ಮನರಂಜನೆ

“ಆಮ್ಲೆಟ್” ಜುಲೈ 9ರಂದು ಕಲರ್ಸ್ ಸಿನಿಮಾದಲ್ಲಿ

“ಆಮ್ಲೆಟ್” ಜುಲೈ 9ರಂದು ಕಲರ್ಸ್ ಸಿನಿಮಾದಲ್ಲಿ

ಬೆಂಗಳೂರು, ಜೂನ್ 16: ಅಮೃತ ಫಿಲಂ ಸೆಂಟರ್ ಸಂಸ್ಥೆ ಅಡಿಯಲ್ಲಿ ಈ-ಸಮುದಾಯದ ಸಹಕಾರದೊಂದಿಗೆ ಸರಿತಾ ಓಂಪ್ರಕಾಶ್ ಮತ್ತು ಪ್ರಸನ್ನ  ಮಿಯಾಪುರಂ ನಿರ್ಮಿಸಿ, ವೆಂಕಟ್ ಭರದ್ವಾಜ್ ನಿರ್ದೇಶಿಸಿರುವ ಚಿತ್ರ "ಆಮ್ಲೆಟ್"  ಜುಲೈ 9 ರಂದು ಕಲರ್ಸ್ ಸಿನಿಮಾದಲ್ಲಿ ಪ್ರದರ್ಶನ ಗೊಳ್ಳಲಿದೆ.ಹೊಸ ಚಿತ್ರವೊಂದು ಈ ರೀತಿ ಪ್ರದರ್ಶನಗೊಳುತ್ತಿರುವುದು ಕನ್ನಡದಲ್ಲಿ ಇದೇ ಮೊದಲು ಎಂದು ಆಮ್ಲೆಟ್ ಚಿತ್ರ ನಿರ್ಮಾಪಕರಾದ ಸರಿತಾ ಓಂಪ್ರಕಾಶ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಆಡಿಯೋ , ಟೀಸರ್ ಮತ್ತು ಚಿತ್ರಕ್ಕೆ ಸಂಬಂಧಪಟ್ಟ ಕುತೂಹಲ ವಿಷಯಗಳನ್ನು ಬಿಡುಗಡೆ ಮಾಡಲಿದ್ದೇವೆ. ಆಮ್ಲೆಟ್ ಚಿತ್ರವು ಕ್ಲಾಸ್ ಕಾಮಿಡಿ ಚಿತ್ರವಾಗಿದ್ದು ನೋಡುಗರಿಗೆ ಒಳ್ಳೆ ಮನೋರಂಜನೆ ನೀಡಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. 

  ಈ-ಸಮುದಾಯ ಎಂಬ ಸಂಸ್ಥೆ ಈ ಚಿತ್ರಕ್ಕೆ ಸಹಕಾರ ನೀಡಿದೆ.  ತಾರಾಗಣದಲ್ಲಿ ಸಂಯುಕ್ತ ಹೊರನಾಡು, ಶಿನವ (ನವೀನ್ ), ಬಲರಾಜ ವಾಡಿ , ಶರ್ಮಿತ ಗೌಡ , ನಿರಂಜನ್ ದೇಶಪಾಂಡೆ , ಪಿ ಡಿ ಸತೀಶ್ ಚಂದ್ರ, ಮಧುರ , ಬಿಗ್ ಬಾಸ್ ಖ್ಯಾತಿಯ ಸುಜಾತ ಅಕ್ಷಯ್ , ಜ್ಯೂಸು ಕುಡಿತಿಯ ಖ್ಯಾತಿಯ ವಿರಾಜ್ ಕನ್ನಡಿಗ , ವಂಶಿಧರ್ ಭೋಗರಾಜ್ , ಲಾರೆನ್ ಮತ್ತು ಹಲವಾರು ರಂಗಭೂಮಿ ಕಲಾವಿದರು ಆಮ್ಲೆಟ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ . ಶೋಭರಾಜ್ ರವರು ಮಾಜಿ ರೌಡಿ ಪಾತ್ರದಲ್ಲಿ ಹೊಸ ರೀತಿಯಲ್ಲಿ  ಕಾಣಿಸಿಕೊಂಡಿದ್ದಾರೆ.  ನಿರ್ದೇಶಕರಾದ ವೆಂಕಟ್ ಭರದ್ವಾಜ ಕೂಡ ಒಂದು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.  ತಾಂತ್ರಿಕ ವರ್ಗದಲ್ಲಿ ,ವಿರಾಜ್ ಕನ್ನಡಿಗ ರವರ ಸಂಗೀತ, ಸ್ಯಾಮ್ ಸನ್ ಜೈಪಾಲ್ ರವರ ಹಿನ್ನೆಲೆ ಸಂಗೀತ , ಚಂದನ್ ಪಿ. ರವರ ಸಂಕಲನ ಮತ್ತು ಶಿಜಿ ಜಯದೇವ್ ರವರ ಛಾಯಾಗ್ರಹಣ ಈ ಚಿತ್ರಕ್ಕಿದೆ , ಸಂಭಾಷಣೆ ಗುರುರಾಜ್ ದೇಸಾಯಿ. ಕಥೆ ಚಿತ್ರಕಥೆ ನಿರ್ದೇಶನ ವೆಂಕಟ್ ಭಾರದ್ವಾಜ್.

  


ಸುದ್ದಿ ಓದಿ