುವರಿಸುವಂತೆ ಮನವಿ ಮಾಡಿಕೊಂಡರು ಸಂದರ್ಭದಲ್ಲಿ ಗುತ್ತಿಗೆದಾರ ಕೇಟಿ ಪಾಟೀಲ್ ಉಪಸ್ಥಿತರಿದ್ದರು 

ಸುದ್ದಿ ಓದಿ