ಮುಂಡರಗಿ

ಆನಂದ ಗೌಡ ಪಾಟೀಲ್ ರಿಂದ ಸ್ವಂತ ಖರ್ಚಿನಲ್ಲಿ ಸ್ಮಶಾನ ಅಭಿವೃದ್ಧಿ

ಆನಂದ ಗೌಡ ಪಾಟೀಲ್ ರಿಂದ ಸ್ವಂತ ಖರ್ಚಿನಲ್ಲಿ ಸ್ಮಶಾನ ಅಭಿವೃದ್ಧಿ

ಮುಂಡರಗಿ 24 ; ಸ್ವಾರ್ಥತೆಯಿಂದ ಕೂಡಿದ ಇಂದಿನ ದಿನಮಾನಗಳಲ್ಲಿ ತಮ್ಮ ಮನೆಯ ಕೆಲಸಗಳಿಗೆ ಮಾತ್ರ ಆದ್ಯತೆಯನ್ನು ನೀಡುತ್ತಿರುವ ಕಾಲಮಾನದಲ್ಲಿ ಸಮಾಜ ಸೇವೆಯ ಮನೋಭಾವನೆಯ ಕನಸುಗಳು ಕನಸಾಗಿಯೇ ಉಳಿಯುತ್ತಿವೆ. ಹೀಗಾಗಿ ತಾವುಂಟು ತಮ್ಮ ಕೇಲಸವುಂಟು ಎನ್ನುವ ಹಾಗೆ ಸೇವಾ ಮನೋಭಾವನೆಯಿಂದ ತುಂಬಾ ದೂರವಾಗಿದ್ದಾರೆ. ಈ ನಿಟ್ಟಿನಲ್ಲಿ ಪಟ್ಟಣದ ಸ್ಮಶಾನವನ್ನು ಸ್ವಚ್ಛಗೊಳಿಸುವಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಆನಂದಗೌಡ ಪಾಟೀಲ್ ಪುಣ್ಯವಂತರಾಗಿದ್ದಾರೆ.

ಹೌದು ಇಂದಿನ ಆಧುನಿಕ ಕಾಲದಲ್ಲಿ ಕೇವಲ ಗುತ್ತಿಗೆದಾರರಾಗಿ ಸಾಕಷ್ಟು ಹಣ ಸಂಪಾದನೆ ಮಾಡಬಹುದು. ಆದರೇ ಸದಾ ಸಮಾಜ ಸೇವೆಯ ಮನೋಭಾವನೆಯಲ್ಲಿ ಮನೆಮಾತಾಗಿರುವ ಈ ಆನಂದಗೌಡ ಪಾಟೀಲ್ ಎಂಬ ಪ್ರಥಮ ಧಜರ್ೆ ಗುತ್ತಿಗೆದಾರರು ಬಡವರ, ದೀನ ದಲಿತರ ಆಶಾ ಕಿರಣವಾಗಿ ನೊಂದವರ ದ್ವನಿಯಾಗಿ ಸಾಮಾಜಿಕ ಕೆಲಸ ಮಾಡುತ್ತಿರುವ ಪಾಟೀಲ ಅವರ ಕುಟುಂಬ ಇದಕ್ಕೆ ಸಾಕ್ಷಿಯಾಗಿದ್ದಾರೆ.

ನೂತನ ಕೋರ್ಟ ಹತ್ತಿರ ಗದಗ ರಸ್ತೆಯಲ್ಲಿರುವ ಶ್ರೀ ಜಗದ್ಗುರು ಅನ್ನದಾನೀಶ್ವರ ರುದ್ರ ಭೂಮಿಯಲ್ಲಿ ಜಾಲಿ ಕಂಟಿಗಳು ಬೆಳೆದು ರುದ್ರಭೂಮಿಯ ಮುಳ್ಳು ಕಂಟಿಗಳ ತಾಣವಾಗಿರುವ ಸ್ಮಶಾನ ಇದ್ದರು ಇಲ್ಲದಂತಹ ಸ್ಥಿತಿಯಲ್ಲಿ ಇತ್ತು. ಇದನ್ನು ಅರಿತುಕೊಂಡ ಆನಂದಗೌಡ ಪಾಟೀಲರು ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ, ಎಷ್ಟೇ ಹಣ ಸಂಪಾದಿಸಿದರೂ ಕೊನೆಗೆ ಸಿಗುವದು ಸ್ಮಶಾನ ಮುಕ್ತಿಯೊಂದೇ. ಶವ ಸಂಸ್ಕಾರ ಬರುವ ಜನರಿಗೆ ಅನುಕೂಲತೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಆನಂದಗೌಡರು ಹೆಜ್ಜೆ ಇಟ್ಟಿದ್ದಾರೆ.

ರುದ್ರಭೂಮಿಯಲ್ಲಿ ಶವ ಸಂಸ್ಕಾರಕ್ಕಾಗಿ ಬೇರೆ ಊರಿನಿಂದ ಬರುವವರು ಇಲ್ಲಿ ಜಾಸ್ತಿ ತ್ಯಾಜ್ಯ ವಸ್ತು ಗಳೆಂದರೆ ಹಾರ ತೆಂಗಿನಕಾಯಿ ಬಟ್ಟೆ ಹಾಗೂ ಮಲಮೂತ್ರವಿಸರ್ಜನೆ ಮಾಡಿರುವದನ್ನು ಕಂಡು ಮೂಗು ಮುಚ್ಚಿಕೊಂಡು ಅಂತಿಮ ವಿಧಿ ವಿಧಾನಗಳನ್ನು ಮಾಡಿರುವ ಸಾಕಷ್ಟು ಉದಾಹರಣೆಗಳಿವೆ.

ಸದಾ ಜಾಲಿ ಕಂಟಿಗಳಿಂದ ಕೂಡಿರುವ ರುದ್ರಭೂಮಿಯನ್ನು ಕಾಟಾಚಾರಕ್ಕೆ ಪುರಸಭೆಯವರು ಸ್ವಚ್ಚಗೂಳಿಸುವುದೇ ಇದುವರಗಿನ ಪುರಸಭೆಯ ಸಾಧನೆಯಾಗಿದೆ.

ಪ್ರಥಮ ದರ್ಜೆಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿರುವ ಆನಂದಗೌಡ ಪಾಟೀಲರು ಅನೇಕ ಜನಪಯೋಗಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ತಮ್ಮ ಸ್ವಂತ ಖಚರ್ಿನಲ್ಲಿ ಈ ಹಿಂದೆ ತಮ್ಮ ಜೆಸಿಬಿ ಮೂಲಕ ಸ್ಮಶಾನ ಸ್ವಚ್ಚಗೊಳಿಸಿದ್ದರು ಇದನ್ನು ಅರಿತುಕೊಂಡು ಈ ಭಾರಿ ಜೆಸಿಬಿ ಮತ್ತು ಟ್ರ್ಯಾಕ್ಟರ ಮೂಲಕ ಗೀಡ ಕಂಟೆಗಳನ್ನು ಬೇರು ಸಮೇತ ಕೀತ್ತೆಸೆದು ಡೋಜರ್ ಮೂಲಕ ರುದ್ರಭೂಮಿಯನ್ನು ಏಕಮುಖವಾಗಿ ಕಾಣುವಂತೆ ಮಾಡಿದ್ದು ಈ ಸ್ಮಶಾನದ ರುದ್ರಭೂಮಿಯನ್ನು ಸ್ವಚ್ಚವಾಗಿ ಸುಂದರಗೊಳಿಸುವ ವಿವಿಧ ಬಗೆಯ ಹೂವಿನ ಗೀಡಗಳನ್ನು ಸಸಿಗಳನ್ನು ನೆಟ್ಟು ನಿತ್ಯ ವಾಯುವ್ಯ ವಿಹಾರಕ್ಕೆ ಬರುವ ಜನರಿಗೆ ಆಕರ್ಷಣೀಯ ಸ್ಥಳವನ್ನಾಗಿಸುವ ಗುರಿ ಹೊಂದಿದ್ದಾರೆ ಆನಂದಗೌಡ ಪಾಟೀಲರು.

ಸುಮಾರು 8 ಎಕರೆ ವಿಸ್ತೀರ್ಣ ಇರುವ ಈ ರುದ್ರಭೂಮಿಯನ್ನು ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಸ್ವಾಮಿಗಳು ದಾನವಾಗಿ ನೀಡಿದ್ದು ಇದಕ್ಕೆ ಶ್ರೀಗಳ ಹೆಸರನ್ನೆ ನೇಮಕ ಮಾಡಲಾಗಿದೆ.ಬರುವ ದಿನಗಳಲ್ಲಿ ಎಲ್ಲಾ ಬಗೆಯ ಹೂವಿನಗೀಡಗಳನ್ನು ನೆಟ್ಟು ಸುಂದರ ಪರಿಸರ ವಾತಾವಾರಣ ನಿಮರ್ಿಸುವ ಉದ್ದೇಶದಿಂದ ಈ ಕಾರ್ಯಹಮ್ಮಿಕೊಳ್ಳಲಾಗಿದ್ದು ಮುಂಡರಗಿ ಪಟ್ಟಣದ ಜನತೆ ಆನಂದಗೌಡ ಪಾಟೀಲರ ಅವರ ಕಾರ್ಯಕ್ಕೆ ಶ್ಲಾಘನೀಯ ವ್ಯಕ್ತಪಡಿಸಿ ಇನ್ನು ಅನೇಕ ಜನಪರ ಕಾರ್ಯಗಳು ಇವರಿಂದ ಆಗಲಿ ಎನ್ನುವುದೇ ಪಟ್ಟಣದ ಜನತೆಯ ಆಶಯವಾಗಿದೆ.

ಕೋಟ್: 

ಪಟ್ಟಣದ ಸ್ಮಶಾನ ಅಭಿವೃದ್ದಿಗೆ ಮುಂದಾಗಿರುವ ಆನಂದಗೌಡ ಪಾಟೀಲ ಅವರ ಕಾರ್ಯ ಮೆಚ್ಚುವಂತದ್ದು ಶ್ರೀಮಠದಿಂದಲೇ ರುದ್ರಭೂಮಿಗಾಗಿ ಜಮೀನು ದಾನ ಮಾಡಲಾಗಿದೆ. ಸ್ಮಶಾನ ಅಭಿವೃದ್ದಿಯೊಂದಿಗೆ ಗೀಡಗಳನ್ನು ನೆಡುವದರೊಂದಿಗೆ ರುದ್ರಭೂಮಿ ಸ್ವಚ್ಚ ಹಾಗೂ ಸುಂದರ ತಾಣವಾಗಲಿ.

- ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮಿಗಳು, ಸಂಸ್ಥಾನಮಠ ಮುಂಡರಗಿ 

ಕೋಟ್: 

ಆನಂದಗೌಡರರು ತಮ್ಮ ಸ್ವಂತ ಖರ್ಚಿನಲ್ಲಿ ಸ್ಮಶಾನದ ಅಭಿವೃದ್ಧಿ ಪಡಿಸುವುದು ಪುಣ್ಯದ ಕೆಲಸ ಹಾಗೂ ಮುಂಡರಗಿ ಜನತೆಯ ಮೆಚ್ಚುಗೆ ಕಾರಣರಾಗಿದ್ದಾರೆ. ಆನಂದಗೌಡ ಪಾಟೀಲ ಪ್ರಥಮ ದಜರ್ೆ ಗುತ್ತಿಗೆದಾರರಾಗಿ ಸದಾ ಜನಪರ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಇಂತಹ ಇನ್ನೂ ಅನೇಕ ಉತ್ತಮ ಕಾರ್ಯಮಾಡುತ್ತಾ ಇತರರಿಗೆ ಮಾರ್ಗದರ್ಶನವಾಗಲಿ.

- ಅಡಿವೆಪ್ಪ ಚಲವಾದಿ. ಸಮಾಜ ಸೇವಕರು, ಮುಂಡರ 

ಸುದ್ದಿ ಓದಿ