ಧರಣಿ ಕೈಬಿಟ್ಟು, ಉಪವಾಸ ಸತ್ಯಾಗ್ರಹ ಪ್ರಾರಂಭ
ಮುದ್ದೇಬಿಹಾಳ : ತಾಲೂಕಿನಲ್ಲಿರುವ ಮದ್ಯದಂಗಡಿಗಳ ಸನ್ನದು ನವಿಕರಣ ಮಾಡುವ ಸಂದರ್ಭದಲ್ಲಿ ಅಬಕಾರಿ ಅಧಿಕಾರಿಗಳು ಅಬಕಾರಿ ನಿಯಮವನ್ನು ಉಲ್ಲಂಘನೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೋಳ್ಳಬೇಕು ಎಂದು ಪಟ್ಟಣದ ಆಡಳಿತ ಸೌಧದ ಆವರಣದಲ್ಲಿ ಪತ್ರಕರ್ತ ಸಾಮಾಜಿಕ ಹೋರಾಟಗಾರ ಮಂಜುನಾಥಸ್ವಾಮಿ ಕುಂದರಗಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಹತ್ತನೇಯ ದಿನ ಪೂರೈಸಿ ಹನ್ನೊಂದನೇಯ ದಿನಕ್ಕೆ ಉಪವಾಸ ಸತ್ಯಾಗ್ರಹ ಪ್ರಾರಂಬಿಸಲಾಯಿತು.. ಈ ವೇಳೆಯಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಬಿಸಿದ ಹೋರಾಟಗಾರ ಕುಂದರಗಿ ಮಾತನಾಡಿ ತಾಲೂಕಿನಲ್ಲಿ ಅಬಕಾರಿ ಇಲಾಖೆಯಲ್ಲಿ ನಡೆದಿರುವಂತಹ ಅಕ್ರಮದ ಕುರಿತು ನಡೆಯುತ್ತಿರುವ ಸತ್ಯಾಗ್ರಹಕ್ಕೆ ಸೌಜನ್ಯಕ್ಕಾದರೂ ತಾಲೂಕಾಡಳಿತ ಬಂದು ನಮ್ಮ ಸಮಸ್ಯೇಗಳನ್ನು ಕೇಳಿಲ್ಲಾ, ನಮ್ಮ ದೂರಿನ್ವಯ ಜಿಲ್ಲಾಧಿಕಾರಿಗಳು ಬಂದು ನಿಯಮ ಉಲ್ಲಂಘನೆಯಾದ ಮದ್ಯದಂಗಡಿಗಳನ್ನು ಪರಿಶೀಲನೆ ಮಾಡಲು ಮನವಿಯನ್ನು ಮಾಡಿದ್ದೇನೆ, ತಾಲೂಕಾಡಳಿತ ಹೋರಾಟದ ಗಂಭೀರತೆಯನ್ನು ಅರಿತುಕೋಳ್ಳುವಲ್ಲಿ ಯಾಕೆ ವಿಪಲವಾಗಿದೆ, ಎಂಬುವದನ್ನು ನಮಗೆ ತಿಳಿಯುತ್ತಿಲ್ಲಾ ಇವರು ಸಹ ಮದ್ಯದಂಗಡಿಗಳ ಮಾಲೀಕರ ಪ್ರಬಾವಕ್ಕೆ ಹೆದರಿದ್ದರಾ ? ಎಂದು ಪ್ರಶ್ನೇ ಮಾಡುತ್ತಾ ತಾಲೂಕಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅವರು ನನಗೆ ವ್ಯಯಕ್ತಿಕವಾಗಿ ಕೆಲವು ಖಾಸಗಿ ವ್ಯಕ್ತಿಗಳಿಂದ ಹೆದರಿಸುವ ಪ್ರಯತ್ನಗಳು ನಡೆಯುತ್ತಿವೆ, ಅದ್ಯಾವದಕ್ಕು ನಾನು ಹೆದರುವನಲ್ಲಾ, ಕೂಡಲೇ ಜಿಲ್ಲಾ ಅಧಿಕಾರಿಗಳು ಬಂದು ಮದ್ಯದಂಗಡಿಗಳನ್ನು ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು. ದಲಿತ ಮುಖಂಡ ಮಲ್ಲು ಬಿಜ್ಜೂರ, ಬಂದೇನವಾಜ ಕೊಂಡಗೂಳಿ, ತನ್ವೀರ್ ಮಕಾಂದಾರ, ಪ್ರಕಾಶ ಕಾಳೆ, ನೂರಹಮ್ಮದ್ ಸಣ್ಣಕ್ಕಿ, ಮಂಜುನಾಥ ನಾಯಕಮಕ್ಕಳ ಇನ್ನೀತರರು ಇದ್ದರು.
***ತಾಲೂಕಿನಲ್ಲಿ ಮದ್ಯಂಗಡಿಗಳನ್ನು ನವಿಕರಣ ಮಾಡುವ ಸಂದರ್ಭದಲ್ಲಿ ಅಬಕಾರಿ ನಿಯಮ ಉಲ್ಲಂಘನೆ ಮಾಡಿದ್ದಾರೆಂಬುವದು ಮೇಲ್ನೋಟಕ್ಕೆ ಕಂಡು ಬರುತ್ತದೆ, ಕೂಡಲೇ ಸಂಭಂದಿಸಿದ ಅಧಿಕಾರಿಗಳು ಬಂದು ಹೋರಾಟಗಾರರ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.
-ಮಂಜುನಾಥ ನಾಯಕಮಕ್ಕಳ, ಜಿಲ್ಲಾಧ್ಯಕ್ಷರು ವಾಲ್ಮೀಕಿ ಯುವ ಘಟಕ. ಮುದ್ದೇಬಿಹಾಳ