ಕೋವಿಡ್ ಕೇರ್ ಫೀಲ್ಡ್ ಆಸ್ಪತ್ರೆಗೆ ಆನಂದಸಿಂಗ್ ಭೇಟಿ
ಬಳ್ಳಾರಿ, ಮೇ 29 :ಜಿಂದಾಲ್ ಕಾರ್ಖಾನೆಯ ಎದುರುಗಡೆಯ ವಿಶಾಲ ಮೈದಾನದಲ್ಲಿ ಸ್ಥಾಪಿಸಲಾಗಿರುವ 1 ಸಾವಿರ ಆಕ್ಸಿಜನ್ ಹಾಸಿಗೆಗಳ ಕೋವಿಡ್ ಕೇರ್ ಫೀಲ್ಡ್ ಆಸ್ಪತ್ರೆಗೆ ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಆಸ್ಪತ್ರೆಯಲ್ಲಿ ದಾಖಲಾಗಿರುವ ಸೊಂಕಿತರೊಂದಿಗೆ ಸಂವಾದ ನಡೆಸಿ, ಅವರ ಯೋಗಕ್ಷೇಮ ವಿಚಾರಿಸಿದರು.
ಚಿಕಿತ್ಸೆ ಹೇಗೆ ನೀಡಲಾಗುತ್ತಿದೆಯೇ ?, ಔಷಧಿ ಸರಿಯಾಗಿ ಕೊಡುತ್ತಿದ್ದಾರೆಯೇ ?,
ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಬಂದು ತಪಾಸಣೆ ಮಾಡುತ್ತಿದ್ದಾರೆಯೇ ?, ಊಟ ಹೇಗಿದೆ ಎಂಬುದು ಸೇರಿ ವಿವಿಧ ವಿಷಯಗಳ ಕುರಿತು ಸೋಂಕಿತರೊಂದಿಗೆ ಚರ್ಚೆ ನಡೆಸಿದರು.ನಂತರ ಅವರು ಆಸ್ಪತ್ರೆಯ ಹೊರಗಡೆ ಕುಳಿತಿದ್ದ ಸೋಂಕಿತರ ಸಂಬಂಧಿಕರೊಂದಿಗೂ ಮಾತನಾಡಿದ್ದು ಕಂಡುಬಂದಿತು.ಇದಾದ ನಂತರ ಅವರು ಆಸ್ಪತ್ರೆಯ ನೋಡಲ್ ಅಧಿಕಾರಿಗಳಾದ ಸಿದ್ರಾಮಪ್ಪ ಚಳಕಾಪುರೆ, ಡಾ.ದೇವಾನಂದ,ಡಾ.ಮರಿರಾಜ್ ಹೂಗಾರ ಸೇರಿ ದಂತ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು.