ಸತ್ಯಜಿತ್ ರೇ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪನೆಗೆ ನಿರ್ಧಾರ: ಜಾವಡೇಕರ್
ಕೋಲ್ಕತಾ, ಫೆ .23: ಖ್ಯಾತ ಚಲನಚಿತ್ರ ನಿರ್ಮಾಪಕ ದಿವಂಗತ ಸತ್ಯಜಿತ್ ರೇ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.ಇದು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಸಮನಾಗಿರುತ್ತದೆ. ಖ್ಯಾತ ಚಲನಚಿತ್ರ ನಿರ್ಮಾಪಕರ ಜನ್ಮ ಶತಮಾನೋತ್ಸವದ ನೆನಪಿಗಾಗಿ, ಅವರ ಪ್ರಮುಖ ಚಲನಚಿತ್ರಗಳನ್ನು ಈ ವರ್ಷದ ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವಕ್ಕೆ ಕಳುಹಿಸಲಾಗುವುದು ಮತ್ತು ಪ್ರದರ್ಶಿಸಲಾಗುವುದು ಎಂದು ಸಚಿವರು ಘೋಷಿಸಿದ್ದಾರೆ.ಈ ಸಂದರ್ಭದಲ್ಲಿ ಸಚಿವರು ಹಿರಿಯ ಚಲನಚಿತ್ರ ನಿರ್ಮಾಪಕ ಬಿಸ್ವಜಿತ್ ಚಟರ್ಜಿ ಅವರನ್ನು ಭಾರತೀಯ ಚಲನಚಿತ್ರ ರಂಗದ ವರ್ಷದ ವ್ಯಕ್ತಿಯನ್ನಾಗಿ ಸನ್ಮಾನಿಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಬಿಸ್ವಜಿತ್, ,ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದವರಿಗೆ ಉದ್ಯೋಗಾವಕಾಶಗಳ ವಿಸ್ತರಣೆ ಇರಬೇಕು. ಉದ್ಯಮವು ಕೆಲಸ ಮಾಡುವಾಗ ವಿವಿಧ ಚಿತ್ರತಂಡಗಳನ್ನು ಮರೆಯಬಾರದು ಎಂದರು. ಗೋವಾದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ 51 ನೇ ಆವೃತ್ತಿಯಲ್ಲಿ ಬಿಸ್ವಾಜಿತ್ ಅವರಿಗೆ ಪ್ರಶಸ್ತಿ ಘೋಷಿಸಲಾಗಿತ್ತು.