ಕಥೆ ಮತ್ತು ವಿಶೇಷ ಲೇಖನಗಳು

ಅಖಿಲ ಕನರ್ಾಟಕ ದ್ವೀತಿಯ ಮಹಿಳಾ ಸಮ್ಮೇಳನ ಸವರ್ಾಧ್ಯಕ್ಷೆ ಕ್ರಿಯಾಶೀಲ ವ್ಯಕ್ತಿತ್ವದ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ

ಅಖಿಲ ಕನರ್ಾಟಕ ದ್ವೀತಿಯ ಮಹಿಳಾ ಸಮ್ಮೇಳನ ಸವರ್ಾಧ್ಯಕ್ಷೆ ಕ್ರಿಯಾಶೀಲ ವ್ಯಕ್ತಿತ್ವದ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ

 - ರೋಹಿಣಿ ಯಾದವಾಡ, ಅಥಣಿ.

" ಕ್ರಿಯಾಶೀಲ ಗುಣ ಎಲ್ಲರಲ್ಲಿಯೂ ಇರುವುದಿಲ್ಲ, ಅದನ್ನು ನಾವು ರೂಢಿಸಿಕೊಳ್ಳಬೇಕು. ಅದಕ್ಕೆ ನಮ್ಮಲ್ಲಿಯ ಆಸಕ್ತಿ ಮುಖ್ಯವಾಗಿರುತ್ತದೆ. ಅದರಿಂದ ನಮ್ಮ ವ್ಯಕ್ತಿತ್ವ ರೂಪಗೊಳ್ಳುತ್ತದೆ ''ಎಂಬುವುದು ಯಾರೋ ಹೇಳಿದ ಮಾತಲ್ಲ, ಅದು ನನ್ನ ಅನಭವದ ಮಾತು. ಇದಕ್ಕೆ ಸಾಕ್ಷಿಯಾಗಿಸುತ್ತಿರುವುದು ಈ ಗುಣವನ್ನು ಹೊಂದಿರುವ ನಮ್ಮ ಹೆಮ್ಮೆಯ ಗೆಳತಿ, ಸಾಧಕಿ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಅವರು. 

 ಪಾದರಸದಂತೆ ಹರಿದಾಡುವ ಸದಾ ಚಟುವಟಿಕೆಯಲ್ಲಿರುವ, ಬಿಡುವರಿಯದ ಮೈತ್ರೇಯಿಣಿಯವರು ಸಧ್ಯ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ , ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು, ಹತ್ತು ಹಲವು ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷೆ, ಪದಾಧಿಕಾರಿಗಳಲ್ಲಿ ಒಬ್ಬರಾಗಿ, ಶ್ರೇಷ್ಠ ಚಿಂತಕಿ, ವಾಗ್ಮಿಯಾಗಿರುವ ಅವರು, ತಮ್ಮ ತವರು ಊರಿನಲ್ಲಿ, ಇದೇ ರವಿವಾರ ದಿ. 11 ರಂದು ಹುಬ್ಬಳ್ಳಿಯ ವಿಜಯ ನಗರದಲ್ಲಿಯ ಕನಕದಾಸ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಯಲ್ಲಿರುವ ಅಖಿಲ ಭಾರತ ದ್ವಿತೀಯ ಮಹಿಳಾ ಸಮಾವೇಶದ ಸವರ್ಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದು. ಆ ದಿನದಂದು ಅವ್ವ ಡಾ. ಸರೋಜನಿ ಚವಲಾರ ಮಹಾವೇದಿಕೆಯಲ್ಲಿ ವಿವಿಧ ಚಿಂತನ ಗೋಷ್ಠಿ, ಕವಿಗೋಷ್ಠಿ, ರಾಜ್ಯ ಮಟ್ಟದ ಪ್ರಶಸ್ತಿ ವಿತರಣೆ, ಮೊದಲಾದ ಕಾರ್ಯಕ್ರಮಗಳು ನಡೆಯಲಿದ್ದು ರವಿ ಬೆಳಗೆರೆ ಅವರ ಗೌರವ ಉಪಸ್ಥಿತಿ, ಭಾವನಾ ಬೆಳಗೆರೆಯವರ ಉದ್ಘಾಟನೆ ಹಾಗೂ ನಾಡಿನ ಗಣ್ಯಮಾನ್ಯರು ಪಾಲ್ಗೊಳ್ಳಲ್ಲಿದ್ದಾರೆ.

ಬಾಲ್ಯ:- ಹುಬ್ಬಳ್ಳಿಯ ಶರಣ ದಂಪತಿಗಳಾದ ತಂದೆ ಲಿಂ.ಗುರುನಗೌಡಾ, ತಾಯಿ ಶ್ರೀಮತಿ ಲೀಲಾವತಿ ಅವರ ಉದರದಲ್ಲಿ ಜನಿಸಿದರು. ಮೂವ್ವರು ಸಹೋದರಿಯರು ಕೂಡ ಶಿಕ್ಷಣ ಕ್ಷೇತ್ರದ ರೂವಾರಿಗಳು, ಓರ್ವ ಸಹೋದರ ಗಿರೀಶ ಅವರು ರಾಜಕೀಯ ಹಾಗೂ ಶಿಕ್ಷಣ ಕ್ಷೇತ್ರದ ಮುಖಂಡರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶಿಕ್ಷಣ:- ಮೈತ್ರೇಯಿಣಿಯವರ ಕಲಿಕೆಗೆ ಕೊನೆಯೆಂಬುದೆ ಇಲ್ಲ ಎಂಬುದನ್ನು ಶಿಕ್ಷಣ ಕ್ಷೇತ್ರದ ಕಲಿಕೆಯನ್ನು ಅರಿಯುವಾಗಿ ತಿಳಿದು ಬರುತ್ತದೆ. ವೈವಿದ್ಯಮಯ ಕಲಿಕೆ ಅವರದು. ತಮ್ಮ ಬಾಲ್ಯದ ಶಿಕ್ಷಣವನ್ನು ತವರೂರಲ್ಲಿಯೇ ಸರಕಾರಿ ಶಾಲೆಗಳಲ್ಲಿ, ಪದವಿ ಶಿಕ್ಷಣವನ್ನು ಹುಬ್ಬಳ್ಳಿಯ ಮೂರುಸಾವಿರ ಮಠ ವಿದ್ಯಾವರ್ಧಕ ಸಂಘದ ಮಹಿಳಾ ವಿದ್ಯಾಲಯದಲ್ಲಿ ಕಲಿತು. ಮುಂದೆ ಧಾರವಾಡ ವಿಶ್ವ ವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ ಎ. ಹಾಗೂ ಕನ್ನಡ ಸಾಹಿತ್ಯ ಮತ್ತು ಬಸವ ತತ್ವ' ಅಧ್ಯಯನಗಳ ಕುರಿತು ಪಿ.ಜಿ. ಡಿಪ್ಲೋಮಾ ಮತ್ತು ``ಎಂ.ಡಿ. ಗೋಗರೆ ಸಮಗ್ರ ಸಾಹಿತ್ಯ ವಿಷಯ ಕುರಿತು ಪಿ.ಎಚ್.ಡಿ ಪದವಿ''ಯನ್ನು , ಹಿಂದಿಯಲ್ಲಿ ಬಿ.ಎ, ಸಂಸ್ಕೃತದಲ್ಲಿ ಎನ್.ಇ.ಟಿ. ಸುಗುಮ ಸಂಗೀತದಲ್ಲಿ ಕೋರ್ಸ, ಅಲ್ಲದೆ ಅದ್ಯಾತ್ಮ ಶಿಕ್ಷಣದಲ್ಲಿ ಡಿಪ್ಲೋಮಾ ಇಷ್ಟೇಲ್ಲ ಕಲಿಕೆಯಾಗಿದ್ದರೂ ಇನ್ನೂ ಜ್ಞಾನದ ತೃಷೆ ಹಿಂಗಿಲ್ಲ. ಹೊಸತಿಗೆ ತಮ್ಮನ್ನು ತೆರೆದುಕೊಳ್ಳುತ್ತಲೆ ಇರುತ್ತಾರೆ.

ವೃತ್ತಿ:- 2012 ರಿಂದ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದಲ್ಲಿ ಬೋಧನೆಗೈಯುತ್ತಿರುವ ಇವರು. ಆ ಪೂರ್ವದಲ್ಲಿ ಹುಬ್ಬಳ್ಳಿಯಲ್ಲಿ ಚೇತನಾ ಅಕಾಡೆಮಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ, ಮೂರು ಸಾವಿರ ಮಠದ ಎಸ್.ಜೆ.ಎಮ್.ವ್ಹಿ.ಎಸ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅನುಭವ ಅವರದು.

ವಾಗ್ಮಿಯಾಗಿ:- ಆಳವಾದ ಅಧ್ಯಯನ, ಅದ್ಬುತ್ ವಾಕ್ಚಾತುರ್ಯವನ್ನು ಹೊಂದಿರುವ ಅವರು ರಾಜ್ಯದಾದ್ಯಂತ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ತಮ್ಮ ಚಿಂತನೆಯನ್ನು ಮಂಡಿಸಿದ ಖ್ಯಾತಿ ಅವರದು. ಶರಣ ಸಾಹಿತ್ಯದಲ್ಲಿ ವಿಶೇಷ ಪ್ರಾವೀಣ್ಯತೆ, ಯಾವುದೇ ವಿಷಯವನ್ನು ಮಂಡಿಸುವುದಿದ್ದರೆ ತುಂಬ ಅಕೆಡಮಿಕ್ ಆಗಿ ಮಾತನಾಡುವ ಕಲೆ ಅವರಿಗೆ ಸಿದ್ದಿಸಿದೆ. ಅದಕ್ಕೆ ಬಾಲ್ಯದಿಂದಲೂ ಸಂಸ್ಕಾರ ಸಿಕ್ಕಿರುವುದು ಫಲದಾಯಕವಾಗಿದೆ. ಶರಣರು, ಕನ್ನಡ ನೆಲ, ಜಲ, ಭಾಷೆ, ಮಹಿಳೆ, ಚಾರಿತ್ರಿಕ ನಾಯಕರು, ಐಕ್ಯತೆ, ಧರ್ಮ, ಹಬ್ಬ ಹೀಗೆ ಎಲ್ಲದರ ಕುರಿತು ಮಾಮರ್ಿಕ ಉಪನ್ಯಾಸ ನೀಡುವುದನ್ನು ಕೇಳಿದ್ದೆವೆ.

ಬಹುಮುಖಿ:- ಮೈತ್ರೇಯಿಣಿ ಅವರದು ಬಹುಮುಖ ವ್ಯಕ್ತಿತ್ವ. ಶೈಕ್ಷಣಿಕ, ಧಾಮರ್ಿಕ, ಸಾಮಾಜಿಕ, ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಉತ್ತಮ ಸಾಹಿತ್ಯವನ್ನು ರಚಿಸುವಲ್ಲಿಯೂ ಪ್ರತಿಭೆಯನ್ನು ತೋರಿದ್ದಾರೆ. ಹಲವಾರು ಸಂಘಟನೆಯಲ್ಲಿದ್ದು ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ  ಪರಿಷತ್ತಿನ ಬೆಳಗಾವಿ ಜಿಲ್ಲಾ ಅಧ್ಯಕ್ಷೆಯಾಗಿ, ಸಿರಿಗನ್ನಡ ವೇದಿಕೆ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ, ಅಲ್ಲದೆ ಕಸಾಪ, ಉತ್ತರ ಕನರ್ಾಟಕ ಲೇಖಕಿಯರ ಸಂಘ, ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ, ಕನ್ನಡ ಅಧ್ಯಾಪಕರ ಪರಿಷತ್ತು ನಾಗಮ್ಮತಾಯಿ ಮಹಿಳಾ ಮಂಡಲ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಈ ಎಲ್ಲ ಸಂಸ್ಥೆಗಳ ಅಜೀವ ಸದಸ್ಯತ್ವವನ್ನು ಪಡೆದುಕೊಂಡು, ಅವುಗಳ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಶಸ್ತಿಗಳು: ಇವರ ಕಾರ್ಯಕ್ಷೇತ್ರಕ್ಕೆ ಸಾಧನೆಗೆ ಹಲವಾರು ಪುರಸ್ಕಾರಗಳು, ಸನ್ಮಾನಗಳು ಅರಸಿ ಬಂದಿವೆ. ಅವುಗಳಲ್ಲಿ ಪ್ರಮುಖವಾದವುಗಳು ರಾಷ್ಟ್ರೀಯ ಯುವ ಸೇವಾ ಪ್ರಶಸ್ತಿ, ಆದರ್ಶ ಶಿಕ್ಷಕಿ ಪ್ರಶಸ್ತಿ, ಮಗು ಘೀವಾರಿ ಸಾಹಿತ್ಯ ಪ್ರಶಸ್ತಿ, ಬಸವ ಭಾಷಣ ಪ್ರಶಸ್ತಿ, ಕಾವ್ಯ ಸಿರಿ ಪ್ರಶಸ್ತಿಗಳಲ್ಲದೆ, ನಾಡಿನ ವಿವಿಧ ಮೂಲೆಯ ಮಠಾಧೀಶರಿಂದ ಶ್ರೀಮಠಗಳಲ್ಲಿ ಇವರ ಉಪನ್ಯಾಸಕ್ಕೆ ಸನ್ಮಾನ ಸಂದಿವೆ. ರಾಜಕೀಯ ಮುಖಂಡರು, ರಾಜ್ಯಪಾಲರು, ಮುಖ್ಯಮಂತ್ರಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಳೆದ ವರುಷವಷ್ಟೇ ರಷಿಯಾ ದೇಶಕ್ಕೂ ತೆರಳಿ ಅಧ್ಯಯನ, ಪ್ರಬಂಧ ಮಂಡಿಸಿದ ಕೀತರ್ಿ ಅವರ ಮುಡಿಗೇರಿದೆ. 

ನಯ, ವಿನಯವನ್ನು ಮೈಗೂಡಿಸಿಕೊಂಡು, ಆತ್ಮೀಯ ಸ್ನೇಹ ಬಳಗವನ್ನು ಕಟ್ಟಿಕಕೊಂಡು ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತಾವಷ್ಟೇ ಅಲ್ಲದೆ, ತಮ್ಮೊಂದಿಗೆ ಅಪಾರ ಮಹಿಳೆಯರನ್ನು ಜೊತೆಗೂಡಿಸಿಕೊಂಡು ಸಮಾಜ  ಕಟ್ಟುವ ಅವರ ಕಾರ್ಯ ಎಲ್ಲರಿಗೂ ಆದರ್ಶವಾಗಲಿ, ಅವರ ಜ್ಞಾನ ಎಲ್ಲರಿಗೂ ಹಂಚಿಕೆಯಾಗಲಿ ಎಂದು ಹಾರೈಸೋಣ.


ಸುದ್ದಿ ಓದಿ