ಕೊಲ್ಹಾರ ಯುಕೆಪಿ ಕ್ರಾಸ್ ಸಮೀಪ ಅಪಘಾತ
ಕೊಲ್ದಾರ 22: ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಆಟೋದಲ್ಲಿದ್ದ ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ದಾರುಣ ಘಟನೆ ಶನಿವಾರ ರಾತ್ರಿ ಕೊಲ್ಹಾರ ಯುಕೆಪಿ ಕ್ರಾಸ್ ಸಮೀಪ ಕೊರೆಮ್ಮದೇವಿ ದೇವಸ್ಥಾನ ಹತ್ತಿರ ನಡೆದಿದೆ ಯುಕೆಪಿ ಕ್ರಾಸ್ ದಿಂದ ರಾಷ್ಟ್ರೀಯ ಹೆದ್ದಾರಿ 52 ರ ಮಾರ್ಗವಾಗಿ ಬೀಳಗಿ ಕಡೆಗೆ ಹೊರಟ್ಟಿದ ಆಟೋಗೆ ಹಿಂಬದಿಯಿಂದ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಆಟೋದಲ್ಲಿದ್ದ ಅನ್ನಪೂರ್ಣಾ ನೇವಣಿ (39) ವರ್ಷ ಸ್ಥಳದಲ್ಲೇ ಮೃತಪಟ್ಟಿದ್ದು ಪಾರವ ಮಹಾಂತಪ್ಪ ಅನ್ನೆಪ್ಪನವರ (65)ವರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಇಬ್ಬರು ಮಹಿಳೆಯರು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಮುತ್ತಲದಿನ್ನಿ ಆರ್.ಸಿ ಗ್ರಾಮದವರು ಎಂದು ತಿಳಿದು ಬಂದಿದೆ. ಆಟೋದಲ್ಲಿದ್ದ ಇನ್ನುಳಿದ ಹಲವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಇವರೆಲ್ಲ ರೈತರ ಜಮೀನಿನಲ್ಲಿ ಕೂಲಿ ಕೆಲಸ ಮುಗ್ಸಿ ಕೊಂಡು ತಮ್ಮ ಊರಿನ ಕಡೆಗೆ ಹೊರಟ್ಟಿದ್ದಾಗ ಈ ದುರ್ಘಟನೆ ಸಂಭವಿಸಿದೆ ಸ್ಥಳಕ್ಕೆ ಕೊಲ್ಹಾರ ಪಿಎಸ್‌ಐ ಅಶೋಕ ನಾಯಕ ಹಾಗೂ ಪೋಲಿಸ್ ಸಿಬ್ಬಂದಿಗಳು ಭೇಟಿ ನೀಡಿ ಪರೀಶೀಲನೆ ನಡೆಸಿದ್ದರು.