ಅಖಿಲ ಗೃಹರಕ್ಷಕ ದಳದ ವಾರ್ಷಿಕ ದಿನಾಚರಣೆ
ಲೋಕದರ್ಶನ ವರದಿ,
ಜಮಖಂಡಿ 18: ಗೃಹರಕ್ಷಕ ದಳದವರು ಪೊಲೀಸ ಇಲಾಖೆಯ ಜೊತೆ ಕೈ ಜೋಡಿಸಿ ಸಮಾಜದಲ್ಲಿ ಒಳ್ಳೆಯ ಕಾರ್ಯ ನಿರ್ವಹಿಸುವದು ಅವಶ್ಯಕತೆಯಿದೆ ಎಂದು ಜಿಲ್ಲಾ ಸಮಾಧೀಷ್ಠ ಪ್ರಶಾಂತ ಮುನ್ನೋಳಿ ಹೇಳಿದರು.
ನಗರದ ಇತಿಹಾಸಿಕ ಪೋಲೋ ಮೈದಾನದಲ್ಲಿ ನಡೆದ ಅಖಿಲ ಗೃಹರಕ್ಷಕ ದಳದ ವಾರ್ಷಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಿವಿಲ್ ಪೊಲೀಸರು ಸೇವೆಯನ್ನು ಸಲ್ಲಿಸುತ್ತಿರುತ್ತಾರೆ. ಅವರಂತೆ ತಾವುಗಳು ಸಹ ಪ್ರಾಮಾಣಿಕತೆಯಿಂದ. ಶ್ರದ್ಧೆಯಿಂದ. ಶಿಸ್ತಿನಿಂದ. ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ನೀವುಗಳು ಶಿಸ್ತಿನಿಂದ ಕರ್ತವ್ಯ ಸಲಿಸುತ್ತಿರುವುದನ್ನು ನೋಡಿ ಮತ್ತೊಬ್ಬರು ಶಿಸ್ತನ್ನು ಕಲಿಯುವಂತೆ ಆಗಬೇಕು. ನಮ್ಮ ಇಲಾಖೆಯಲ್ಲಿ ತರಬೇತಿಗಳು ನಡೆಯುತ್ತಿವೆ. ತಾವುಗಳು ಸಹ ಭಾಗವಹಿಸಿ ಹೊಸ ಹೊಸ ತರಬೇತಿಗಳನ್ನು ಪಡೆದುಕೊಳ್ಳಬೇಕು. ಆಸಕ್ತಿ ಉಳವರು ಕಂಪ್ಯೂಟರ್ ತರಬೇತಿ ಪಡೆದುಕೊಳ್ಳುವದು ಅತೀ ಅವಶ್ಯಕವಾಗಿದೆ ಎಂದರು.
ಐತಿಹಾಸಿಕ ಪೋಲೋ ಮೈದಾನದಲ್ಲಿ ವಿವಿಧ ಗೃಹರಕ್ಷಕ ದಳದವರು ಕವಾಯತ ನಡೆಸಿದರು. ಜಿಲ್ಲಾ ಸಮಾಧೀಷ್ಠ ಪ್ರಶಾಂತ ಮುನ್ನೋಳಿ ಅವರು ತೆರೆದ ವಾಹನದಲ್ಲಿ ಗೃಹರಕ್ಷಕ ದಳದವರ ಕವಾಯತ ವಿಕ್ಷೇಣಿಯನ್ನು ಮಾಡಿದರು.ಗೃಹರಕ್ಷಕ ದಳದಲ್ಲಿ ಸಾಧನೆ ಗೈದವರಿಗೆ ಸನ್ಮಾನಿಸಿ ಗೌರವಿಸಿದರು. ನಂತರ ಗೃಹರಕ್ಷಕ ದಳದವರಿಂದ ಎರಡು ಅಂತಸ್ತಿನ ಬಿಲ್ಡಿಂಗ್ನಲ್ಲಿ ಅಗ್ನಿ ಅವಘಡದಲ್ಲಿ ಹಾಗೂ ಇನ್ನಿತರ ಅವಘಡದಲ್ಲಿ ಸಿಲುಕಿದವರನ್ನು ಹೇಗೆ ರಕ್ಷಣೆ ಮಾಡಬೇಕೆಂದು ಡೇಮೋ ಮೂಲಕ ಪ್ರದರ್ಶನ ನೀಡಿ. ಅಚ್ಚರಿಯನ್ನು ಮೂಡಿಸಿದರು.
ಶಹರ ಠಾಣಿಯ ಪಿ.ಎಸ್.ಐ ಬಸವರಾಜ ಕೊಣ್ಣೂರೆ, ಎ.ಆರ್.ಟಿ.ಒ ಆರ,ಎಲ್,ಹೊಸಮನಿ, ಅಹ್ಮದ ಎಲ್,ಸಾಹುಕಾರ, ರಮೇಶ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.