ಹಾಲಿವುಡ್ ನಟಿ ಏಂಜಲೀನಾ ಜೋಲೀ ನಡವಳಿಕೆಗೆ ಕೆರಳಿದ ಅಭಿಮಾನಿಗಳು
ನ್ಯೂಯಾರ್ಕ್, ಜೂನ್ 13: ಹಾಲಿವುಡ್ ಪ್ರಸಿದ್ಧ ನಟಿ ಏಂಜಲೀನಾ ಜೋಲೀ ಅವರ ನಡವಳಿಕೆಗಳಿಗೆ ಆಕೆಯ ಅಭಿಮಾನಿಗಳು ಕೆರಳಿದ್ದಾರೆ. ಮಕ್ಕಳ ಸಂರಕ್ಷಣೆ ವಿಷಯದಲ್ಲಿ ಆಕೆಯ ಪತಿ ಬ್ರಾಡ್ ಪಿಟ್ ಪರವಾಗಿ ನ್ಯಾಯಾಲಯ ಇತ್ತೀಚಿಗೆ ತೀರ್ಪು ನೀಡಿದ್ದರೂ, ಆದೇಶಗಳನ್ನು ದಿಕ್ಕರಿಸಿ ತನ್ನ ಮಕ್ಕಳನ್ನು ಕರೆದುಕೊಂಡು ನ್ಯೂಯಾರ್ಕ್ ಗೆ ತೆರಳಿದ್ದರು. ಈ ಹಿನ್ನಲೆಯಲ್ಲಿ ಬ್ರಾಡ್ ಪಿಟ್ ವಕೀಲರು ಮತ್ತೊಮ್ಮೆ ನ್ಯಾಯಾಲಯದ ಮೊರೆಹೋಗಲು ಪ್ರಯತ್ನಿಸುತ್ತಿದ್ದಾರೆ.ಆದರೆ, ಮೊದಲಿನಿಂದಲೂ, ಜೋಲೀ ತಮ್ಮ ಪತಿ ಬ್ರಾಡ್ಪಿಟ್ ಅವರೊಂದಿಗೆ ಕಠಿಣ ನಡೆದುಕೊಳ್ಳುತ್ತಿದ್ದು, ಮಾಧ್ಯಮ ಗೋಷ್ಟಿಗಳಲ್ಲಿ ಬ್ರಾಡ್ ಪಿಟ್ ಬಗ್ಗೆ ನಿರ್ಲಕ್ಷ್ಯ, ಅಪಮಾನ, ವಿಚ್ಚೇದನ ಅರ್ಜಿಯ ಜೊತೆಗೆ 9 ಮಿಲಿಯನ್ ಡಾಲರ್ ಜೀವನಾಂಶ ಕೇಳಿರುವುದು, ಈಗ ಮಕ್ಕಳ ಕಸ್ಟಡಿಗೆ ಸಂಬಂಧಿಸಿದ ನಡವಳಿಕೆಗಳಿದ ಆಕೆಯ ಅಭಿಮಾನಿಗಳು ತೀವ್ರ ಬೇಸರಗೊಂಡಿದ್ದಾರೆ. ಈ ಕ್ರಮವಾಗಿ ಬ್ರಾಡ್ ಪಿಟ್ಗೆ ಬೆಂಬಲ ಹೆಚ್ಚುತ್ತಿದೆ. ಹುಟ್ಟುಹಬ್ಬದ ಹೆಸರಿನಲ್ಲಿ ಜೋಲೀ ತಂದೆಯಿಂದ ಮಕ್ಕಳನ್ನು ದೂರಮಾಡಿ ಬೇರೆಡೆಗೆ ಕರೆದುಕೊಂಡು ಹೋಗಿದ್ದರ ಬಗ್ಗೆ ಹಾಲಿವುಡ್ ಮಾಧ್ಯಮ ವೆಬ್ ಸೈಟ್ಗಳ ಜೊತೆಗೆ ಅಭಿಮಾನಿಗಳು ಕೋಪಗೊಂಡಿದ್ದಾರೆ.
ಈ ನಡುವೆ, ಏಂಜಲೀನಾ ತಮ್ಮ ಮಾಜಿ ಪತಿ ಜಾನಿ ಲೀ ಮಿಲ್ಲರ್(48) ಗೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ಬ್ರಿಟಿಷ್-ಅಮೇರಿಕನ್ ನಟ ಜಾನಿ ಲೀ ಪ್ರಸ್ತುತ ನ್ಯೂಯಾರ್ಕ್ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದು, ಜೋಲೀ ಶುಕ್ರವಾರ ಅಲ್ಲಿಗೆ ತೆರಳಿದ್ದರು ಬಹಳ ಹೊತ್ತು ಅವರೊಂದಿಗಿದ್ದರು. ಇದರೊಂದಿಗೆ, ಇಬ್ಬರೂ ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿ ಹೊರಬರುತ್ತಿದೆ. ಆದರೆ, ಈ ವರ್ತನೆಗಳು ಪಿಟ್ ಅವರನ್ನು ರೊಚ್ಚಿಗೇಳಿಸಿದೆ ಎಂದು ಹಾಲಿವುಡ್ ಮೂಲಗಳು ತಿಳಿಸಿವೆ. ಏಂಜಲೀನಾ, ಜಾನಿ ಲೀ ಮಾರ್ಚ್ 1996 ರಲ್ಲಿ ವಿವಾಹವಾಗಿದ್ದರು. 18 ತಿಂಗಳ ನಂತರ ಬೇರ್ಪಟ್ಟಿದ್ದರು. ಆದರೆ, 1999 ರಲ್ಲಿ ಅವರಿಬ್ಬರು ವಿಚ್ಚೇದನ ಪಡೆದುಕೊಂಡಿದ್ದರು. ನಂತರ 2000 ರಲ್ಲಿ ಅಮೆರಿಕಾ ನಟ ಬಿಲ್ಲಿ ಬಾಬ್ ಅವರನ್ನು ಎರಡನೇ ಬಾರಿಗೆ ವಿವಾಹವಾಗಿದ್ದರು. ಮೂರು ವರ್ಷಗಳ ನಂತರ ವಿಚ್ಚೇದನ ಪಡೆದುಕೊಂಡಿದ್ದರು. ನಂತರ ಏಂಜಲೀನಾ ಜೋಲೀ 2014 ರಲ್ಲಿ ಬ್ರಾಡ್ ಪಿಟ್ ಅವರನ್ನು ವಿವಾಹವಾಗಿದ್ದು, 2019 ರಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.