ಅಂಬಿ ನೆನಪು ಅಜರಾಮರ ; ರೆಬೆಲ್ ಸ್ಟಾರ್ ಜನ್ಮದಿನದಂದು ಪತಿಯನ್ನು ನೆನೆದ ಸುಮಲತಾ, ದರ್ಶನ್, ಸುದೀಪ್ ಟ್ವೀಟ್
ಬೆಂಗಳೂರು, ಮೇ 29: ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬದಂದು ಸಂಸದೆ ನಟಿ ಸುಮಲತಾ ಪತಿಯನ್ನು ನೆನೆದು ಭಾವುಕರಾಗಿದ್ದಾರೆ. 'ಅಜರಾಮರ ನೆನಪುಗಳು, ಚಿರಂತನ ಚೈತನ್ಯ, ಅಪಾರ ಅಕ್ಕರೆ, ಸಂಜೀವಿನಿ ಸ್ನೇಹ, ಎಲ್ಲರನ್ನೂ ಎಲ್ಲವನ್ನೂ ಪ್ರೀತಿಸಿ ಹೃದಯವಂತಿಕೆ ಶಾಶ್ವತ ನಲ್ಮೆ, ಧನ್ಯ ಬದುಕು'' ಎಂದು ಟ್ವೀಟ್ ಮೂಲಕ ಪತಿಯನ್ನು ಸ್ಮರಿಸಿದ್ದಾರೆ. ಮತ್ತೊಂದೆಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ಸೇರಿದಂತೆ ಚಿತ್ರರಂಗದ ಹಲವರು ಶುಭಕೋರಿದ್ದಾರೆ. ಅಂಬರೀಶ್ಗೆ ದೊಡ್ಡ ಮಗನಂತಿದ್ದ ದರ್ಶನ್, ಅಂಬಿಯ ಆಪ್ತ ಸುದೀಪ್, ಮಗ ಅಭಿಷೇಕ್ ಅಂಬರೀಶ್, ಪವನ್ ಪಡೆಯರ್, ಸಿಂಪಲ್ ಸುನಿ, ನಿರ್ದೇಶಕ ರಘುರಾಮ್ ಸೇರಿದಂತೆ ಹಲವರು ಟ್ವಿಟರ್ ಮೂಲಕ ಶುಭ ಕೋರಿದ್ದಾರೆ.ಮತ್ತೊಮ್ಮೆ ಕರುನಾಡಲ್ಲೇ ಹುಟ್ಟಿಬರಲಿ ''ಎಂದಿಗೂ ಮಾಸದ ಅಂಬಿ ಅಪ್ಪಾಜಿಯ ಸವಿನೆನಪು. ಅವರ ಭಾಷಾಭಿಮಾನ, ಖಡಕ್ ಜೀವನ ಶೈಲಿ ಎಲ್ಲರಿಗೂ ಸ್ಫೂರ್ತಿಯಾಗಿರುತ್ತದೆ. ಮತ್ತೊಮ್ಮೆ ಕರುನಾಡಲ್ಲೇ ಹುಟ್ಟಿಬರಲಿ ನಮ್ಮ ನೆಚ್ಚಿನ ಮಂಡ್ಯದ ಗಂಡು'' ಎಂದು ದರ್ಶನ್ ಟ್ವೀಟಿಸಿದ್ದಾರೆ.
ರೆಬೆಲೆ ಸ್ಟಾರ್ ಅಂಬರೀಶ್ರ ಫೋಟೋಗಳನ್ನು ಹಂಚಿಕೊಂಡಿರುವ ಕಿಚ್ಚ ಸುದೀಪ್ ''ನಿಮ್ಮನ್ನು ನಿಜಕ್ಕೂ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅಂಬಿ ಮಾಮ'' ಎಂದು ಸ್ಮರಿಸಿದ್ದಾರೆ. ಡಾ ರಾಜ್, ಡಾ ವಿಷ್ಣು ಬಳಿಕ ಚಿತ್ರರಂಗಕ್ಕೆ ದೊಡ್ಡಣ್ಣನಂತಿದ್ದ ಅಂಬರೀಶ್ 2018ರ ನವೆಂಬರ್ನಲ್ಲಿ ವಿಧಿವಶರಾದರು. ರೆಬೆಲ್ ಸ್ಟಾರ್ ಇಲ್ಲದೇ ಮೂರನೇ ಹುಟ್ಟುಹಬ್ಬ ಇದಾಗಿದ್ದು, ಆಪ್ತರು, ಅಭಿಮಾನಿಗಳನ್ನು ತಮ್ಮ ನಾಯಕನನ್ನು ನೆನೆಪು ಮಾಡಿಕೊಂಡಿದ್ದಾರೆ.