ಶಿಗ್ಗಾವ್

ಆದಿಶಕ್ತಿಯನ್ನು ನವ ವಿಧದಲ್ಲಿ ಪೂಜಿಸಲಾಗುತ್ತದೆ: ಮೌನೇಶ್ವರ ಮಠದ ಶ್ರೀ

ಆದಿಶಕ್ತಿಯನ್ನು ನವ ವಿಧದಲ್ಲಿ ಪೂಜಿಸಲಾಗುತ್ತದೆ: ಮೌನೇಶ್ವರ ಮಠದ  ಶ್ರೀ

ಲೋಕದರ್ಶನ ವರದಿ

ಶಿಗ್ಗಾವಿ 06: ಪುರಾಣದ ಪ್ರಕಾರ ಜಗನ್ಮಾತೆ ರಾಕ್ಷಸರನ್ನು ಸಂಹಾರ ಮಾಡಲು ಒಂದೊಂದು ಅವತಾರವೆತ್ತಿ ಲೋಕವನ್ನು ಕಾಪಾಡುತ್ತಾಳೆ. ಆದ್ದರಿಂದ ಆದಿಶಕ್ತಿಯನ್ನು ನವ ವಿಧದಲ್ಲಿ ಪೂಜಿಸಲಾಗುತ್ತದೆ ಎಂದು ಹುಲಗೂರಿನ ಮೌನೇಶ್ವರ ಮಠದ ಸ್ವಾಮಿಗಳು ಹೇಳಿದರು. 

ತಾಲೂಕಿನ ಕುನ್ನೂರ ಗ್ರಾಮದ ಶರನ್ನವರಾತ್ರಿ ನಿಮಿತ್ಯ 9 ದಿನಗಳ ಗ್ರಾಮ ದೇವತೆಯ ದೇವಸ್ಥಾನದಲ್ಲಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಕೊನೆಯ ದಿನ ಪಾಲ್ಗೊಂಡು ಮಾತನಾಡಿದ ಅವರು ಕಳೆದ ಎರಡು ವರ್ಷ ಕೋವಿಡ್-19 ಹಬ್ಬ-ಹರಿದಿನಗಳ ಸಂಭ್ರಮವನ್ನು ಕಸಿದಿತ್ತು. ಯಾವುದೇ ಸತ್ಸಂಗ ಮತ್ತು ಉತ್ಸವಗಳು ನಡೆದಿರಲಿಲ್ಲ. ಈ ಸಲ ಇಂಥಹ ಪುರಾಣ ಪ್ರವಚನ ಕಾರ್ಯಕ್ರಮದ ಪ್ರತಿಯೊಬ್ಬರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಿದ್ದು ಹರ್ಷ ತಂದಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಗುಲಬರ್ಗಾದ ಕಮಲಾಪೂರ ತಾಲೂಕಿನ ಮುಗಳಿ ವಿರಕ್ತಮಠದ ಮನಿಪ್ರ ಬಸವಲಿಂಗ ಮಹಾಸ್ವಾಮಿಗಳು ಪುರಾಣವನ್ನು ಪ್ರವಚನವನ್ನು ಮಾಡಿದರು ಕುನ್ನೂರ ಗ್ರಾಮದಲ್ಲಿ ನವರಾತ್ರಿ ಸಮಯದಲ್ಲಿ ಒಂಬತ್ತು ದಿನಗಳವರೆಗೆ ನವ ದುಗರ್ೆಯರ ರೂಪದಲ್ಲಿ ಶಕ್ತಿದೇವತೆಯನ್ನು ಶ್ರದ್ಧಾ, ಭಕ್ತಿಯಿಂದ ಆರಾಧನೆ ಮಾಡಿದ್ದೀರಿ, ದೇವಿ ನಮ್ಮೆಲ್ಲರ ಬದುಕಿನಲ್ಲಿ ಎದುರಾದ ಸಂಕಷ್ಟಗಳನ್ನು ದೂರ ಮಾಡುವ ಮೂಲಕ ಸುಖ, ಶಾಂತಿ, ನೆಮ್ಮದಿಯನ್ನು ಕರುಣಿಸುತ್ತಾಳೆ ಎಂದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುನ್ನೂರನ ವೇ.ಮೂ ಸೋಮಯ್ಯನವರು ಹಿರೇಮಠ ವಹಿಸಿದ್ದರು. ಗ್ರಾಮ ದೇವಿ ಪುರಾಣ ಪ್ರವಚನವನ್ನು ಕುನ್ನೂರ ಗ್ರಾಮದ ಗ್ರಾಮದೇವಿ ದೇವಸ್ಥಾನದ ಸಮಿತಿ ಗ್ರಾಮಸ್ಥರು ಆಯೋಜಿಸಿದ ಕಾರ್ಯಕ್ರಮದಲ್ಲಿ ಗ್ರಾಮದ ಮಹಿಳೆಯರು ಯುವಕರ ಪಡೆಯು ಹಾಗೂ ಗ್ರಾಮದ ಮುಖಂಡರುಗಳು ಪಾಲ್ಗೊಂಡು ದಿನಂಪ್ರತಿ ಪ್ರಸಾದದ ವ್ಯವಸ್ಥೆಯನ್ನು ನೇರವೇರಿಸಿದರು. 

ಗ್ರಾಮದ ಮುಖಂಡ ವರ್ಧಮಾನ ಶೆಟ್ಟೆಪ್ಪನವರ ಹಾಗೂ ಗ್ರಾಮದ ಎಲ್ಲಾ ಸಮಾಜದ ಮುಖಂಡರುಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಗದಗನ ವಿರೇಶ್ವರ ಪುಣ್ಯಾಶ್ರಮದ ಸಂಗೀತ ಗಾನ ಕೋಗಿಲೆ ಸಿದ್ದಾರೋಡ ಅವರಳ್ಳಿ, ತಬಲಾವನ್ನು ಶ್ರೀಶೈಲಕುಮಾರ ಹಾಗೂ ಸಂಗಡಿಗರು ಪಾಲ್ಗೊಂಡಿದ್ದರು.

ಕುಮಾರಿ ಶ್ರದ್ದಾ ಅಣ್ಣಪ್ಪಾ ಮೋರಭದ, ಹಾಗೂ ಕುಮಾರಿ ಶ್ರದ್ದಾ ಮಂಜುನಾಥ ನವಲಗುಂದ ಭರತ ನಾಟ್ಯವನ್ನು ಮಾಡಿದರು, ಯೋದ ಶಿವರಾಜಕುಮಾರ ಅವರಿಗೆ ಶ್ರದ್ದಾಂಜಲಿ ಅರ್ಪಸಿ  ಲಾಯಿತು,  ನಾಗರಾಜ ನಡಿಗೇರಿ ಕಾರ್ಯಕ್ರಮ ನಿರ್ವಹಿಸಿದರು 

ಸುದ್ದಿ ಓದಿ