ರೇಣುಕಾಚಾರ್ಯರ ಆದರ್ಶ ತತ್ವ ಜೀವನದಲ್ಲಿ ಅಳವಡಿಸಿಕೊಳ್ಳಿ ಚೌಕಿಮಠದ ಕೆ.ಎಂ. ಬಸವರಾಜಶಾಸ್ತ್ರಿ
ಕಂಪ್ಲಿ 02 : ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಮಹಾನೀಯರ ಜಯಂತ್ಯುತ್ಸವಗಳು ಕೇವಲ ಆಚರಣೆಗೆ ಸೀಮಿತವಾಗದಿರಲಿ ಎಂದು ಕಂಪ್ಲಿ ಪಟ್ಟಣದ ಕಲ್ಯಾಣ ಚೌಕಿಮಠದ ಕೆ.ಎಂ.ಬಸವರಾಜ ಶಾಸ್ತ್ರಿ ತಿಳಿಸಿದರು.ಅವರು ಪಟ್ಟಣದ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ವೀರಶೈವ ಸಂಘ, ವೀರಶೈವ ಸಮಾಜದ ವಿವಿಧ ಸಂಘಟನೆಗಳು ಏರಿ್ಡಸಿದ್ದ ಶ್ರೀರೇಣುಕಾಚಾರ್ಯರ ಜಯಂತಿಯಲ್ಲಿ ಮಾತನಾಡಿ, ವೀರಶೈವ ಧರ್ಮ ಅತ್ಯಂತ ಪ್ರಾಚೀನ,ಇದರ ಇತಿಹಾಸ ಮತ್ತು ಪರಂಪಪರೆ,ಕಾಯಕ ಹಾಗೂ ದಾಸೋಹ ಭಾವನೆಗಳನ್ನು ಬೆಳೆಸಿದ ಶ್ರೇಯಸ್ಸು ವೀರಶೈವ ಧರ್ಮಕ್ಕಿದೆ ಎಂದರು.
ತಾಲ್ಲೂಕು ವೀರಶೈವ ಸಂಘದ ಅಧ್ಯಕ್ಷ ಎಸ್.ಎಂ.ನಾಗರಾಜಸ್ವಾಮಿ, ಮಾಜಿ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ, ಸಮಾಜದ ಹಿರಿಯರಾದ ಅರವಿ ಬಸವನಗೌಡ, ಕೆ.ಎಂ.ಹೇಮಯ್ಯಸ್ವಾಮಿ ಹಾಗೂ ಇತರರು ಮಾತನಾಡಿ, ವೀರಶೈವ ಧರ್ಮದಲ್ಲಿ ವ್ಯಕ್ತಿ ನಿಷ್ಠೆಗಿಂತ ತತ್ವ ನಿಷ್ಠೆಗೆ,ಚರಿತ್ರೆಗಿಂತ ಚಾರಿತ್ರ್ಯಕ್ಕೆ, ಸ್ಥಾವರಕ್ಕಿಂತ ಜಂಗಮಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟಿದೆ ಎಂದರು. ರೇಣುಕಾಚಾರ್ಯರ ಭಾವಚಿತ್ರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ಪುಷ್ಾರೆ್ಪಣ ಮಾಡಿದರು.ಕಾರ್ಯಕ್ರಮದಲ್ಲಿ ಉಪ ತಹಸಿಲ್ದಾರ್ ಬಿ.ರವೀಂದ್ರಕುಮಾರ್, ಸಮಾಜದ ಮುಖಂಡರಾದ ವಾಲಿ ಕೊಟ್ರ್ಪ, ಕಲ್ಗುಡಿ ವಿಶ್ವನಾಥ್, ಘನಮಠದಯ್ಯ ಶಾಸ್ತ್ರಿ, ಡಾ.ಜಗನ್ನಾಥ್ ಹಿರೇಮಠ,
ವಿ.ವಿದ್ಯಾಧರ್, ಕೆ.ಎಂ.ವಾಗೀಶ್, ಬಿ.ವಿ..ಗೌಡ, ಸಚಿನ್ ಪುಟ್ಟಿ, ಆರವಿ ಅಮರೇಶ ಗೌಡ,ಎಸ್.ಚಂದ್ರಶೇಖರ್, ಟಿ.ಎಚ್.ಎಂ.ರಾಜಕುಮಾರ್, ಎನ್.ಎಂ.ಪತ್ರೆಯ್ಯಸ್ವಾಮಿ, ವೀರಯ್ಯಸಾಲಿಮಠ, ಎಸ್.ಡಿ.ಬಸವರಾಜ, ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಡಾ.ಶಾರದ ಹಿರೇಮಠ, ಕಾರ್ಯದರ್ಶಿ ಸುಮಂಗಳಾ, ಖಜಾಂಚಿ ಎಸ್.ಸಿಂಧು, ಮಾಜಿ ಅಧ್ಯಕ್ಷೆ ಶಿವಗಂಗಮ್ಮ ಮುಕ್ಕುಂದಿ, ಅನುಪಮಾ , ಅರವಿ, ಎಚ್.ಶೋಭಾ ಮತ್ತು ಪದಾಧಿಕಾರಿಗಳು, ವೀರಶೈವ ಸಮಾಜದ ವಿವಿಧ ಸಂಘಟನೆಗಳ ಪದಾಧಿಆಕರಿಗಳು, ವಿವಿಧ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.