ಮನರಂಜನೆ

ನಟನಾಗಿ ಬದಲಾದ ಎ.ಆರ್‌. ರೆಹಮಾನ್ …!

ನಟನಾಗಿ  ಬದಲಾದ ಎ.ಆರ್‌. ರೆಹಮಾನ್ …!

ತಿರುವನಂತಪುರಂ, ಮಾ  22 : ತಮ್ಮ  ಮಾಂತ್ರಿಕ ಸಂಯೋಜನೆಯಿಂದ  ಲಕ್ಷಾಂತರ    ಸಂಗೀತ  ಪ್ರೇಮಿಗಳ  ಮನ ಗೆದ್ದಿರುವ   ಸುಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್.. ಈಗ ನಟನಾಗಿ  ಬದಲಾಗಲು   ಸಿದ್ಧರಾಗಿದ್ದಾರೆ. ಮೋಹನ್ ಲಾಲ್ ನಾಯಕರಾಗಿ    ನಟಿಸುತ್ತಿರುವ   ಮಲಯಾಳಂ ಚಿತ್ರ  'ಅರಟ್ಟು'  ದಲ್ಲಿ ರೆಹಮಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಈ  ವಿಷಯವನ್ನು  ಮೋಹನ್ ಲಾಲ್    ತಿಳಿಸಿದ್ದು,  "  ಸಂಗೀತ ದಿಗ್ಗಜ  ರೆಹಮಾನ್ ಅವರೊಂದಿಗೆ ಚಿತ್ರೀಕರಣದಲ್ಲಿ   ಪಾಲ್ಗೊಳ್ಳಲು  ನನಗೆ ಸಂತೋಷವಾಗಿದೆ" ಎಂದು  ಚಿತ್ರೀಕರಣದ ಫೋಟೋ ವೊಂದನ್ನು  ಹಂಚಿಕೊಂಡಿದ್ದಾರೆ ಉನ್ನೀ ಕೃಷ್ಣನ್ ನಿರ್ದೇಶನದಲ್ಲಿ   ಮೂಡಿಬರುತ್ತಿರುವ  ಈ  ಚಿತ್ರದ ಮೂಲಕ ಶ್ರದ್ಧಾ ಶ್ರೀನಾಥ್  ಮಲಯಾಳಂ  ಚಿತ್ರರಂಗಕ್ಕೆ  ಪರಿಚಯವಾಗುತ್ತಿದ್ದಾರೆ. ಚಿತ್ರ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಇದಕ್ಕೂ ಮೊದಲು ಮೋಹನ್ ಲಾಲ್ ಅಭಿನಯದ 'ಮಾನ್ಯಂ ಪುಲಿ' ಚಿತ್ರಕ್ಕೆ  ಉನ್ನಿ ಕೃಷ್ಣನ್‌ ಕಥೆಯನ್ನು ಒದಗಿಸಿದ್ದರು. ಈ ಚಿತ್ರ  ಎಲ್ಲಾ ಭಾಷೆಗಳಲ್ಲಿ  ಯಶಸ್ಸು ಕಂಡಿತು. ಇದರೊಂದಿಗೆ   ಮತ್ತೆ  ಇವರಿಬ್ಬರ   ಕಾಂಬಿನೇಷನ್‌  ನಲ್ಲಿ    ಚಿತ್ರ  ತೆರೆಗೆ   ಬರುತ್ತಿರುವ ಹಿನ್ನಲೆಯಲ್ಲಿ    ಪ್ರೇಕ್ಷಕರಲ್ಲಿ ಭಾರಿ  ನಿರೀಕ್ಷೆ  ಮೂಡಿಸಿದೆ. 



ಸುದ್ದಿ ಓದಿ