ಹಾರೋಗೇರಿ ಗ್ರಾಂ.ಪಂ ಅಧ್ಯಕ್ಷರಾಗಿ ಅಮರೇಶ ಹಿರೇಮಠ ಅವಿರೋಧ ಆಯ್ಕೆ
ಲೋಕದರ್ಶನ ವರದಿ
ಮುಂಡರಗಿ 31: ತಾಲೂಕಿನ ಹಾರೋಗೇರಿ ಗ್ರಾಮ ಪಂಚಾಯತಿಯ ಎರಡನೇ ಅವಧಿಯ ಅಧ್ಯಕ್ಷರ ಚುನಾವಣೆಯಲ್ಲಿ ಬಾಕಿ ಉಳಿದ 15 ತಿಂಗಳು ಕಲಾವಧಿಗೆ ಸಕರ್ಾರದ ಆದೇಶದ ಸಾಮಾನ್ಯ ಮೀಸಲಾತಿಯ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅಮರೇಶ ಹಿರೇಮಠ ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಕಾರಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ವೇಳೆ ಕೆಪಿಸಿಸಿ ಸಹಕಾರ ವಿಭಾಗದ ಕೋ-ಚೇರ್ಮನ್ ಶಿವಕುಮಾರಗೌಡ ಪಾಟೀಲ ಮಾತನಾಡಿ, ತ್ಯಾಗ, ಪ್ರೀತಿ ಹಾಗೂ ಸಹಕಾರದಿಂದ ಆಡಳಿತ ಬಯಸುವ ಪ್ರತಿಯೊಬ್ಬರಿಗೂ ಸಮನಾದ ಅವಕಾಶ ಕಲ್ಪಿಸಿಕೊಡುವುದೇ ಕಾಂಗ್ರೆಸ್ ಪಕ್ಷದ ಸಿದ್ದ್ದಾಂತವಾಗಿದೆ. ಮೊದಲನೇ ಅವಧಿಯ 30 ತಿಂಗಳ ಕಾಲವಧಿಯ ಸಕರ್ಾರದ ಆದೇಶದಂತೆ ಸಾಮಾನ್ಯ ಮೀಸಲಾತಿಗೆ ಒಳಪಡುತ್ತದೆ. ಅದರಲ್ಲಿ ಇಬ್ಬರೂ ಅಂದರೆ ರವಿಂದ್ರನಾಥ ಜವಿ 15 ತಿಂಗಳು ಹಾಗೂ ಅಮರೇಶ ಹಿರೇಮಠ 15 ತಿಂಗಳ ಕಾಲಾವಕಾಶದಡಿಯಲ್ಲಿ ಆಡಳಿತ ನಡೆಸುವದಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಕಾಂಗ್ರೇಸ್ ಪಕ್ಷದ ಅಧಿಕ ಸಂಖ್ಯಾಬಲ ಹೊಂದಿರುವ ಹಾರೋಗೇರಿ ಗ್ರಾಮ ಪಂಚಾಯತಿಯ ಸಾಮಾನ್ಯ ಮೀಸಲಾತಿಗೆ ಒಳಪಡುವ ಅಮರೇಶ ಹಿರೇಮಠ ಅವರನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅಮರೇಶರವ ಕ್ಷೇತ್ರದಲ್ಲಿ ಒಬ್ಬರೇ ಸದಸ್ಯರಾಗಿದ್ದರೂ ಇವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಸರ್ವರಿಗೂ ಸಮಾನವಾದ ಸ್ಥಾನಮಾನ ಕೊಡುವ ಸಿದ್ದಾಂತವನ್ನು ಗಟ್ಟಿಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ನೂತನ ಅಧ್ಯಕ್ಷರಾದವರು ಗ್ರಾಂ.ಪಂ ಸರ್ವ ಸದಸ್ಯರನ್ನು ಸಮಾನ ದೃಷ್ಟಿಯಿಂದ ಕಂಡು ಹಾರೋಗೇರಿ ಗ್ರಾಂ.ಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳನ್ನು ಅಭಿವೃದ್ದಿಯತ್ತ ಕೊಂಡೋಯ್ಯಬೇಕು ಎಂದು ಹೇಳಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಮರೇಶ ಹಿರೇಮಠ ಮಾತನಾಡಿ, ಕಾಂಗ್ರೇಸ್ ಪಕ್ಷದ ವರಿಷ್ಟರ ಆದೇಶದಂತೆ ಹಾರೋಗೇರಿ ಗ್ರಾ.ಪಂ ಆಡಳಿತ ಮಂಡಳಿಯು ಉತ್ತಮ ಆಡಳಿತ ನೀಡುತ್ತಿದ್ದು, ಮೊದಲನೇ ಅವಧಿಯ ಉಳಿದ 15 ತಿಂಗಳಿಗೆ ಆಡಳಿತ ಮಂಡಳಿಯು ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ನಾನು ಗ್ರಾ.ಪಂ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾ.ಪಂ. ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸುತ್ತ್ತೇವೆ. ಅದರಲ್ಲಿ ಸಾರ್ವಜನಿಕರಿಗೆ ಅವಶ್ಯವಾಗಿ ಬೇಕಾಗಿರುವಂತಹ ಮೂಲಭೂತ ಸೌಲಭ್ಯಗಳಾದ ನೀರು, ವಿದ್ಯುತ್, ರಸ್ತೆ ದುರಸ್ಥಿ, ಶಿಕ್ಷಣ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡುವದರೊಂದಿಗೆ ಸಾರ್ವಜನಕರ ಸಕರ್ಾರದಿಂದ ಬರುವಂತಹ ವೈಯಕ್ತಿಕ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡುವದರೊಂದಿಗೆ ನನಗೆ ಇರುವಂತಹ ಕಾಲ ಮೀತಿಯಲ್ಲಿ ಹಾರೋಗೇರಿ ಗ್ರಾ.ಪಂ. ಮಾದರಿ ಪಂಚಾಯತಿಯನ್ನಾಗಿ ಮಾಡುವದಕ್ಕೆ ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಕುಮಾರಗೌಡ ಪಾಟೀಲ್ ನೇತೃತ್ವದಲ್ಲಿ ಗ್ರಾಮ ಪಂಚಾಯತ ಸರ್ವ ಸದಸ್ಯರು ಹಾಗೂ ಹಿರಿಯರ ಸಮ್ಮುಖದಲ್ಲಿ ನೂತನ ಅಧ್ಯಕ್ಷರಾಗಿ ವಿರೋಧವಾಗಿ ಆಯ್ಕೆಯಾದ ಅಮರೇಶ ಹಿರೇಮಠ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಭೀಮಣ್ಣ ಭಜಮ್ಮನವರ, ಪುಲಕೇಶಗೌಡ ಪಾಟೀಲ, ಬಸವರಾಜ ಕಣವಿ, ತೋಟಪ್ಪ ಮೇಟಿ, ಮಾಜಿ ಅಧ್ಯಕ್ಷ ರವಿಂದ್ರನಾಥ ಜವಿ, ಮಲ್ಲಪ್ಪ ಗುಡಗೇರಿ, ದೇವನಗೌಡ ಪಾಟೀಲ, ಬಸೀರಸಾಬ್ ವಡ್ಡಟ್ಟಿ, ಮನೋಜಕುಮಾರ ಪಾಟೀಲ, ಉಮೇಶ ಮುಡಿಯಮ್ಮನವರ, ಗೌಸುಸಾಬ ಡಂಬಳ, ವಿಜಯಲಕ್ಷ್ಮೀ ಪಾಟೀಲ, ಮಹಾದೇವಕ್ಕ ಹಳ್ಳಿ, ಪ್ರೇಮಸಾಬ್ ಹಲರ್ಾಪೂರ, ಗಣೇಶ ಭರಮಕ್ಕನವರ, ಶಿವಕುಮಾರ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು