ನಟ ಸುದೀಪ ಹುಟ್ಟುಹಬ್ಬ ಆಚರಣೆ
ಲೋಕದರ್ಶನ ವರದಿ
ಮುಂಡಗೋಡ:ತಾಲೂಕಿನ ಇಂದೂರ ಗ್ರಾಮದಲ್ಲಿ ಕಿಚ್ಚ ಸುದೀಪ ಅಭಿಮಾನಿ ಬಳಗದವರು ಅಭಿನಯ ಚಕ್ರವರ್ತಿ ಸುದೀಪ ಅವರ 49ನೇ ಹುಟ್ಟುಹಬ್ಬವನ್ನು ಶುಕ್ರವಾರ ಆಚರಿಸಿದರು.
ಗ್ರಾಮದೇವತೆ ಮಾರಿಕಾಂಬಾ(ದ್ಯಾಮವ್ವ)ದೇವಿಗೆ ಪೂಜೆ ಸಲ್ಲಿಸಲಾಯಿತು. ನಂತರ ಗ್ರಾಮದಲ್ಲಿರುವ 6 ಅಂಗನವಾಡಿ ಕೇಂದ್ರದ 150 ಮಕ್ಕಳಿಗೆ ದಿನಬಳಕೆ ವಸ್ತುಗಳನ್ನು ವಿತರಿಸಿ ಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ಸುದೀಪ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು. ಈ ವೇಳೆ ಅಭಿಮಾನಿ ಬಳಗದ ಅಧ್ಯಕ್ಷ ಮಂಜುನಾಥ ನಡಿಗೇರ ಮಾತನಾಡಿ ಚಲನಚಿತ್ರ ರಂಗದಲ್ಲಿ ತಮ್ಮದೆ ಆದ ವಿಶೇಷ ಛಾಪು ಮೂಡಿಸಿರುವ ಸುದೀಪ ಅವರು ದೇಶ ಕಂಡ ಅದ್ಬುತ ನಟ. ಇನ್ನೂ ಹೆಚ್ಚು-ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ತಮ್ಮ ಹಾಗೂ ಕನ್ನಡ ಚಿತ್ರರಂಗದ ಹೆಸರು ತರಲಿ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಬಡಿಗೇರ, ಸದಸ್ಯರಾದ ನಾಗಪ್ಪ ಬಳ್ಳಾರಿ, ಚಂದ್ರಶೇಖರ ನಡಿಗೇರ, ಸುಭಾಸ ಧಾರವಾಡ, ನಾಗರಾಜ ಗೋಣೆಪ್ಪನವರ, ಗಂಗಾಧರ ಬಡಿಗೇರ, ಮಹೇಶ ದುಮ್ಮಣ್ಣನವರ, ಪ್ರವೀಣ ಪವಾರ, ಫಕ್ಕೀರೇಶ ಈಳಿಗೇರ, ಹನುಮಂತ ಕಣಕಣ್ಣನವರ, ಗಣೇಶ ಈಳಿಗೇರ, ನವೀನ ಹೆಬ್ಬಳ್ಳಿ, ಬಸವರಾಜ ಬಮ್ಮಿಗಟ್ಟಿ, ಪ್ರವೀಣ ಸತ್ತೂರ, ನಾಗರಾಜ ಕಣಕಣ್ಣನವರ, ಶಿವಾನಂದ ನಾಣಪುರ, ಬಾಳಪ್ಪ ಮಡಿವಾಳರ, ಅಂಗನವಾಡಿ ಕಾರ್ಯಕರ್ತೆಯರಾದ ಹೇಮಲತಾ ನಾಯ್ಕ, ಸುರೇಖಾ ಕುರ್ಡ್ಕರ, ನಾಗಮ್ಮ ದೊಡ್ಡಮನಿ, ರತ್ನಕ್ಕಾ ಬಡಿಗೇರ ಹಾಗೂ ಮುಂತಾದವರು ಉಪಸ್ಥಿತರಿದ್ದರು