ಗದಗ

ಏಡ್ಸ್ ತಡೆಗಟ್ಟುವಿಕೆಯಿಂದ ಆರೋಗ್ಯಯುತ ಸಮಾಜ ನಿಮರ್ಿಸಲು ಸಾಧ್ಯ: ದುರಗಣ್ಣವರ

ಏಡ್ಸ್ ತಡೆಗಟ್ಟುವಿಕೆಯಿಂದ ಆರೋಗ್ಯಯುತ ಸಮಾಜ ನಿಮರ್ಿಸಲು ಸಾಧ್ಯ: ದುರಗಣ್ಣವರ

ಗದಗ 05:    ಏಡ್ಸ್ ತಡೆಗಟ್ಟುವಿಕೆಯಿಂದ    ಆರೋಗ್ಯಯುತ ಸಮಾಜ ನಿಮರ್ಿಸಲು  ಸಾಧ್ಯ ಎಂದು   ಗದಗ  ತಾಲೂಕು ಪಂಚಾಯತ್  ಅಧ್ಯಕ್ಷ ಮೋಹನ್ ದುರಗಣ್ಣವರ ನುಡಿದರು. 

ನಗರದ  ಶ್ರೀ ತೋಂಟದ ಸಿದ್ದೇಶ್ವರ   ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ ಬಸವೇಶ್ವರ ಮಹಾವಿದ್ಯಾಲಯ ಆವರಣದಲ್ಲಿ  ಗದಗ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆ ಸಂಘ ಸಂಸ್ಥೆಗಳ ಸಹಯೋಗದಲ್ಲಿಂದು ಏರ್ಪಡಿಸಲಾಗಿದ್ದ  ನಿಮ್ಮ ಎಚ್. ಐ.ವಿ ಸ್ಥಿತಿಯನ್ನು ತಿಳಿಯಿರಿ ಘೋಷವಾಕ್ಯದಡಿ ಏರ್ಪಡಿಸಲಾಗಿದ್ದ  ವಿಶ್ವ ಏಡ್ಸ್ ದಿನಾಚರಣೆಯ  ಸಮಾರಂಭವನ್ನು  ಉದ್ಘಾಟಿಸಿ ಅವರು  ಮಾತನಾಡಿದರು.   

ಏಡ್ಸ್ ಸೋಂಕಿನಿಂದ  ಸಮಾಜವನ್ನು ಮುಕ್ತವಾಗಿಸಲು  ಜನರು ಅದರಲ್ಲೂ ಯುವಜನರು  ದುಶ್ಚಟಗಳನ್ನು ಬಿಟ್ಟು   ಹೆಚ್ಚಿನ ಜಾಗೃತಿಯಿಂದ   ಸಂಯಮದ ಜೀವನ ಮಾಡಬೇಕು ಎಂದು  ಮೋಹನ ದುರಗಣ್ಣವರ    ನುಡಿದರು.  

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ರೇಣುಕಾ ಕುಲಕಣರ್ೀ ಅವರು ಮಾತನಾಡಿ   ಶಿಸ್ತುಬದ್ಧವಲ್ಲದ ಜೀವನಶೈಲಿಯಿಂದ ನಾವು ಅನೇಕ ರೋಗಗಳನ್ನು ಆಹ್ವಾನ ಮಾಡಿಕೊಳ್ಳುತ್ತೇವೆ.  ರೋಗ ಪರಿಹರಿಸುವದಕ್ಕೆ ಗಮನ ಕೊಡುವದರ ಬದಲು ರೋಗ ಬರದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳುವುದು ಮುಖ್ಯವಾಗಿದೆ.   ಇಂದಿನ ಯುವಕರು   ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕ ಹಂತದಲ್ಲಿ ಏಡ್ಸ್ ತಡೆಗಟ್ಟುವಿಕೆಯಲ್ಲಿ  ಎಚ್ಚೆತ್ತುಕೊಂಡರೆ  ಆರೋಗ್ಯಯುತ ಸಮಾಜ ನಿಮರ್ಾಣ ಸಾಧ್ಯ ಎಂದು ರೇಣುಕಾ ಜಿ ಕುಲಕಣರ್ಿ ನುಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಮ್. ಹೊನಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ  ಹೆಚ್.ಐ.ವಿ. ಸೋಂಕಿನ ಪ್ರಮಾಣ ಕಳೆದ ಹತ್ತು ವರ್ಷಗಳ ಅಂಕಿಅಂಶಗಳನ್ನು ನೋಡಲಾಗಿ ಗಣನೀಯವಾಗಿ ಇಳಿಕೆ ಕಂಡುಬಂದಿದ್ದು, ಇದಕ್ಕೆ  ಇಲಾಖೆಯ ಹಲವಾರು ತಿಳುವಳಿಕೆ ಕಾರ್ಯಕ್ರಮಗಳು ಹಾಗೂ ಜಾಗೃತಿ ಜಾಥಾಗಳು ಕಾರಣ ಎಂದು ತಿಳಿಸಿದರು.  ಗದಗ ಜಿಲ್ಲೆಯು ರಾಜ್ಯ ಮಟ್ಟದ ಹೆಚ್.ಐ.ವಿ ನಿಯಂತ್ರಣ ಮತ್ತು ಕಾರ್ಯಕ್ರಮ ಅನುಷ್ಠಾನದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.    ಹೊಸ ಸೋಂಕನ್ನು ಸೊನ್ನೆಗೆ ತನ್ನಿ, ಕಳಂಕ ತಾರತಮ್ಯವನ್ನು ಸೊನ್ನೆಗೆ ತನ್ನಿ, ಹೆಚ್.ಐ.ವಿ.ಯಿಂದ ಮರಣವನ್ನು ಸೊನ್ನೆಗೆ ತನ್ನಿ ಎಂಬ ಆಂದೋಲನದೊಂದಿಗೆ ಏಡ್ಸ್ ರೋಗ ಹರಡುತ್ತಿರುವ ಪ್ರಮಾಣವನ್ನು ಸೊನ್ನೆಗೆ ತಂದಾಗ ಮಾತ್ರ ಈ ದಿನಾಚರಣೆಯ ಉದ್ದೇಶ ಪೂರ್ಣಗೊಳ್ಳುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ  ಎಚ್.ಐ.ವಿ. ತಡೆಗಟ್ಟುವಿಕೆಯಲ್ಲಿ  ಮತ್ತು ನಿಯಂತ್ರಣದಲ್ಲಿ ಉತ್ತಮ ಸೇವೆ ಸಲ್ಲಿಸಿದ ಐದು ಕೇಂದ್ರದ ಜನರಿಗೆ  ಸನ್ಮಾನಿಸಲಾಯಿತು. 

        ಜಿಮ್ಸ್ ಕಾಲೇಜಿನ ಸಮುದಾಯ ಆರೋಗ್ಯ ವಿಭಾಗದ  ಮುಖ್ಯಸ್ಥ   ಡಾ. ಅರವಿಂದ ಕರಿನಾಗಣ್ಣವರ ಅವರು   ಹೆಚ್.ಐ.ವಿ/ ಏಡ್ಸ್ ರೋಗ ಬರಲು ಕಾರಣ ಹಾಗೂ ತಡೆಗಟ್ಟಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು       ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ಗದಗ ತಾಲೂಕು ಪಂಚಾಯತ್  ಸದಸ್ಯ ಎ.ಆರ್. ನದಾಫ್,  ಸಿದ್ದೇಶ್ವರ ಕಾಲೇಜಿನ ಉಪನ್ಯಾಸಕಿ ಶೃತಿ ಮಾಗುಂಡ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಕಾಲೇಜಿನ ವಿದ್ಯಾಥರ್ಿ ವಿದ್ಯಾಥರ್ಿನಿಯರು ಉಪಸ್ಥಿತರಿದ್ದರು. 

ಡಾ. ಬಿ.ಆರ್. ಅಂಬೇಡ್ಕರ ಜಾನಪದ ಸಾಂಸ್ಕೃತಿಕ ಕಲಾ ತಂಡದವರು ಎಚ್.ಐ.ವಿ. ತಡೆಗಟ್ಟುವಿಕೆ ಕುರಿತು ಜನಪದ ಗೀತೆ ಪ್ರಸ್ತುತಪಡಿಸಿದರು.  ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಚಂದ್ರಕಲಾ ಜೆ ಸರ್ವರನ್ನು ಸ್ವಾಗತಿಸಿದರು. ಅಶೋಕ ಕೋಳಿವಾಡ  ವಂದಿಸಿದರು. ಬಸವರಾಜ ಲಾಳಗಟ್ಟಿ ಕಾರ್ಯಕ್ರಮ ನಿರೂಪಿಸಿದರು.  

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ವಾತರ್ಾ ಇಲಾಖೆ, ಜಿಮ್ಸ ರಕ್ತನಿಧಿ ಕೇಂದ್ರ, ಸಮುದಾಯ ಶಾಸ್ತ್ರ ವಿಭಾಗ, ಜಿಮ್ಸ್,  ಜಿಲ್ಲಾ ಆಸ್ಪತ್ರೆ, ಜಿಲ್ಲಾ  ರೆಡ್ ಕ್ರಾಸ್ ಸಂಸ್ಥೆ,  ಐ.ಎಂ.ಎ ರಕ್ತ ನಿಧಿ ಕೇಂದ್ರ,  ಎನ್.ಎಸ್.ಎಸ್. ಘಟಕ, ಎನ್,ಸಿ.ಸಿ. ಘಟಕ,  ಮದರ ಥೆರೇಸಾ ಸ್ಕೂಲ್ ಆಫ್ ನಸರ್ಿಂಗ್, ಮಹೇಶ್ವರಿ ನಸರ್ಿಂಗ್ ಕಾಲೇಜ್,  ಬಸವೇಶ್ವರ  ಪ್ಯಾರಾ ಮೆಡಿಕಲ್  ಕಾಲೇಜ್, ರಕ್ಷಣೆ ಜಿಲ್ಲಾ ಮಹಿಳಾ ಒಕ್ಕೂಟ, ಸೃಷ್ಟಿ ಸಂಕುಲ ಸಂಸ್ಥೆ, ನವಚೇತನ ಸಂಸ್ಥೆ, ಕೆ.ಕೆ.ಎಸ್.ಬಿ.ಎಸ್.ಡಬ್ಲ್ಯೂ, ಎಂ.ಎಸ್. ಡಬ್ಲ್ಯೂ ಕಾಲೇಜ, ರೆಡ್ ರಿಬ್ಬನ್ ಕ್ಲಬ್, ಸ್ಕೌಟ್ಸ್ ಮತ್ತು ಗೈಡ್ಸ್, ತೋಂಟದ ಸಿದ್ದೇಶ್ವರ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ  ಮಹಾವಿದ್ಯಾಲಯ, ಹಾಗೂ ಶಿಕ್ಷಣ ಇಲಾಖೆ, ಗದಗ ಇವರುಗಳ ಸಹಯೋಗದಲ್ಲಿ     ವಿಶ್ವ ಏಡ್ಸ್ ದಿನಾಚರಣೆಯ  ಜನಜಾಗೃತಿ ರ್ಯಾಲಿ ಹಾಗೂ ಸಮಾರಂಭವನ್ನು ಏರ್ಪಡಿಸಲಾಗಿತ್ತು.


ಸುದ್ದಿ ಓದಿ